Categories: ಮಂಗಳೂರು

ಮಂಗಳೂರು: ನಾರಾಯಣಗುರು ಜಯಂತಿ ಆಚರಣೆಗೆ ಯಾರ ಅನುಮತಿ ಅಗತ್ಯವಿಲ್ಲ ಎಂದ ಹರಿಕೃಷ್ಣ ಬಂಟ್ವಾಳ್

ಮಂಗಳೂರು:  ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಾಡಲು ನಾವು ಯಾರನ್ನು ಕೇಳಿ ಮಾಡಬೇಕಾಗಿಲ್ಲ , ಬ್ರಹ್ಮ ಶ್ರೀಗಳು ಒಂದು ಜಾತಿಗೆ ಸೀಮಿತರಾದವರಲ್ಲ ಅವರು ಸಮಸ್ತ ಭಾರತದ ಮಾನವ ಕುಲಕ್ಕೆ ಸೇರಿದವರು ಆದರೆ ಯಾರನ್ನು ಕೇಳಿಕೊಂಡು ಅವರ ಜಯಂತಿ ಮಾಡುವ ಅಗತ್ಯ ಇಲ್ಲ .ಅವರ ಸ್ವಾರ್ಥಕ್ಕೋಸ್ಕರ ಅವರ ರಾಜ್ಯಕ್ಕೋಸ್ಕರ ಜಯಂತಿ ಮಾಡಲಿ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುರು ಬೆಳದಿಂಗಳು ಸೇವಾ ಸಂಸ್ಥೆ ಅಧ್ಯಕ್ಷರ ಪದ್ಮರಾಜ್ ಅವರು ನೀಡಿದ ಹೇಳಿಕೆ ಪದ್ಮರಾಜ್ ಅವರ ಹೆಸರು ಎತ್ತದೆ ಮಾತನಾಡಿ ಈ ವ್ಯಕ್ತಿ ಗೂ ನಮಗೂ ಸಂಬಂಧವಿಲ್ಲ .ಇವರ ನಾರಾಯಣ ಗುರುಗಳು ಯಾರು ಎಂದು ಕೂಡ ನಮಗೆ ತಿಳಿದಿಲ್ಲ ,ಒಂದೇ ಜಾತಿ ಒಂದೇ ದೇವರೆಂದು ಹೇಳಿದ ನಾರಾಯಣಗುರು ಯಾವ ಒಂದು ಜಾತಿಯ ಗೋಡೆ ಇಲ್ಲ.

ಹಿಂದೆ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ ನಾರಾಯಣಗುರುಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಈ ಬಾರಿ ದಕ್ಷಿಣ ಜಿಲ್ಲೆಯ ಆಡಳಿತಕ್ಕೆ ಸಿಎಂ ಆದೇಶದಂತೆ ಅವರ ಜನ್ಮದಿನವನ್ನು ಸಮಸ್ತ ನಾಗರಿಕರ ಸಮ್ಮುಖದಲ್ಲಿ ಮಾಡಬೇಕೆಂದು ಆದೇಶ ಬಂದ ಕಾರಣ ಅದ್ದೂರಿಯಾಗಿ ಆಚರಿಸಲು ತೀರ್ಮಾ ನಿಸಿದ್ದೇವೆ. ಅವರು ಜಾತಿಗೆ ಸೀಮಿತವಾದ ದಾರ್ಶನಿಕರೇ ಅಲ್ಲ ನಮಗೆ ಯಾರಲ್ಲೂ ಕೇಳಿ ಮಾಡುವ ಅಗತ್ಯವಿಲ್ಲ ಇನ್ನೊಬ್ಬರ ಟೀಕೆ ನಮಗೆ ನಗಣ್ಯ. ನಾವು ವಿವಾದ ಮಾಡುವುದಿಲ್ಲ ಕಳೆದ ಬಾರಿ ಗಣರಾಜ್ಯೋತ್ಸವ ಪಠ್ಯಪುಸ್ತಕದಲ್ಲೂ ವಿನಾಕಾರಣ ವಿವಾದ ಎಬ್ಬಿಸಿದರು ಅಲ್ಲಿ ಕಾಂಗ್ರೆಸಿಗರು ಇದ್ದರೆ ವಿನಾ ನಾರಾಯಣಗುರು ಅನುಯಾಯಿಗಳು ಇರಲಿಲ್ಲ ಅವರು ಪ್ರತಿಭಟನೆ ಮಾಡುವವರು ಅಲ್ಲ.

ಈಗ ಬೇರೆ ವಿಚಾರ ಸಿಗದಿರುವುದಕ್ಕೆ ಜನ್ಮ ಜಯಂತಿ ವಿಚಾರದಲ್ಲಿ ವಿವಾದ ಎಬ್ಬಿಸಿದ್ದಾರೆ ಅವರು ಯಾರ ಆಸ್ತಿಯೂ ಅಲ್ಲ ವಿವಾದ ನಮಗೆ ಲೆಕ್ಕಕ್ಕೆ ಇಲ್ಲ .ಇವರ ಆಚರಣೆಗೆ ಸರಕಾರ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಮುಂದೆ ಬೇರೆ ಬೇರೆ ಜಿಲ್ಲೆಯಲ್ಲಿ ನಾರಾಯಣಗುರುಗಳ ಜನ್ಮದಿನೋತ್ಸವ ಆಗುವ ಸೂಚನೆ ಇದೆ ಅದರಂತೆ ಮಾಡುತ್ತೇವೆ ಎಂದು ಹೇಳಿದರು.

ಅದೇನೇ ಆದರೂ ರಾಜ್ಯಮಟ್ಟದಲ್ಲಿ ಸೆಪ್ಟಂಬರ್ 10ರಂದು ನಾರಾಯಣಗುರು ಜಯಂತಿ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.

Ashika S

Recent Posts

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

2 mins ago

ಎಕ್ಸಾಂನಲ್ಲಿ ಫೇಲ್‌ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದೇನೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. . ಫೇಲ್ ಆದ ವಿಚಾರ ಪೋಷಕರಿಗೆ…

26 mins ago

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿದ ಕಮಿ ರೀಟಾ ಶೆರ್ಪಾ

ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌…

36 mins ago

ಭೀಕರ ಅಪಘಾತ : ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ

ಮದುವೆಗೆ ಹೋಗಿ ತಡರಾತ್ರಿ ಮರಳಿ ಬರುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾವಗಡ -ತುಮಕೂರು…

48 mins ago

ಕಡಬ: ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು…

1 hour ago

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

1 hour ago