News Karnataka Kannada
Monday, April 29 2024
ಮಂಗಳೂರು

ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆ. ಪೃಥ್ವಿರಾಜ್ ರೈ ಆಯ್ಕೆ

Untitled 2 Recovered
Photo Credit :

ಮಂಗಳೂರು:  ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಕೆ. ಪೃಥ್ವಿರಾಜ್ ರೈ ಆಯ್ಕೆಯಾಗಿದ್ದಾರೆ. 2022ರ ಜೂನ್ 10ರಂದು ನಡೆದ ಚುನಾವಣೆಯಲ್ಲಿ ಅವರು ತಮ್ಮ ಎದುರಾಳಿ ಅರುಣ್ ಬಂಗೇರ ಅವರನ್ನು ಸೋಲಿಸಿ ಜಯ ಗಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಹಿರಿಯ ವಕೀಲ ಹಾಗೂ ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ ಆಯ್ಕೆಯಾಗಿದ್ದಾರೆ. ಅವರು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಅವರನ್ನು ಸೋಲಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂರು ವಕೀಲರು ಸ್ಪರ್ಧಿಸಿದ್ದು, ಶ್ರೀಧರ ಎಣ್ಮಕಜೆ ಎಲ್ಲರನ್ನೂ ಮೀರಿಸಿ ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಶಶಿರಾಜ್ ರಾವ್ ಕಾವೂರು ಚುನಾಯಿತರಾದರು. ಅವರು ತಮ್ಮ ಪ್ರತಿಸ್ಪರ್ಧಿ ಪ್ರವೀಣ್ ಅದ್ಯಪಾಡಿ ಮತ್ತು ಇತರ ಇಬ್ಬರನ್ನು ಸೋಲಿಸಿ ಈ ಸ್ಥಾನಕ್ಕೆ ಏರಿದರು. ಮಹಿಳಾ ಮೀಸಲು ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಚೈತ್ರಾ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪ್ರಸಾದ್ ಪೂಜಾರಿ, ರೇಷ್ಮ ಡಿ ಸೋಜ, ಸುಹಾಸ್ ಶೆಟ್ಟಿ (3 to 10 ವಿಭಾಗದಲ್ಲಿ), ಶುಕರಾಜ್ ಕೊಟ್ಟಾರಿ, ಶೀತಲ್, ವಿಕ್ರಮ ಪಡ್ವೆಂತಾಯ (10 to 20 ವಿಭಾಗದಲ್ಲಿ), ದಿನಕರ ಶೆಟ್ಟಿ, ಈಶ್ವರ್ ಕೊಟ್ಟಾರಿ, ಶ್ರೀಕುಮಾರ್ (Above 20 ವಿಭಾಗದಲ್ಲಿ- ಅವಿರೋಧ), ವಾಸುದೇವ ಗೌಡ, ಬೇಬಿ ಅರಸ, ದೇವದಾಸ್ ರಾವ್ (Above 30), ಮಹಿಳಾ ವಿಭಾಗದಲ್ಲಿ ಸ್ವಾತಿ, ಜೀಟಾ ಪ್ರಿಯಾ ಮೋರಸ್(ಅವಿರೋಧ), ಸುಮನಾ ಶರಣ್ ಆಯ್ಕೆಯಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು