Categories: ಮಂಗಳೂರು

ಮಂಗಳೂರು: ಎ.ಬಿ.ಶೆಟ್ಟಿ ವೃತ್ತವನ್ನು ಅಭಿವೃದ್ಧಿಪಡಿಸಲು ಮುಂದಾದ ಬ್ಯಾಂಕ್ ಆಫ್ ಬರೋಡಾ

ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎ.ಬಿ.ಶೆಟ್ಟಿ ವೃತ್ತವನ್ನು ಈ ಹಿಂದೆ ವಿಜಯ ಬ್ಯಾಂಕ್ ವತಿಯಿಂದ ಹಾಲಿ ಇರುವ ಜಂಕ್ಷನ್‌ನಲ್ಲಿ ವೃತ್ತವನ್ನು ಅಭಿವೃದ್ಧಿ ಪಡಿಸಲಾಗಿದ್ದು, ತದನಂತರ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸದ್ರಿ ಯು.ಪಿ.ಮಲ್ಯ ರಸ್ತೆಯಿಂದ ಹ್ಯಾಮಿಲ್ಟನ್ ರಸ್ತೆಯನ್ನು ಏಕಮುಖ ಸಂಚಾರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.

ಅದರಂತೆ ಈ ಹಿಂದೆ ಇದ್ದ ಎ.ಬಿ.ಶೆಟ್ಟಿ ವೃತ್ತ ಮರು ನಿರ್ಮಾಣ ಮಾಡಲು ತಾಂತ್ರಿಕ ಸಮಾಲೋಚಕರ ವಿನ್ಯಾಸದಂತೆ ಪ್ರಸ್ತಾಪಿಸಲಾಗಿದೆ. ಅದರಂತೆ ಸದ್ರಿ ಎ.ಬಿ.ಶೆಟ್ಟಿ ವೃತ್ತವನ್ನು ಪ್ರಸ್ತುತ ಅಭಿವೃದ್ಧಿಪಡಿಸಲು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನವರು ಮುಂದೆ ಬಂದಿದ್ದು, ವಿಶೇಷ ವಿನ್ಯಾಸದಂತೆ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು, ಈ ಹಿಂದೆ ಇದ್ದ ಎ.ಬಿ.ಶೆಟ್ಟಿ ವೃತ್ತದ ಹೆಸರಿನಲ್ಲಿಯೇ ಸದ್ರಿ ಬ್ಯಾಂಕ್ ನವರು ಅಭಿವೃದ್ಧಿಪಡಿಸಲು ಒಪ್ಪಿರುತ್ತಾರೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.

ಮುಂದುವರೆದು ಬಲ್ಮಠದಲ್ಲಿರುವ ಅಂಬೇಡ್ಕರ್ ಜಂಕ್ಷನ್ ಭಾಗವನ್ನು ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದ್ದು, ಸದ್ರಿ ಡಾ|| ಬಿ.ಆರ್.ಅಂಬೇಡ್ಕರ್ ಜಂಕ್ಷನ್ ಭಾಗದಲ್ಲಿನ ಒಳ ವಿನ್ಯಾಸ ಹಾಗೂ ಡಾ||ಬಿ.ಆರ್.ಅಂಬೇಡ್ಕರ್ ವೃತ್ತವನ್ನು ಮ.ನ.ಪಾ ವತಿಯಿಂದ ಅಭಿವೃದ್ಧಿಯ ಪ್ರಸ್ತಾವನೆಯು ಅನುಮೋದನೆಗೊಂಡಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಮಹಾಪೌರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Ashika S

Recent Posts

ಬೈಕ್ ಗೆ ಬಸ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯ ಬರುವ ಅಣ್ಣಿಗೇರಿ ಸಮೀಪ ಕೊಂಡಿಕೊಪ್ಪ ಕ್ರಾಸ್‌ ಬಳಿ ಬಸ್‌ ಚಾಲಕ ರಾಂಗ್…

27 seconds ago

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರದ ದ್ವಜಸ್ತಂಭ ಪ್ರತಿಷ್ಠಾಪನೆ

ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ…

2 mins ago

ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

ಗಚ್ಚಿನಗಕಟ್ಟಿ ಕಾಲೋನಿಯಿಂದ ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ…

6 mins ago

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕತ್ತೆ ಕಿರುಬ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕತ್ತೆ ಕಿರುಬ ( ಹೈನಾ ) ಶ್ವಾನ ಕಾಣಿಸಿಕೊಂಡಿದೆ.

16 mins ago

ಲೋಕಸಭಾ ಚುನಾವಣೆ : ಮತದಾರನಿಗೆ ಕಾಂಗ್ರೆಸ್​ ಶಾಸಕನಿಂದ ಕಪಾಳಮೋಕ್ಷ

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಶಾಸಕ ಎ ಶಿವಕುಮಾರ್ಮ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ…

24 mins ago

ಧರ್ಮ ಪಾಲನೆಯ ಅಸಡ್ಡೆಯೇ ಸಂಘರ್ಷಕ್ಕೆ ಕಾರಣ: ಪಿ.ಎ. ಹನೀಫ್

ಆಯಾ ಧರ್ಮಗಳು ಸಾರಿದ ತತ್ವ ಆದರ್ಶಗಳ ಪಾಲನೆ ಬಗೆಗಿನ ಜನರ ಅಸಡ್ಡೆಯೇ ಇಂದಿನ ಮನುಷ್ಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಸತ್ಯ,…

36 mins ago