Categories: ಮಂಗಳೂರು

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ತೀವ್ರ ಜಟಾಪಟಿ, ನೂರಾರು ಮಂದಿ ಬಂಧನ

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಪೊಲೀಸರ ಸರ್ಪಗಾವಲನ್ನು ಲೆಕ್ಕಿಸದೆ ಮುತ್ತಿಗೆ ಹಾಕಿದ್ದಾರೆ ಸುಮಾರು. ಒಂದು ಗಂಟೆ ಕಾಲ ಟೋಲ್ ಗೇಟನ್ನು ಬಂದ್ ಮಾಡಿದ್ದು, ಬಳಿಕ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಕೊನೆಗೆ ನೂರಾರು ಮಂದಿಯನ್ನು ಪೊಲೀಸರು ಬಲ ಪ್ರಯೋಗಿಸಿ ಬಂಧಿಸಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಕಾಂಗ್ರೆಸ್, ಕಮ್ಯುನಿಸ್ಟ್ , ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ವಿವಿಧ ಪಕ್ಷಗಳ ಕಾರ್ಯಕರ್ತರು ಟೋಲ್ ಗೇಟ್ ಮುಂಭಾಗದಲ್ಲಿ ಸೇರಿದ್ದರು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ವಿರುದ್ಧ ಧಿಕ್ಕಾರ ಘೋಷಣೆ ರಾಜೀನಾಮೆ ಒತ್ತಾಯದ ಘೋಷಣೆಯ ಬಳಿಕ ಬಿಜೆಪಿ ಸರಕಾರ ಬಿಜೆಪಿ ಪಕ್ಷದ ವಿರುದ್ಧ ಘೋಷಣೆಗಳು ಕೇಳಿಬಂದವು. 40% ಸರ್ಕಾರ ಟೋಲ್ ಗೇಟ್ ತೆರವು ಮಾಡಲಾಗದ ಸಂಸದರು ಬೇಡ ಎನ್ನುವ ಘೋಷಣೆಗಳನ್ನು ಕೂಗಲಾಯಿತು.

ಅನಂತರ ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಲೆಕ್ಕಿಸದೆ ರಸ್ತೆಗೆ ನುಗ್ಗಿ ಬಂದಿದ್ದು ಟೋಲ್ ಗೇಟಿನತ್ತ ಧಾವಿಸಿದರು. ಪೊಲೀಸರು ಅಡ್ಡ ನಿಂತು ಜಟಾಪಟಿ ನಡೆಸಿದ್ದಾರೆ ಪೋಲಿಸರನ್ನು ದೂಡಿಕೊಂಡೆ ಕೆಲವು ಕಾರ್ಯಕರ್ತರು ಮುಂದಾಗಿದ್ದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಟೋಲ್ಗೇಟ್ ಪೆಟ್ಟಿಗೆಯ ಮೇಲೆ ಹತ್ತಿ ಘೋಷಣೆ ಕೂಗಿದರು, ಅಲ್ಲದೆ ಕೆಲವು ಕಾರ್ಯಕರ್ತರು ಟೋಲ್ ಗೇಟ್ ಕಂಬಗಳನ್ನು ಒಡೆಯುವ ಪ್ರಯತ್ನ ಮಾಡಿದರು ಅಷ್ಟರಲ್ಲಿ ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಟೋಲ್ ಗೇಟ್ ಒಡೆಯಲು ಯತ್ನಿಸಿದವರನ್ನು ದೂಡುತ್ತಾ ಬಂದಿದ್ದು ಬಂಧಿಸಲು ಸೂಚಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಜಟಾಪಟಿ ನಡೆಯಿತು ತಳ್ಳಾಟ ನಡೆದು ಪೊಲೀಸರ ಒಂದು ಹಂತದಲ್ಲಿ ಕೈಚೆಲ್ಲುವಂತಾಯಿತು.

ಜನರು ಎಲ್ಲ ಕಡೆಯಿಂದಲೂ ನುಗ್ಗಿ ಬಂದಿದ್ದು ಪೋಲಿಸರ ಮೇಲೆಯೇ ಹೊರಗೋಡುವಂತಾಗಿತ್ತು ಅನಂತರ ಪೋಲಿಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಬಂದಿದ್ದು ನೆಲದಲ್ಲಿ ಕುಳಿತಿದ್ದ ಮುಖಂಡರು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದರು. ಕುಳಿತಿದ್ದ ಐವನ್ ಡಿಸೋಜಾ ಟೋಲ್ ಗೇಟ್ ಹತ್ತಿರ ಮಿಥುನ್ ರೈ ಮುನೀರ್ ಕಾಟಿಪಳ್ಳ ಅವರನ್ನು ಎತ್ತಿಕೊಂಡೇ ಹೋಗಿ ಪೋಲಿಸ್ ಬಸ್ನಲ್ಲಿ ಬಂಧಿಸಿದರು. ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ನೆಲದಲ್ಲಿ ಮಲಗಿ ಹೈಡ್ರಾಮ ನಡೆಸಿದರು. ಮಹಿಳಾ ಪೋಲಿಸರು ಅವರನ್ನು ಬಲವಂತದಿಂದ ಎತ್ತಿಕೊಂಡು ಹೋಗಲು ಯತ್ನಿಸಿದ್ದು ಪ್ರತಿಭಾ ಅವರು ಕಿರುಚಾಡಿದ್ದಾರೆ.

ಪ್ರತಿಭಟನಾಕಾರರು ಮಹಿಳೆ ಮೇಲೆ ಯಾಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನೆಲದಲ್ಲಿ ಮಲಗಿದ ಪ್ರತಿಭಾ ಅವರನ್ನು ಎಳೆದುಕೊಂಡೇ ಬಸ್ಸಿಗೆ ಹಾಕಿದ್ದಾರೆ. ನಿತ್ರಾಣರಾಗಿ ಕುಸಿತಕ್ಕೆ ಒಳಗಾಗಿದ್ದಾರೆ ಅಲ್ಲಿದ್ದ ಕೆಲವು ರವರೆಗೆ ನೀರು ಹಾಕಿ ಆಸರೆ ನೀಡಿದ್ದಾರೆ. ಅನಂತರ ಒಬ್ಬೊಬ್ಬರನ್ನು ರಸ್ತೆಯಿಂದ ತೆರವು ಮಾಡಿದ್ದು ನಾಲ್ಕೈದು ಬಸ್ಸುಗಳಲ್ಲಿ 150 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಪಾಂಡೇಶ್ವರ ಪಣಂಬೂರು ಠಾಣೆಗೆ ಕರೆದೊಯ್ದಿದ್ದಾರೆ. ದೂರ ನಿಂತಿದ್ದ ಮಹಿಳೆಯರು ಒಂದಷ್ಟು ಯುವಕರು ಚದುರಿದ್ದಾರೆ ಜಟಾಪಟಿ ಸಂದರ್ಭ ಅಬ್ದುಲ್ ಖಾದರ್ ಎಂಬ ಯುವಕನಿಗೆ ಪೊಲೀಸರ ಲಾಠಿ ಏಟು ಬಿದ್ದು ಗಾಯಗೊಂಡಿದ್ದು ಪ್ರತಿಭಟನಕಾರರು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಟೋಲ್ ಗೇಟ್ ತೆರವು ನೆಪದಲ್ಲಿ ಜನರು ಪೊಲೀಸರೊಂದಿಗೆ ಜಟಾಪಟಿ ನಡೆದಿದ್ದು ಪೊಲೀಸರ ಬಲ ಪ್ರಯೋಗ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ – ಟೋಲ್ ಗೇಟ್ ಅಕ್ರಮ ತೆರವು ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಹೇಳಿದ ಬಳಿಕವೂ ಮೀನಮೇಷ ಎಣಿಸುತ್ತಿರುವುದು ಖಂಡಿಸಿ ಜನರು ಟೋಲ್ ಗೇಟ್ ವಿರೋಧಿ ಸಮಿತಿ ಹೆಸರಿನಲ್ಲಿ ಪಕ್ಷಭೇದ ಮರೆತು ಮುತ್ತಿಗೆ ಹಾಕಿದ್ದಾರೆ ಆದರೆ ಜಿಲ್ಲಾಡಳಿತ ನೂರಾರು ಪೊಲೀಸರ ಮುಂದಿಟ್ಟು ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದು ಜಿಲ್ಲೆಯ ಆಡಳಿತ ಬಗ್ಗೆ ನೆಗೆಟಿವ್ ಸಂದೇಶ ನೀಡಿದಂತಾಗಿದೆ.

Gayathri SG

Recent Posts

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

42 mins ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

1 hour ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

1 hour ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

2 hours ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

2 hours ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

2 hours ago