Categories: ಮಂಗಳೂರು

ಮಂಗಳೂರು: ಮಾ. 29 ರಂದು ವಿಕಸನ ಬೇಸಿಗೆ ಶಿಬಿರ 2023

ಮಂಗಳೂರು: ಮಾ.29ರಂದು ನಗರದ ಶ್ರೀ ಭುವನೇಂದ್ರ ಸಭಾಭವನದಲ್ಲಿ ಕೆನರಾ ಕಲ್ಚರಲ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಹತ್ತು ದಿನಗಳ ವಿಕಸನ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾಕ್ಟರ್ ಶ್ರೀಶಕುಮಾರ್ ದೀಪ ಬೆಳಗಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಯುತ ಎಂ. ರಂಗನಾಥ್ ಭಟ್, ಜೊತೆ ಕಾರ್ಯದರ್ಶಿಗಳಾದ ಶ್ರೀಯುತ ಕೆ.ಸುರೇಶ್ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ನರೇಶ್ ಶೆಣೈ ,ಕೆನರಾ ಕಲ್ಚರಲ್ ಅಕಾಡೆಮಿಯ ಸಂಯೋಜಕರಾದ ಶ್ರೀಯುತ ಶೃತ ಕೀರ್ತಿ, ವಿಕಸನ ಬೇಸಿಗೆ ಶಿಬಿರದ ಸಂಯೋಜಕಿಯಾದ ಶ್ರೀಮತಿ ಮಮತಾ, ಪಿ ಆರ್ ಓ ಶ್ರೀಮತಿ ಉಜ್ವಲ್ ಮಲ್ಯ, ಕೆನರಾ ಶಾಲೆಗಳ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಕವಿತಾ ಮೌರ್ಯಾ, ಶ್ರೀಮತಿ ಲಲನಾ ಶೆಣೈ, ಶ್ರೀಮತಿ ಸುರೇಖಾ ಎಮ್ ಹೆಚ್, ಶಿಕ್ಷಕ ಶಿಕ್ಷಕೇತರ ವೃಂದದವರು, ನೂರಕ್ಕೂ ಮೇಲ್ಪಟ್ಟು ಶಿಬಿರಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿಯಾದ ಶ್ರೀಮತಿ ತೃಪ್ತಿ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಟಕ, ರಂಗಕಲೆ, ಅಜ್ಜಿ ಕಥೆಗಳು, ಕರಕುಶಲ ಚಿತ್ರಕಲೆ, ಆಭರಣ ತಯಾರಿಕೆ, ಜನಪದ ಗೀತೆ ಗಾಯನ ಹಾಗೂ ನೃತ್ಯ, ಮುಖವಾಡ ತಯಾರಿಕೆ, ಪುರಾಣ ಕಥೆ, ಭಗವದ್ಗೀತೆ,ಯೋಗ, ಕುಣಿತ ಭಜನೆ, ದಾಂಡಿಯಾ ನೃತ್ಯ ಮೊದಲಾದ ಹಲವಾರು ಸಕ್ರಿಯ ಚಟುವಟಿಕೆಗಳನ್ನು ಆಯ್ದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಮಕ್ಕಳಿಗಾಗಿ ಸೈಬರ್ ಸೇಫ್ಟಿ, ಟ್ರಾಫಿಕ್ ರೂಲ್ಸ್, ವ್ಯಕ್ತಿತ್ವ ವಿಕಸನ ಮಾಹಿತಿ ಕಾರ್ಯಾಗಾರ ಮೊದಲಾದ ವಿಶಿಷ್ಟ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ವಿಹಾರಕ್ಕಾಗಿ ಪಿಲಿಕುಳ ಪ್ರಾಣಿ ಸಂಗ್ರಹಾಲಯ ಹಾಗೂ ಹೆರಿಟೇಜ್ ವಿಲೇಜ್, ಕೃಷಿ ಮತ್ತು ಹೈನುಗಾರಿಕೆಯ ಅನುಭವ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಜಮಾಡಿಯ ಆಗ್ರೋ ಫಾರ್ಮ್ಸ್ ಮತ್ತು ಗೋಶಾಲೆಗೆ ಶಿಬಿರಾರ್ಥಿಗಳನ್ನು ಕರೆದೊಯ್ಯಲಾಗುವುದು ಮತ್ತು ಪರ್ವತಾರೋಹಣದಲ್ಲಿ ಆಸಕ್ತಿ ಹೊಂದಿರುವ ಶಿಬಿರಾರ್ಥಿಗಳನ್ನು ಬೆಳ್ತಂಗಡಿಯ ಖಾಜೂರು ಫಾರೆಸ್ಟ್ ಗೆ ಕರೆದೊಯ್ಯಲಾಗುವುದು ಎಂದು ಅಕಾಡೆಮಿ ವ್ಯಕ್ತಪಡಿಸಿದೆ.

ಶಿಬಿರಾರ್ಥಿಗಳ ಆಸಕ್ತಿಗೆ ಸರಿಹೊಂದುವಂತಹ ಚಟುವಟಿಕೆಯಿಂದಾಗಿ ಈ ಶಿಬಿರವು ಮಕ್ಕಳ ಮನೋವಿಕಸನದ ಅಭಿವೃದ್ಧಿಗೆ ಪೂರಕವಾಗ ಬಲ್ಲದು ಎಂದು ಅಭಿಪ್ರಾಯಪಡಲಾಗಿದೆ.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

3 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

3 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

3 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

4 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

4 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

4 hours ago