Categories: ಮಂಗಳೂರು

ಮಂಗಳೂರು:  ಪಚ್ಚನಾಡಿ ಮಂದಾರ ಸಂತ್ರಸ್ತರಿಗೆ ಪೂರ್ಣ ಪರಿಹಾರ ಇನ್ನೂ ಮರೀಚಿಕೆ

ಮಂಗಳೂರು: ಪಚ್ಚನಾಡಿಯ ಕಸದ ರಾಶಿ ಕುಸಿದು ಮಂದಾರ ಪ್ರದೇಶದಲ್ಲಿ ಇಪ್ಪತ್ತೇಳು ಕುಟುಂಬಗಳ ಬದುಕಿನ ಹಕ್ಕು ಕಸಿದುಕೊಂಡು ಘಟನೆಯ 3ವರ್ಷಗಳು ಪೂರೈಸುತ್ತಿವೆ. ಕಳೆದ ವರ್ಷ ಮಧ್ಯಂತರ ಪರಿಹಾರ ನೀಡಿರುವುದು ಬಿಟ್ಟರೆ ಇನ್ನು ಈ ಕುಟುಂಬದವರಿಗೆ ಪೂರ್ಣ ಪರಿಹಾರ ಅಂತಿಮಗೊಂಡಿಲ್ಲ. 2ಸಾವಿರದ ಹತ್ತೊಂಬತ್ತರ ಆಗಸ್ಟ್ ಐದರಂದು ಪಚ್ಚನಾಡಿಯಲ್ಲಿ ಕೆಲವು ದಶಕಗಳಿಂದ ರಾಶಿ ಬಿದ್ದು ಪರ್ವತ ಬೆಟ್ಟದಷ್ಟು ಬೆಳೆದು ನಿಂತಿದ್ದ ತ್ಯಾಜ್ಯವೆಲ್ಲ ಮಳೆನೀರಿನೊಂದಿಗೆ ಕುಸಿದು ಮನೆ ,  ಕೃಷಿ ,  ಭೂಮಿ , ಬಾವಿ ಇತ್ಯಾದಿಗಳೆಲ್ಲ ನಾಶವಾಗಿದ್ದವು.

1ಕಿಲೋಮೀಟರ್ ದೂರ ವರೆಗೂ ಈ ಕಸದ ರಾಶಿ ಕುಸಿದು ಇಲ್ಲಿನ ಕೃಷಿಕರ ಸಮೃದ್ಧ ಭೂಮಿಯ ಮೇಲೆ ಕುಳಿತಿದ್ದರಿಂದ ಅವರೆಲ್ಲ ಬದುಕಿನ ದಾರಿ ಇಲ್ಲದೆ ಸೋತಿದ್ದಾರೆ .ಪ್ರಸ್ತುತ ಕೆಎಚ್ ಬಿ ಕಾಲನಿಯಲ್ಲಿ ಒಂದಿಷ್ಟು ಮಂದಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿದ್ದರೆ ಅನೇಕರು ತಮ್ಮ ಭೂಮಿ ಬಿಟ್ಟು ಬರಲಾಗದೆ ಅಲ್ಲಿಯೇ ಮರಳಿದ್ದಾರೆ.

ಆರಂಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರಳಿ ನಿವಾಸಿಗಳಿಂದ ದಾಖಲೆಗಳನ್ನು ಸಂಗ್ರಹಿಸಿದ್ದರು ಆದರೆ ಆಗ ಬೆಳೆ ನಷ್ಟಕ್ಕೆ ಮಾತ್ರವೇ ಪರಿಹಾರ ನೀಡಿದ್ದರು . ಮುಂದೆ ಯಾವುದೇ ಕ್ರಮ ಆಗದೇ ಇದ್ದುದನ್ನು ಗಮನಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಾನವೀಯ ನೆಲೆಯಲ್ಲಿ ಹೈಕೋರ್ಟ್ ಮೂಲಕ ಪರಿಹಾರ ಒದಗಿಸಲು ಮುಂದಾಯಿತು ಹಾಗೆ ಇಪ್ಪತ್ತೇಳು ಕುಟುಂಬಗಳಿಗೆ ಒಟ್ಟು 14ಕೋಟಿ₹ನಷ್ಟ ಮೊತ್ತವನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ವಿತರಿಸಲಾಗಿತ್ತು ಆ ಬಳಿಕ ಯಾವುದೇ ಪರಿಹಾರ ವಿತರಣೆ ನಡೆದಿಲ್ಲ .

ಹಿಂದೆ ಭೂಮಿಯ ಮಾಲಕತ್ವಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರ ಪಡೆದಿದ್ದರು ಕೆಲವು ದಿನಗಳ ಹಿಂದೆ ಕೇಳಿದಾಗ ದಾಖಲೆಗಳಿಲ್ಲ ಎನ್ನುತ್ತಿದ್ದರು ಈಗ ಮತ್ತೆ ಅನಿವಾರ್ಯ ಪ್ರಕ್ರಿಯೆಗಾಗಿ ದಾಖಲೆಗಳನ್ನು ನೋಟರಿ ಸಹಿ ಮಾಡಿಸಿ ನೀಡಲು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ .

ಸದ್ಯ ಆ ಭಾಗದಲ್ಲಿ ಸೆನ್ಸಿಗೆ 2ಪಾಯಿಂಟ್ 5ಲಕ್ಷ₹ಸರಕಾರಿ ಮೌಲ್ಯ , ಮಾರುಕಟ್ಟೆ ದರ 4ಲಕ್ಷ₹ಆದರೆ ಅಷ್ಟನ್ನು ನೀಡಲಾಗದು ಎಷ್ಟು ಸಾಧ್ಯವೋ ಅಷ್ಟು ನೀಡುವುದಾಗಿ ಹಾಗೂ ಆ ಮೊತ್ತ ನೇರವಾಗಿ ಸಂತ್ರಸ್ತರ ಖಾತೆಗೆ ಬರುತ್ತದೆ ಅದಕ್ಕೆ ಯಾವುದೇ ಆಕ್ಷೇಪ ಇದ್ದರೆ ಕೋರ್ಟ್ ನಲ್ಲಿ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಮೊತ್ತ ಎಷ್ಟು ಎನ್ನುವುದು ನಮಗೆ ತಿಳಿಸಿದರೆ ಅನುಕೂಲವಿತ್ತು ಎನ್ನುತ್ತಾರೆ ಮನೆ ಕಳೆದುಕೊಂಡವರು.

Sneha Gowda

Recent Posts

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

18 mins ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

38 mins ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

8 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

9 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

9 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

9 hours ago