ಮಂಗಳೂರು: ಮದರ್ಸ್ ಡೇ ಅಂಗವಾಗಿ ಉಪಾಸನಾ ಡ್ಯಾನ್ಸ್ ಅಕಾಡೆ, ನ್ಯೂಸ್ ಕರ್ನಾಟಕ ಮಾಧ್ಯಮ ಸಂಸ್ಥೆ ಆಶ್ರಯದಲ್ಲಿ ಮೇ 13ರಂದು “ಡಾನ್ಸ್ ಫಾರ್ ಎ ಹ್ಯಾಪಿ ಲೈಫ್” ಕಾರ್ಯಕ್ರಮ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಸ್ಕೂಲ್ ಸಭಾಂಗಣದಲ್ಲಿ ತಾಯಂದಿರು ಮತ್ತು ಮಕ್ಕಳಿಗಾಗಿ ಡ್ಯಾನ್ಸ್ ಮತ್ತು ಹಾಡುಗಾರಿಕೆ ಸ್ಪರ್ಧೆ ಆಯೋಜಿಸಲಾಗಿದೆ.
ಸುರತ್ಕಲ್ ಜೇಸಿ ಸಂಸ್ಥೆ ಕಾರ್ಯಕ್ರಮ ಸಹಯೋಗ ವಹಿಸಿಕೊಂಡಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿಯಿಲ್ಲ, ಯಾವುದೇ ಭಾಷೆಯಲ್ಲಿ ಹಾಡು, ಮತ್ತು ಡ್ಯಾನ್ಸ್ ಹಿನ್ನಲೆ ಗಾಯನಕ್ಕೆ ಅವಕಾಶವಿದೆ. ಒಂದು ಡ್ಯಾನ್ಸ್ಗೆ 4 ನಿಮಿಷಗಳ ಅವಧಿ ಒದಗಿಸಲಾಗುವುದು. ಹಿನ್ನಲೆ ಸಂಗೀತದೊಂದಿಗೆ ಅಥವಾ ಸಂಗೀತ ಇಲ್ಲದೆಯೇ 3 ನಿಮಿಷಗಳ ಗಾಯನಕ್ಕೆ ಅವಕಾಶವಿದೆ. ಈ ವೇಳೆ ಸ್ಪಾಟ್ ಗೇಮ್ ಗಳನ್ನು ಏರ್ಪಡಿಸಲಾಗುತ್ತದೆ. ಜೊತೆಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.