Categories: ಮಂಗಳೂರು

ಮಂಗಳೂರು: ಎಂ.ಆರ್.ಪಿ.ಎಲ್ ನಲ್ಲಿ 30 ದಿನಗಳ ಸ್ಪೋಕನ್ ಕನ್ನಡ ತರಗತಿ ಪ್ರಾರಂಭ

ಮಂಗಳೂರು: ಕನ್ನಡ ಮಾತನಾಡ ಬಯಸುವ ಉದ್ಯೋಗಿಗಳಿಗೆ ಕನ್ನಡ ಭಾಷೆಯನ್ನು ಪರಿಚಯಿಸಲು ಮತ್ತು ಅವರ ಕನ್ನಡ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲು, 30 ದಿನಗಳ ಸ್ಪೋಕನ್ ಕನ್ನಡ ತರಗತಿಗಳನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್
ಲಿಮಿಟೆಡ್, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಮಂಗಳೂರಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮತ್ತು ಕನ್ನಡ ಬರಹಗಾರರಾದ ಶ್ರೀ ಎ. ಕರಿಯ ಕುಡಿಯ ಅವರು ಕಾರ್ಯಕ್ರಮವನ್ನು 16 ಡಿಸೆಂಬರ್ 2022 ರಂದು ಮಂಗಳೂರಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಸ್ಪೋಕನ್ ಕನ್ನಡ ತರಗತಿಗಳನ್ನು ನಡೆಸುವ ಹೊಸ ಅಭ್ಯಾಸದ ಕಡೆಗೆ ಎಂ.ಆರ್.ಪಿ.ಎಲ್ ನ ಪ್ರಯತ್ನಗಳನ್ನು ಶ್ಲಾಘಿಸಿದರು. ಪ್ರಾದೇಶಿಕ ಸಂಸ್ಕೃತಿಗಳನ್ನು ಶ್ರೀಮಂತಗೊಳಿಸುವಲ್ಲಿ ಮತ್ತು ಶಿಕ್ಷಣದ ಮೂಲಕ ಜನರನ್ನು ಸಬಲೀಕರಣಗೊಳಿಸುವಲ್ಲಿ ಎಂ.ಆರ್.ಪಿ.ಎಲ್ ಕೊಡುಗೆಯನ್ನು ಅವರು ಶ್ಲಾಘಿಸಿದರು.

ಯಾವುದೇ ಕಲಿಕೆಯ ಪ್ರಕ್ರಿಯೆಯಲ್ಲಿ ಹಿನ್ನೆಲೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಕಲಿಯುವವರು ಕೆಲವು ಹಿನ್ನೆಲೆ ಅಧ್ಯಯನವನ್ನು
ಮಾಡುವುದು ಮತ್ತು ಕನ್ನಡ ಭಾಷೆಯ ಶ್ರೀಮಂತ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು ಅತ್ಯಗತ್ಯ” ಎಂದು ಅವರು
ಹೇಳಿದರು.

ಗೌರವಾನ್ವಿತ ಅತಿಥಿ,  ಸಂದೇಶ್ ಜೆ ಕುಟಿನ್ಹೋ, ಮುಖ್ಯ ಪ್ರಧಾನ ವ್ಯವಸ್ಥಾಪಕರು (ಮಾನವ ಸಂಪನ್ಮೂಲ), ಕರಾವಳಿ ಪ್ರದೇಶದ ಬಹುಭಾಷಿತ್ವನ್ನು ಪ್ರಸ್ತುತ ಪಡಿಸಿ ಅದರ ಪ್ರಯೋಜನಗಳನ್ನು ಪ್ರತಿಪಾದಿಸಿದರು.  ಕೃಷ್ಣ ಹೆಗಡೆ ಸಮೂಹ ಪ್ರಧಾನ ವ್ಯವಸ್ಥಾಪಕರು (ಮಾನವ ಸಂಪನ್ಮೂಲ), ಅವರು ಸ್ಪೋಕನ್ ಕನ್ನಡ ತರಗತಿಗಳ ಅನುಷ್ಠಾನದಲ್ಲಿ ರಾಜಭಾಷೆ ಸೆಲ್ ನ ಪ್ರಯತ್ನಗಳನ್ನು ಶ್ಲಾಘಿಸಿ, ಅವರು ಸಂವಹನದ ಸಮಯದಲ್ಲಿ ಸ್ಥಳೀಯರೊಂದಿಗೆ ಸೌಹಾರ್ದಯುತ ಸಂಬಂಧಕ್ಕಾಗಿ ಕನ್ನಡ ಭಾಷೆಯನ್ನು ತಿಳಿದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಹೇಗೆ ಭಾಷೆಯನ್ನು ಕೌಶಲ್ಯವಾಗಿ ಹೊಂದಬಹುದು ಎಂಬುದರ ಕುರಿತು ವಿವರಿಸಿದರು.

ಡಾ.ಬಿ.ಆರ್. ಪಾಲ್, ಮುಖ್ಯ ವ್ಯವಸ್ಥಾಪಕರು (ರಾಜಭಾಷೆ), ತರಗತಿಗಳ ರೂಪರೇಖೆಯನ್ನು ವಿವರಿಸಿದರು. ಮನೀಶ್, ತರಬೇತಿ ಸಹಾಯಕ (ರಾಜಭಾಷೆ) ಮುಖ್ಯ ಅತಿಥಿಯನ್ನು ಪರಿಚಯಿಸಿದರು. ದೀಪ್ತಿ ಜೆ ಅತ್ತಾವರ , ಅಧಿಕಾರಿ (ಹಿಂದಿ ಅನುವಾದಕರು) ವಂದಿಸಿದರು.  ಸಂದೀಪ್ ಖಾರ್ವಿ, ಕಿರಿಯ ಅಧಿಕಾರಿ (ರಾಜಭಾಷೆ ಅನುಷ್ಠಾನ) ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ತರಗತಿಗಳನ್ನು ಪ್ರತಿ ಮಂಗಳವಾರ ಮತ್ತು ಗುರುವಾರದಂದು ಸಂಜೆ 04.00 ರಿಂದ 5.15 ರ ವರೆಗೆ ಎಂ.ಆರ್.ಪಿ.ಎಲ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ನೋಂದಾಯಿತ 241 ಉದ್ಯೋಗಿಗಳಲ್ಲಿ 35 ನೌಕರರು ಪ್ರಸ್ತುತ ಬ್ಯಾಚ್‌ನಲ್ಲಿ ಸ್ಪೋಕನ್ ಕನ್ನಡ ತರಗತಿಗಳಿಗೆ ಹಾಜರಾಗಲಿದ್ದಾರೆ.

Ashika S

Recent Posts

“ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್: ಸಂಸದ ಪ್ರತಾಪ್​ ಸಿಂಹ ಖಂಡನೆ

ಧರ್ಮ ದಂಗಲ್​ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…

18 mins ago

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

36 mins ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

53 mins ago

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

1 hour ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

1 hour ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

2 hours ago