Categories: ಮಂಗಳೂರು

ಮಂಗಳೂರು:  ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸವಾರಿಗೆ ಸಮರ್ಪಕ ಕ್ರಮ

ಮಂಗಳೂರು: ಕಾವೂರು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು ಜನವರಿ 16ರಂದು ದೇವರ ಪಡು ಸವಾರಿ ಕಾರ್ಯಕ್ರಮಕ್ಕೆ ದೇವರ ಮೆರವಣಿಗೆಯಲ್ಲಿ ಯಾವುದೇ ವ್ಯಕ್ತಿಯವಾಗದಂತೆ ಬೇಕಾದ ಕ್ರಮವನ್ನು ಸ್ಥಳೀಯ ಕಾರ್ಪೊರೇಟರ್ ಗಾಯತ್ರಿ ರಾವ್ ಕೈಕೊಂಡಿದ್ದಾರೆ.

ಸ್ಥಳೀಯವಾಗಿ ಶಿವನಗರ ಮಂಜಲ್ ಕಟ್ಟಿಯಲ್ಲಿ ಎಕರೆ ಗಟ್ಟಲೆ ಜಾಗದಲ್ಲಿ ನಿಂತಿದ್ದ ಮಳೆ ನೀರನ್ನು ರಾಜ ಕಾಲುವೆಗೆ ಹರಿದು ಹೋಗುವಂತೆ ಮಾಡಲು ರಸ್ತೆಯನ್ನು ಜೆಸಿಬಿ ಮೂಲಕ ಆಗಿದ್ದು ಪೈಪು ಅಳವಡಿಸಲಾಯಿತು.

ದೇವರು ಪಡುವವರಿ ಹೋಗುವ ಗದ್ದೆಯ ಮಾರ್ಗದಲ್ಲಿ ಮಣ್ಣು ಹಾಕಿ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರ ಕೋರಿಕೆಯಂತೆ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದಂತೆ ಪಡುಸವಾರಿ ನಡೆಯುವುದೆಂದು ಕಾರ್ಪೊರೇಟರ್ ಗಾಯತ್ರಿ ರಾವ್ ನುಡಿದರು.

ನೀರು ನಿಂತ ಜಾಗ ಖಾಸಗಿ ಜಮೀನಾಗಿದ್ದರಿಂದ ತೋಡನ್ನ ಮಾಡಿ ನೀರು ಸರಾಗವಾಗಿ ಹರಿದು ಹೋಗಲು ಸಂಬಂಧಪಟ್ಟ ಮನೆಯವರ ಅನುಮತಿಗಾಗಿ ಕೋರಿಕೊಂಡಿದ್ದೆವು. ಆದರೆ ಕೆಲವೊಂದು ಕಾರಣದಿಂದ ಅನುಮತಿ ನೀಡಲು ವಿಳಂಬ ಮಾಡಿದ್ದರಿಂದ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಾವೇ ಜೆಸಿಬಿಯನ್ನ ತರಿಸಿ ಪೈಪ್ ಲೈನ್ ಅಳವಡಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದೇವೆ. ಈ ಹಿಂದೆ ಇಲ್ಲಿ ಪೈಪ್ ಒಂದನ್ನ ಅಳವಡಿಸಲಾಗಿತ್ತು. ಆದರೆ ಅದನ್ನು ಬಲವಂತವಾಗಿ ತೆಗೆದು ತೋಡನ್ನ ಮುಚ್ಚಿ ಹಾಕಲಾಗಿತ್ತು. ವರ್ಷಗಟ್ಟಲೆ ನೀರು ನಿಂತಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗ ಹರಡುವುದರಿಂದ ಇದರ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡು ದಿಟ್ಟ ಕ್ರಮ ಕೈಗೊಳ್ಳಲಾಗಿದೆ . ಯಾರಾದರೂ ಮತ್ತೆ ಇಲ್ಲಿ ಪೈಪ್ ಅನ್ನ ತೆಗೆದುಹಾಕಿ, ನೀರು ನಿಲ್ಲುವಂತೆ ಉದ್ದೇಶಪೂರ್ವಕವಾಗಿ ಮಾಡಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದ್ದೇನೆ ಎಂದು ಗಾಯತ್ರಿ ರಾವ್ ಹೇಳಿದರು.

ದೇವರ ಪಡು ಸವಾರಿ ವಿಚಾರದಲ್ಲಿ ರಾಜಕೀಯವಾಗಿ ಲಾಭ ಪಡೆಯಲು ವಿರೋಧ ಪಕ್ಷದವರು ಒಬ್ಬರು ಯತ್ನಿಸಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡುವುದಿದ್ದರೂ ಅಡ್ಡಗಾಲು ಹಾಕುತ್ತಿದ್ದಾರೆ ಇದು ಸರಿಯಲ್ಲ ಪಡುಸವಾರಿ ರಸ್ತೆಯ ದುರಸ್ತಿಗೆ ಏಳೆಂಟು ದಿನಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿತ್ತು ಇಲ್ಲಿನ ಸಮಸ್ಯೆಯ ಬಗ್ಗೆಯೂ ಅವರಿಗೆ ಅರಿವಿದೆ. ಖಾಸಗಿ ಜಮೀನಿನ ಮಾರಾಟದ ಸಂದರ್ಭ ನೀರಿನ ಹರಿದು ಹೋಗಲು ಯೋಜನೆ ರೂಪಿಸದೆ ಬೇಕಾಬಿಟ್ಟಿ ಮಾರಾಟ ಮಾಡುತ್ತಿರುವುದರಿಂದಲೂ ಇಂತಹ ಸಮಸ್ಯೆ ಉದ್ಭವಿಸುತ್ತಿದೆ ಎಂದವರು ಆರೋಪಿಸಿದ್ದಾರೆ.

ಸ್ಥಳೀಯ ಹಿರಿಯ ನಾಗರಿಕರು ಈ ಭಾಗದಲ್ಲಿ ಸಮರ್ಪಕ ತೋಡಿನ ವ್ಯವಸ್ಥೆ ಇದ್ದುದನ್ನು ಸ್ಮರಿಸಿಕೊಂಡರು. ರಕ್ಷಿತ್ ಪೂಜಾರಿ ಅವರು ಮಾತನಾಡಿ ದೇವರ ಪಡುಸವರಿಗೆ ಕಾರ್ಪೊರೇಟರ್ ಗಾಯತ್ರಿ ರಾವ್ ಸಮರ್ಪಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಲ್ಲಿ ಖಾಸಗಿ ಜಮೀನು ಇದ್ದುದರಿಂದ ಪರ್ಯಾಯವಾಗಿಯೂ ರಸ್ತೆ ಮಾರ್ಗವನ್ನು ನಾವು ಗುರುತಿಸಿದ್ದೆವು. ಇದೀಗ ಸಮಸ್ಯೆ ಬಗೆಹರಿದಿದ್ದು ಮಾನಪಾ ಸದಸ್ಯರಿಗೆ ಹಾಗೂ ಶಾಸಕರಿಗೆ ಕ್ಷೇತ್ರದ ಭಕ್ತರ ಪರವಾಗಿ ಕೃತಜ್ಞತೆ ಅರ್ಪಿಸುವುದಾಗಿ ನುಡಿದರು.

ಸ್ಥಳೀಯ ಬಿಜೆಪಿ ಮುಖಂಡರಾದ ಅಶ್ವಿನ್ ಅವರು ಕೆಲಸ ಕಾರ್ಯಗಳನ್ನು ನಿರ್ವಹಿಸಿದರು. ಶಾಸಕ ಡಾ.ವೈ.ಭರತ್ ಮತ್ತು ಮೇಯರ್ ಜಯಾನಂದ ಅಂಚನ್ ಅವರ ಸಹಕಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಯಿತು.

Sneha Gowda

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

3 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

3 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

5 hours ago