ಮಂಗಳೂರು

ಮಂಗಳೂರು: ಪತ್ರಿಕಾ ಭವನದ ಆವರಣದಲ್ಲಿ ಹಸಿರೇ ಉಸಿರು ಕಾರ್ಯಕ್ರಮ

ಮಂಗಳೂರು,ಜೂ.25; ನಗರದ  ಗಾಂಧಿನಗ ರ ಶಾಲಾ ಆವರಣ, ಪತ್ರಿಕಾ ಭವನದ ಆವರಣದಲ್ಲಿ ದ.ಕ ಜಿಲ್ಲಾ ಕಾರ್ಯನಿರತ  ಪತ್ರ ಕರ್ತರ ಸಂಘ ಅರಣ್ಯ ಇಲಾಖೆ ಮತ್ತು ಕೆಐಒಸಿಎಲ್  ಸಹಯೋಗದೊಂದಿಗೆ ಹಸಿರೇ ಉಸಿರು ಕಾರ್ಯಕ್ರಮದ ಮೂಲಕ  ಇಂದು ಹಣ್ಣಿನ ಗಿಡ ನೆಡಲಾಯಿತು.

ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತಾ, ಮನಪಾ ಪತ್ರಿಕಾ ಭವನ ಗಾಂಧಿ ನಗರ ಪರಿಸರದಲ್ಲಿ ಹಣ್ಣಿನ ಗಿಡಗಳನ್ನೊಳ ಗೊಂಡ  ಸಾಲು ಮರಗಳ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಶಾಸಕ ಡಾ.ಭರತ್ ಶೆಟ್ಟಿ ಮಾತನಾಡುತ್ತಾ ಪತ್ರಕರ್ತರ  ಸಂಘದ ಮೂಲಕ ಪರಿಸರ ಸಂರಕ್ಷಣೆ ಯ ಕಾರ್ಯ ದಲ್ಲಿ ಸರಕಾರದ ಜೊತೆ ಕೈ ಜೋಡಿಸುತ್ತಿರುವುದು ಶ್ಲಾಘ ನೀಯ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿ ಯಾಗಿ ಭಾಗವಹಿಸಿದ ಕೆಐಒಸಿಎಲ್ ನ ಹಿರಿಯ ಮಹಾ ಪ್ರಬಂಧ ಕ ರಾಮಕೃಷ್ಣ ಮಾತನಾಡುತ್ತಾ,ಅರಣ್ಯ ಇಲಾಖೆ ಮತ್ತು ಪತ್ರಕರ್ತರ ಸಂಘದ ಸಹಕಾದೊಂದಿಗೆ  ಮೂರು ಕಡೆ ಮಿಯಾವಾಕಿ ಅರಣ್ಯ  ನಿರ್ಮಿಸಲು ಕೆಐಒಸಿಎಲ್ ವತಿಯಿಂದ 15ಲಕ್ಷ ರೂ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ.

ಮನಪಾ ಸದಸ್ಯೆ ಸಂಧ್ಯಾ ಆಚಾರ್, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಸಹಾಯ ಅರಣ್ಯ ಸಂರಕ್ಷಣಾ ಧಿಕಾರಿ ಸುಬ್ರಹ್ಮಣ್ಯ ರಾವ್ ,ವಲಯ  ಅರಣ್ಯಾಧಿಕಾ ರಿ ಪ್ರಶಾಂತ್ ಪೈ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಸ್ವರ್ಣ ಸುಂದರ್ ,ಪರಿಸರ ಕಾರ್ಯ ಕರ್ತ ಸಂದೇಶ್,ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ದ.ಕ. ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಅಧ್ಯಕ್ಷ ತೆ ವಹಿಸಿದ್ದರು.

ಕೆಐಒಸಿಎಲ್ ನ ಹಿರಿಯ ಪ್ರಬಂಧಕ  ಮುರುಗೇಶ್ ,ಗಾಂಧಿ ನಗರದ ಉನ್ನತೀಕ ರಿಸಿದ  ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ  ಯಶೋಧ .ಬಿ ಮತ್ತು ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಕಾರ್ಯ ನಿರತ  ಪತ್ರಕರ್ತ ರ  ಸಂಘದ ಪ್ರಧಾನ ಕಾರ್ಯ ದರ್ಶಿ ಜಿತೇಂದ್ರ ಕುಂದೇ ಶ್ವರ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಗಾಂಧಿ ನಗರ ಶಾಲಾ ವಿದ್ಯಾರ್ಥಿಗಳಿಗೆ ಕೆಐಒಸಿಎಲ್ ವತಿಯಿಂದ ಮಾಸ್ಕ್ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಗಿಡಗಳ ಬೀಜಗಳನ್ನು ವಿತರಿಸಲಾಯಿತು.

Sneha Gowda

Recent Posts

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

25 mins ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

33 mins ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

34 mins ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

44 mins ago

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

58 mins ago

ಮರಾಠಿ ಭಾಷೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಅನಾವರಣ

ಯಕ್ಷಗಾನದ ಹಿರಿಮೆ ಇದೀಗ ಗಡಿದಾಟಿ ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ. ಸಂಪೂರ್ಣ ಮರಾಠಿ ಭಾಷೆಯಲ್ಲಿ ನಡೆದ ಅಪರೂಪದ ಯಕ್ಷಗಾನ ಮಹಾರಾಷ್ಟ್ರ ಪ್ರೇಕ್ಷಕರ…

1 hour ago