ಮಂಗಳೂರು

ಮಂಗಳೂರು: ಜನವರಿ 15ರಂದು ನಡೆಯಲಿದೆ “ಸ್ವರ ಸಂಕ್ರಾಂತಿ ಉತ್ಸವ – 23” ಸಂಗೀತ ಕಾರ್ಯಕ್ರಮ

ಮಂಗಳೂರು:  ಮಂಗಳಾದೇವಿಯ ರಾಮಕೃಷ್ಣ ಮಠಕ್ಕೆ ಇದೀಗ 75ನೇ ವರ್ಷದ ಸಂಭ್ರಮ. ಅಮೃತ ಮಹೋತ್ಸವ ಹಾಗೂ ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಮಂಗಳೂರಿನ “ಸ್ವರಾಲಯ ಸಾಧನಾ ಫೌಂಡೇಶನ್” ಸಹಯೋಗದಲ್ಲಿ ಇದೇ ಜನವರಿ 15ರಂದು, ಭಾನುವಾರ ಸಂಜೆ 4.30 ಕ್ಕೆ “ಸ್ವರ ಸಂಕ್ರಾಂತಿ ಉತ್ಸವ – 23” ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶ್ವ ವಿಖ್ಯಾತ ವಯೊಲಿನ್ ಕಲಾವಿದರಾದ ಚೆನ್ನೈನ ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮರೇಶ್ ಅವರು ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ದ್ವಂದ್ವ ವಯೊಲಿನ್ ಕಛೇರಿ ನಡೆಸಿ ಕೊಡಲಿದ್ದಾರೆ. ಮೃದಂಗದಲ್ಲಿ ವಿದ್ವಾನ್ ಆರ್. ಶಂಕರನಾರಾಯಣನ್ ಹಾಗೂ ಘಟಂನಲ್ಲಿ ವಿದ್ವಾನ್ ತ್ರಿಚ್ಚಿ ಕೃಷ್ಣಸ್ವಾಮಿ ಸಹಕರಿಸಲಿದ್ದಾರೆ.

ಸ್ವರ ಸಾಧನಾ ಪ್ರಶಸ್ತಿ – 23
ಇದೇ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಐದು ಮಂದಿ ಹಿರಿಯ ಸಂಗೀತ ಗುರುಗಳಾದ ವಿದುಷಿ ಸತ್ಯವತಿ
ಮುಡಂಬಡಿತ್ತಾಯ, ವಿದ್ವಾನ್ ಎಂ. ನಾರಾಯಣ, ವಿದ್ವಾನ್ ಟಿ. ಜಿ. ಗೋಪಾಲಕೃಷ್ಣನ್, ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಮತ್ತು ವಿದ್ವಾನ್ ತಿರುಚಿ ಕೆ. ಆರ್. ಕುಮಾರ್ ಇವರೆಲ್ಲರಿಗೂ ಸಂಗೀತ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗೆ ಹಾಗೂ ಅವರ ಭಾರತೀಯ ಸಂಸ್ಕೃತಿಯ ಬಹಳ ಪ್ರಮುಖ ಆಯಾಮವಾಗಿರುವ ಸಂಗೀತ ಸರಸ್ವತಿಯ ಅನುಪಮ ಸೇವೆಯನ್ನು ಗುರುತಿಸಿ ಕೃತಜ್ಞತೆ ಗಳೊಂದಿಗೆ “ಸ್ವರ ಸಾಧನಾ ಪ್ರಶಸ್ತಿ – 23” ಯನ್ನು ನೀಡಿ ಗೌರವಿಸಲಾಗುವುದು.

ಈ ಸ್ವರ ಸಂಕ್ರಾಂತಿ ಉತ್ಸವ-23 ಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶ ಲಭ್ಯವಿದ್ದು, ಆಸಕ್ತರು ತಮ್ಮ ಉಚಿತ ಪಾಸ್ ಗಳನ್ನು ರಾಮಕೃಷ್ಣ ಮಠದ ಕಛೇರಿಯಿಂದ ಸ್ವೀಕರಿಸಬಹುದು.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

8 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

8 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago