Categories: ಮಂಗಳೂರು

ಮಂಗಳೂರು: ಪ್ರತ್ಯೇಕ ನಿಗಮ ಸ್ಥಾಪನೆ, ಪ್ರಣವಾನಂದ ಸ್ವಾಮೀಜಿಗೆ ಹೋರಾಟ ಕೈಬಿಡಲು ಆಮಿಷ

ಮಂಗಳೂರು: ಬಿಲ್ಲವ ಈಡಿಗ ನಾಯ್ಕ ಸೇರಿ ಸುಮಾರು ಇಪ್ಪತ್ತಾರು ಪಂಗಡಗಳ ಅಭಿವದ್ಧಿ ದೃಷ್ಟಿಕೋನವಿಟ್ಟು ರಾಜ್ಯಸರಕಾರ ಬ್ರಹ್ಮಶ್ರೀ ನಾರಾಯಣಗುರು ಕೋಶ ಸ್ಥಾಪಿಸಿ ಆದೇಶ ಮಾಡಿದೆ , ಆದರೆ ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಸರಕಾರದ ಆದೇಶ ಪ್ರತಿಯನ್ನು ಹರಿದು ಹಾಕುವ ಮೂಲಕ ಪ್ರಣಾವಾನಂದ ಸ್ವಾಮೀಜಿ ಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎನ್ನುವುದು ಬಿಲ್ಲವ ಈಡಿಗ ಸಮಾಜದ ಬೇಡಿಕೆ ಆದರೆ ಬ್ರಹ್ಮಶ್ರೀ ನಾರಾಯಣ ಗುರು ಕೋಶ ನಮ್ಮ ಸಮುದಾಯದ ಬೇಡಿಕೆ ಅಲ್ಲ ನಾವು ಕೇಳಿದ್ದು ನಿಗಮ ನೀವು ಕೊಡ್ತಾ ಇರೋದು ಕೋಶ , ನೀವು ಮೇಲ್ವರ್ಗದವರು ನಿಗಮ ಕೇಳಿದ್ರೆ ಕೊಡ್ತೀರಿ ನಮಗೆ ಯಾಕೆ ಕೊಡಲ್ಲ .ಸರ್ಕಾರದ ಈ ನಾಟಕದಿಂದ ನಮಗೆ ಸರ್ಕಾರ ದ್ರೋಹ ಬಗೆಯುತ್ತಿದ್ದು ಇಬ್ಬರು ಮಂತ್ರಿಗಳ ಮೌನ ,ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುತಂತ್ರ ರಾಜಕಾರಣದಿಂದ ಬಿಲ್ಲವ ಈಡಿಗ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದು ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಸಮುದಾಯ ವನ್ನು ಬಲಿಕೊಡಬೇಡಿ ಎಂದು ಆದೇಶವನ್ನು ಹರಿದು ಹಾಕುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಆಕ್ರೋಶಭರಿತವಾಗಿ ಮಾತನಾಡಿದ ನಮಗೆ ಬೆದರಿಕೆಯ ಜೊತೆಗೆ ಆಫರ್ ಕೂಡ ಬಂದಿದೆ ವಿಧಾನಸಭೆ ಎಲೆಕ್ಷನ್ ವರೆಗೂ ಇದನ್ನು ನಿಲ್ಲಿಸಿ ಸ್ವಾಮೀಜಿ ನಿಗಮ 25 ಶಾಪ್ ಗಳನ್ನು , ಎಂ ಐಸಿಎಲ್ ನೀವು ಹೇಳಿದವರ ಕಡೆ ಮಾಡಿಕೊಡ್ತೇವೆ 1ಫಾರ್ಚುನರ್ ಕಾರು ಕೊಡುತ್ತೇನೆ ಬೆಂಗಳೂರಿನಲ್ಲಿ 2ಸೈಟ್ ಕೊಡುತ್ತೇನೆಂದು ಹೋರಾಟವನ್ನು ಕೈ ಬಿಡಬೇಕೆಂದು ಹೇಳಿದ್ರು ನಾನು ಅವರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ ಸಂದರ್ಭ ಬಂದಾಗ ಹೇಳ್ತೇನೆ ಹಾಗಾದರೆ ಇದೆಲ್ಲಾ ಯಾತಕ್ಕಾಗಿ ನಮಗೆ ಭಿಕ್ಷೆ ಬೇಡ ಸ್ವಾಮಿ  ಇದೆಲ್ಲಾ ಬೇಕಾಗಿಲ್ಲ. ನಿಮ್ಮ ಭಿಕ್ಷೆ ನಂಬಿ ನಾವಿಲ್ಲ ಮಾಡು ಅಥವಾ ಮಡಿ ಅಂತಾರಲ್ಲ ಹಾಗೆ ನಮ್ಮ ಹೋರಾಟ . ಏನೇ ಆದ್ರೂ ನಾವು ಕೈ ಬಿಡುವುದಿಲ್ಲ ಎಂದು ಕಿಡಿಕಾರಿದರು.

Ashika S

Recent Posts

4ನೇ ಹಂತದ ಮತದಾನ ಅಂತ್ಯ : ಶೇ.62.84 ರಷ್ಟು ಮತದಾನ

ಸೋಮವಾರ ನಡೆದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ 62. 84 ರಷ್ಟು ಮತದಾನವಾಗಿದೆ. 2019ರ…

5 mins ago

ದಿನ ಭವಿಷ್ಯ : ಈ ರಾಶಿಯವರಿಗೆ ಬಂಧುಗಳಿಂದ ಟೀಕೆ ಸಾಧ್ಯತೆ

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು…

18 mins ago

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಿಂದ 3ನೇ ಅವಧಿಗೆ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದಾರೆ. ಹೀಗಾಗಿ ವಾರಣಸಿ ಬಂಧ ಅವರಿಗೆ ವೈಭವದಿಂದ ಸ್ವಾಗತಿಸಲಾಗಿದೆ.…

32 mins ago

ಬ್ರಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆ

ಇಲ್ಲಿನ ಬ್ರಿಮ್ಸ್ ಆವರಣದಲ್ಲಿರುವ ಬ್ರಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ವಿಶ್ವ ಶುಶ್ರೂಷಕರ ದಿನ ಆಚರಿಸಲಾಯಿತು.

8 hours ago

ಮುಂಬೈನಲ್ಲಿ ಹೋರ್ಡಿಂಗ್ ಬಿದ್ದು ಮೂವರು ಸಾವು: 59 ಜನರಿಗೆ ಗಾಯ

ಮುಂಬೈನಲ್ಲಿ ಈ ವರ್ಷದ ಮೊದಲ ಮಳೆಗೆ ಅನಾಹುತ ಸಂಭವಿಸಿದೆ. ಇಂದು ಸಂಜೆ 4.30ರ ಸುಮಾರಿಗೆ ಹೋರ್ಡಿಂಗ್ ಕುಸಿದಿದ್ದರಿಂದ ಸುಮಾರು 100…

9 hours ago

ಸಚಿವ ಹೆಚ್‌.ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

9 hours ago