Categories: ಮಂಗಳೂರು

ಮಂಗಳೂರು: ಪಾಲಿಸ್ಟರ್ ಧ್ವಜ ಬಳಕೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದ ಯು.ಟಿ.ಖಾದರ್

ಮಂಗಳೂರು: ಭಾರತದ ರಾಷ್ಟ್ರಧ್ವಜ ಕಾಯ್ದೆಗೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಧ್ವಜ ಬಳಕೆಗೆ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ಖಾಲಿ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶಗಳಿಂದ ಪಾಲಿಸ್ಟರ್ ಬಟ್ಟೆಗಳನ್ನು ತಂದು ಗುಡ್ಡೆ ಹಾಕುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚರಕ ಕೇವಲ ಒಂದು ಸಿಂಬಲ್ ಅಲ್ಲ ದೊಡ್ಡ ರಾಜ ಆಡಳಿತವನ್ನು ಕಿತ್ತೆಸೆದ ಸಂಕೇತ. ಖಾದಿ ದೇಶದ ಸ್ವಾತಂತ್ರ ಹೋರಾಟಗಾರರ ತ್ಯಾಗದ ಸಂಕೇತವಾಗಿದೆ. ಈ ದೇಶದಲ್ಲಿ ಯಾವುದೇ ಸರಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ಧತಿ ಇತ್ತು. ಖಾದಿ ತೊಡುವ ಸಂದೇಶವನ್ನು ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಸಾರಬೇಕಿತ್ತು.

ಪಾಲಿಸ್ಟರ್ ಬಟ್ಟೆ ವಿದೇಶದಿಂದ ಆಮದಿಗೆ ಅವಕಾಶ ನೀಡಲಾಗಿದೆ, ಇದರಿಂದ ಚೀನಾ ಲಾಭ ಪಡೆಯುತ್ತಿದೆ. ಸರಕಾರದ ಇಂತಹ  ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನು ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಬೇಕು ಎಂದು ಖಾದರ್ ಆಗ್ರಹಿಸಿದರು.

ಸ್ವಾತಂತ್ರ್ಯದ 75ನೇ ವರ್ಷದ ಹೆಸರಲ್ಲಿ ಹರ್ ಘರ್ ತಿರಂಗಾ ಯೋಜನೆಗೆ ತೀರ್ಮಾನ ಮಾಡಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕಿದೆ. ಈಗ ವಿತರಿಸಲಾಗುತ್ತಿರುವ ರಾಷ್ಟ್ರ ಧ್ವಜಗಳಲ್ಲೂ ಹಲವಾರು ಲೋಪಗಳು ಇದೆ ಎಂದು ಅವರು ಆರೋಪಿಸಿದರು.

ಹರ್ ಘರ್ ತಿರಂಗಾ  ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ, ಇನ್ನೂ ಹಲವರಿಗೆ ಮನೆಯೇ ಇಲ್ಲ, ಅವರು ಬಾವುಟ ಹಾರಿಸುವುದು ಎಲ್ಲಿ ? ಅಂದರೆ ಮನೆಯಿಲ್ಲದವರು ಇದನ್ನು ಆಚರಣೆ ಮಾಡೋದು ಬೇಡವೇ ಎಂದು ಖಾದರ್ ಪ್ರಶ್ನಿಸಿದರು.

Sneha Gowda

Recent Posts

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

8 mins ago

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

8 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

8 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

8 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

8 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

8 hours ago