ಮಂಗಳೂರು

ಮಂಗಳೂರು: ಟೈಲರಿಂಗ್ ವೃತ್ತಿಯ ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರಕಾರ ಬದ್ಧ

ಮಂಗಳೂರು: ಟೈಲರಿಂಗ್ ವೃತ್ತಿಯ ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರಕಾರ ಬದ್ಧವಾಗಿದ್ದು, ಶಾಸಕನ ನೆಲೆಯಲ್ಲಿ ಕಾರ್ಮಿಕರ ಹಾಗೂ ಸರಕಾರದ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಘದ ಪ್ರಮುಖರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ‌ ಶಾಸಕ ಕಾಮತ್, ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಘವು ಅನೇಕ ಬಡ ಕಾರ್ಮಿಕರ ಏಳಿಗೆಗೆ ಸಾಕಷ್ಟು ಬೆಂಬಲ‌ ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದ ಅದೆಷ್ಟೋ ಬಡ ಕುಟುಂಬಗಳು ಇಂದಿಗೂ ಟೈಲರಿಂಗ್ ವೃತ್ತಿಯನ್ನು ಅವಲಂಬಿಸಿದೆ. ಅಂತಹ ಕುಟುಂಬಗಳ ಏಳಿಗೆಗಾಗಿ ಸಂಘವು ಸರಕಾರದ ಸವಲತ್ತುಗಳನ್ನು ಪಡೆಯಲು ಸಹಕಾರ ನೀಡುವ ಕೆಲಸ ಮಾಡುತ್ತಿದೆ ಎಂದು ಸಂಘದ ಚಟುವಟಿಕೆಗಳ ಕುರಿತು ಶ್ಲಾಘಿಸಿದರು.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷರಾದ ಬಿ.ಎ ನಾರಾಯಣ ಮಾತನಾಡಿ, ಜನಪರ ಕಾಳಜಿಯುಳ್ಳ ಶಾಸಕರಾಗಿರುವ ವೇದವ್ಯಾಸ್ ಕಾಮತ್ ಅವರು ನಮ್ಮ ಸಂಘದ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುತ್ತಾರೆ. ಬಡ ಕಾರ್ಮಿಕರ ಸಮಸ್ಯೆಗಳನ್ನು ಮನಗಂಡ ಶಾಸಕರು ಈಗಾಗಲೇ 25 ಹೊಲಿಗೆ ಯಂತ್ರಗಳನ್ನು ನಮ್ಮ ಸಂಘದ ಮೂಲಕ ಒದಗಿಸಿದ್ದಾರೆ. ಸಂಘದ ಬೇಡಿಕೆಯಂತೆ ಈಗಾಗಲೇ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದು, ಹೆಚ್ಚುವರಿ 5 ಲಕ್ಷಗಳ ಬೇಡಿಕೆಯನ್ನು ಪೂರೈಸುವ ಭರವಸೆ ನೀಡಿರುವುದು ಅವರಿಗಿರುವ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಸೋಸಿಯೇಷನ್ ಮೂಲಕ ಬಡ ಕುಟುಂಬಗಳಿಗೆ ಸಾಕಷ್ಟು ಆಹಾರ ಸಾಮಾಗ್ರಿಗಳ‌ ಕಿಟ್ ಒದಗಿಸಿದ್ದು, ಅವರೊಂದಿಗೆ ಸಂಘದ ಪ್ರತಿ ಸದಸ್ಯರು ಸದಾ ಇರುತ್ತೇವೆ ಎಂದು ಹೇಳಿದರು.

ಮೆರವಣಿಗೆಯ ಮೂಲಕ ಬರಮಾಡಿಕೊಂಡ ಸಂಘದ ಪ್ರಮುಖರು ಅಸೋಸಿಯೇಷನ್ ರಾಜ್ಯ ಹಾಗೂ ವಲಯಗಳ ಪ್ರಮುಖರು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆ.ಎಸ್.ಟಿ.ಎ ಕ್ಷೇತ್ರ ಅಧ್ಯಕ್ಷರಾದ ವಿದ್ಯಾ ಶೆಟ್ಟಿ ಅವರು ಕಾರೇಯಕ್ರಮದ ಅಧೇಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ದಕ್ಷಿಣ ಕನ್ನಡ‌ಜಿಲ್ಲಾ ಅಧ್ಯಕ್ಷರಾದ ಜಯಂತ್ ಪುತ್ತೂರು, ಮಂಗಳೂರು ನಗರ ಸಮಿತಿ ಅಧ್ಯಕ್ಷೆ ಪ್ರಭಾ ಮಾಲಿನಿ, ಕೇಶವ ಕದ್ರಿ, ಶಶಿಕಲಾ ಬರ್ಕೆ, ಪ್ರಕಾಶ್ ಪೆರ್ಮಂಕಿ, ಹರೀಶ್ ರೈ, ಚಂದ್ರಹಾಸ, ಕ್ಷೇತ್ರ ಸಮಿತಿಯ ಒಂಬತ್ತು ವಲಯಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ,ಕೋಶಾಧಿಕಾರಿ ಹಾಗೂ ಸರ್ವ‌ ಸದಸ್ಯರು ಉಪಸ್ಥಿತರಿದ್ದರು.

Gayathri SG

Recent Posts

ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್: ವ್ಯಕ್ತಿ ಕಂಗಾಲು

ಬೆಂಗಳೂರಿನ ಜೆಬಿ ಕಾವಲ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಬಂದ ಘಟನೆ ನಡೆದಿದೆ.

2 mins ago

ಜನಪರ ಯೋಜನೆಗಳ ಮೂಲಕ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ : ಹೆಚ್.ಡಿ ತಮ್ಮಯ್ಯ

ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಜನಪರವಾದ ಯೋಜನೆಗಳ ಮೂಲಕ ಮತದಾರರ ವಿಶ್ವಾಸ…

5 mins ago

ಹೊಸ ರುಚಿ: ವೆಜ್ ಮಿಕ್ಸ್ ದೋಸೆ ಮಾಡುವುದು ಹೇಗೆ?

ಏನಾದರೊಂದು ಹೊಸ ರುಚಿ ಬಯಸುವವರು ಮತ್ತು ಮನೆಯಲ್ಲಿಯೇ ಆರೋಗ್ಯ ಕಾಪಾಡುವ ತಿನಿಸುಗಳನ್ನು ಬಯಸುವವರು ವೆಜ್  ಮಿಕ್ಸ್  ದೋಸೆಯನ್ನು ತಯಾರಿಸಬಹುದಾಗಿದೆ.

28 mins ago

ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ  ಸಮೀಪದ  ಕಾಲೇಜಿನ ಐದನೇ ಮಹಡಿಯಿಂದ ವಿದ್ಯಾರ್ಥಿಯೊಬ್ಬ‌  ಜಿಗಿದು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ  ನಡೆದಿದೆ.

39 mins ago

ಕೊಲೆಯಾದ ಅಂಜಲಿ ಮನೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ

ಕೊಲೆಯಾದ ಯುವತಿ ಅಂಜಲಿ ಮನೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ ನೀಡಿದ್ದಾರೆ. ಇದೇ ವೇಳೆ ಇತ್ತೀಚೆಗೆ ಕೊಲೆಯಾದ ನೇಹಾ ಹಿರೇಮಠ…

54 mins ago

ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಿ: ವೆಂಕಟ್ ರಾಜಾ

ಜಿಲ್ಲೆಯಲ್ಲಿ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.

1 hour ago