Categories: ಮಂಗಳೂರು

ಉಪ್ಪಿನಂಗಡಿ: ಜೀವನದಿ ನೇತ್ರಾವತಿ ನೀರಿನ ಹರಿವು ಇಳಿಮುಖ

ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿ  ನೇತ್ರಾವತಿಯು ಹರಿವಿನಲ್ಲಿ ಇಳಿಮುಖವಾಗಿದ್ದು, ನೀರಿನ ಕೊರತೆ ಎದುರಾಗುವ ಭೀತಿ ಎದುರಾಗಿದೆ.

ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಹರಿವು ಕಡಿದುಕೊಂಡಿತ್ತು. ಸನಿಹದಲ್ಲೇ ಕುಮಾರಧಾರಾ ನದಿ ಸಂಗಮಿಸಿದ ಬಳಿಕ ನೇತ್ರಾವತಿ ಮತ್ತೆ ಹರಿಯುತ್ತಾಳಾದರೂ ಕುಮಾರಧಾರಾ ಸಂಗಮಿಸುವ ಮುನ್ನವೇ ನೇತ್ರಾವತಿ ನದಿಯ ನೀರು ಬತ್ತಿ ಹೋಗಿ ನದಿ ಬರಡಾಗಿದೆ.

ಬಹುತೇಕ ಶ್ರದ್ಧಾಳುಗಳು ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಬಂಧುಗಳ ಅಸ್ಥಿ ವಿಸರ್ಜನೆ ಮಾಡಿ ಪಿಂಡ ಪ್ರದಾನಾದಿ ಕಾರ್ಯಗಳನ್ನು ನೆರವೇರಿಸಿದ ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ನದಿ ಬತ್ತಿ ಹೋದ ಕಾರಣಕ್ಕೆ ಪುಣ್ಯ ತೀರ್ಥ ಸ್ನಾನಕ್ಕೆ ಅಡಚಣೆಯಾಗಿದೆ.

ಕುಮಾರಧಾರಾ ಸಂಗಮಿಸಿದ ಬಳಿಕ ಸ್ನಾನ ಮಾಡುವ ಅವಕಾಶವಿದೆಯಾದರೂ ಸದ್ರಿ ಸ್ಥಳವು ಅಪಾಯಕಾರಿಯಾಗಿರುವುದರಿಂದ ಭಕ್ತರ ಅನುಕೂಲತೆಗಾಗಿ ಸಂಗಮ ಸ್ಥಳದಲ್ಲಿ ಮರಳು ತೆಗೆದು ಹೊಂಡ ಮಾಡಿ ಅಲ್ಲಿ ನೀರು ನಿಲ್ಲುವಂತೆ ತಾತ್ಕಾಲಿಕ ವ್ಯವಸ್ಥೆ  ಕಲ್ಪಿಸಲಾಗಿದೆ. ಪರಿಸರದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆಯಾದರೂ ಬಳಿಕ ವ್ಯಕ್ತಗೊಂಡ ವಾತಾವರಣ ದಲ್ಲಿನ ಭಾರೀ ಉಷ್ಣತೆಯಿಂದಾಗಿ ಜಲ ಮೂಲಗಳೆಲ್ಲವೂ ಬತ್ತಿ ಹೋಗತೊಡಗಿದೆ.

Gayathri SG

Recent Posts

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

4 mins ago

ಬಿಜೆಪಿ ಮತ್ತೆ ಗೆದ್ದರೆ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್‌

ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ಬಿಜೆಪಿ ಗೆದ್ದರೆ, ಮಮತಾ ಬ್ಯಾನರ್ಜಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ…

8 mins ago

ದೆಹಲಿಯಲ್ಲಿ ಬಿರುಗಾಳಿ: ಇಬ್ಬರು ಮೃತ್ಯು, 23 ಮಂದಿಗೆ ಗಾಯ

ಬಿರುಗಾಳಿಗೆ ಇಬ್ಬರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

31 mins ago

ಹೆಚ್ಚಿನ ಫೀಸ್ ತೆಗೆದುಕೊಂಡರೆ ಖಾಸಗಿ ಶಾಲೆಗಳ ವಿರುದ್ಧ ಕ್ರಮ : ಬಂಗಾರಪ್ಪ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಮುಂದಿನ ವಿದ್ಯಾಭ್ಯಸದ ಬಗ್ಗೆ ಈಗಾಗಲೇ ಯೋಚಿಸುತ್ತಿದ್ದಾರೆ

39 mins ago

ವಿದ್ಯಾರ್ಥಿನಿಯ ಹತ್ಯೆ ಪ್ರಕರಣ: ಮರದ ಮೇಲೆ ಬಾಲಕಿಯ ರುಂಡ ಪತ್ತೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಬಾಲಕಿ ರುಂಡ ಪತ್ತೆಯಾಗಿದೆ

45 mins ago

ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಹಣಕ್ಕೆ ಬೇಡಿಕೆ ಇಟ್ಟು ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯೊಂದರಲ್ಲಿ  ಸೆಕೆಂಡ್​ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ…

1 hour ago