News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಮಹಿಳಾ ದಿನಾಚರಣೆ ಹಿನ್ನೆಲೆ ಅಮ್ಮಂದಿರಿಗಾಗಿ ಕೋಲ್ಡ್ ಬೌಲ್ ಸ್ಪರ್ಧೆ

cold-bowl-competition-for-moms-on-the-occasion-of-womens-day
Photo Credit : News Kannada

ಮಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನ್ಯೂಸ್ ಕರ್ನಾಟಕ ಮತ್ತು ಮಾಮ್ಸ್ ಆಫ್ ಮಂಗಳೂರು ಸಹಯೋಗದಲ್ಲಿ ಮಾರ್ಚ್ 4ರಂದು ಅಮ್ಮಂದಿರಿಗಾಗಿ ಕೋಲ್ಡ್ ಬೌಲ್ (ಕುಕ್ ವಿದೌಟ್ ಫೈರ್) ಕಾರ್ಯಕ್ರಮ ಮಂಗಳೂರಿನ ಪಾಂಡೇಶ್ವರ ಫಿಜಾ ನೆಕ್ಸಸ್ ಮಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.

ಮಂಗಳೂರಿನ ಫಿಜಾ ಬೈ ನೆಕ್ಸಸ್  ಮಾಲ್ ಪಾಂಡೇಶ್ವರದ ಫುಡ್ ಕೋರ್ಟ್‍ನಲ್ಲಿ ಮಾರ್ಚ್ ನಾಲ್ಕರಂದು ನಡೆದ ಕುಕ್ ವಿದೌಟ್ ಫೈರ್ (ಕೋಲ್ಡ್ ಬೌಲ್) ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಅಮ್ಮಂದಿರು ಭಾಗವಹಿಸಿದ್ದರು. ವಿವಿಧ ಭಕ್ಷ್ಯಗಳನ್ನು ಬೆಂಕಿಯಿಲ್ಲದೆ ತಯಾರಿಸಿ ತಮ್ಮ ಕೈಚಳಕ ತೋರಿದರು.

ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಮಂಗಳೂರು ರೆಸಿಪಿಯ ಜ್ಯೋತ್ಸ್ನಾ  ಬೇಕರ್ಸ್ ಟ್ರೀಟ್‍ನ ಕೇಕ್ ಬೇಕರ್ ಸ್ಪೆಷಲಿಸ್ಟ್ ಮರಿಯಮ್, ಪೋಗೋಸ್ ಕುಕ್‍ಹೌಸ್‍ನ ಪೂರ್ವ ಭಾಗವಹಿಸಿದ್ದರು.

ಕೋಲ್ಡ್ ಬೌಲ್ ಸ್ಪರ್ಧೆಯಲ್ಲಿ ಲಕ್ಷ್ಮಿ ಹಾಗೂ ಶ್ವೇತ ಸ್ಪರ್ಧಿಗಳು ಪ್ರಥಮ ಬಹುಮಾನ ಪಡೆದರು. ಜೆಸಿಂತ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡರು. ತೃತೀಯ ಸ್ಥಾನವನ್ನು ಅಕ್ಷಿತಾ ಶೆಟ್ಟಿ ಮತ್ತು ಜಯಶ್ರೀ ಪಡೆದುಕೊಂಡರು.  ಅರುಣ ಮಸಾಲ ಹಾಗೂ ಚೇತನಾಸ್ ಬ್ಯೂಟಿ ಲಾಂಜ್ ಮತ್ತು ಎಜ್ಯುಕೇಶನ್ ಫೌಂಡೇಶನ್ ಕಾರ್ಯಕ್ರಮ ದ ಸಹ ಪ್ರಾಯೋಜಕತ್ವ ವಹಿಸಿದ್ದರು.  ಸ್ವಸ್ಥ ಕುಕ್ ವೇರ್ ಮತ್ತು ರಾಯಲ್ ಬೈ ಮೆಟಲ್ ಮಾರ್ಟ್ ಬಹುಮಾನಗಳ ಪ್ರಾಯೋಜಕರಾಗಿದ್ದರು.

ಮೆಟಲ್ ಮಾರ್ಟ್ ಮಾಲಕರಾದಕೆ ಸುರೇಂದ್ರ ಶೆಣೈ ಚೇತನಾ ಬ್ಯೂಟಿ ಲಾಂಜ್ ಮಾಲಕಿ ಚೇತನಾ ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯೂಸ್ ಕರ್ನಾಟಕದ ಎಕ್ಸಿಕ್ಯೂಟಿವ್ ಮ್ಯಾನೇಜರ್ ಕೆನ್ಯೂಟ್ ಜೀವನ್ ಪಿಂಟೋ ಮಾರ್ಕೆಟಿಂಗ್ ವಿಭಾಗದ ಆಲ್ಡ್ರಿನ್ ಪ್ರತಿಮಾ, ಲೊಲಾಕ್ಷಿ ಹಾಗೂ ಮಾಮ್ಸ್ ಆಫ್ ಮಂಗಳೂರಿನ ನಯನಾ ಮೆಲ್ಬಾ, ಭಾನುಪ್ರಿಯ ಮತ್ತಿತರರು ಉಪಸ್ಥಿತರಿದ್ದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು