Categories: ಮಂಗಳೂರು

ಹಸುವಿನ ಸಗಣಿಯಿಂದ ಪೈಂಟ್‌ ತಯಾರಿಕೆ : ಮಂಗಳೂರಿನ ಹೊಸ ಅನ್ವೇಷಣೆ

ಮಂಗಳೂರು:  ಈ ಬಾರಿ  ವಾಡಿಕೆಗಿಂತ ಹೆಚ್ಚಿಗೆ ಸುಡುತ್ತಿರುವ ಬಿಸಿಲಿನಿಂದ ಭೂಮಿಯ ಮೇಲೆ ಕಾವೇರಿದೆ. ಇದರಿಂದ ಮನೆ ಒಳಗೂ ಇರಲಾಗದೇ ಹೊರಗು ಹೋಗಲಾದೆ ಜನರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೈಸರ್ಗಿಕವಾಗಿ ಹಸುವಿನ ಸಗಣಿಯಿಂದ ಮನೆಯ ಗೋಡೆಗೆ ಬಳಸುವ ಪೈಂಟ್‌ನ್ನು ತಯಾರಿಸಲಾಗುತ್ತಿದೆ ಇದು ಮಂಗಳೂರಿನ ಹೊಸ ಅನ್ವೇಷಣೆ ಆಗಿದೆ. ಈ ಗುಡಿಕೈಗಾರಿಕೆಯನ್ನು ಆರಂಭಿಸಿದ್ದು ಹಳೆಯಂಗಡಿ ನಿವಾಸಿ ಅಕ್ಷತಾ ಎ.

ಗ್ರಾಮದ ಗುಡಿ ಕೈಗಾರಿಕೆಯಲ್ಲಿ ಗೋಮಯದಿಂದ(ಹಸುವಿನ ಸೆಗಣಿ) ತಯಾರಿಸುವ ಪರಿಸರ ಸ್ನೇಹಿ ಬಣ್ಣ ಜನಪ್ರಿಯವಾಗುತ್ತಿದೆ. “ಸನ್ನಿಧಿ ಪ್ರಕೃತಿ” ಎಂಬ ಬ್ರಾಂಡ್ ಹೆಸರಿನಲ್ಲಿ ಈ ಪರಿಸರ ಸ್ನೇಹಿ ಬಣ್ಣವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಯಾವುದೇ ವಾಸನೆಯಿಲ್ಲದ ಮತ್ತು ಅಗ್ಗದ ವೆಚ್ಚದ್ದಾಗಿದೆ.

ಅಕ್ಷತಾ ಅವರು 2022 ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್‌ಮೇಡ್ ಪೇಪರ್ ಇನ್‌ಸ್ಟಿಟ್ಯೂಟ್‌ನಲ್ಲಿ ಉದ್ಯಮಶೀಲತಾ ತರಬೇತಿ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಈ ಗುಡಿ ಕೈಗಾರಿಕೆಯನ್ನು ಪ್ರಾರಂಭಿಸಿದರು.

ಈ ಸುಡು ಬೇಸಿಗೆಯಲ್ಲಿ ಈ ಗುಡಿ ಕೈಗಾರಿಕೆ ಉದ್ಯಮಕ್ಕೆ ಕರ್ನಾಟಕದಾದ್ಯಂತ ಅಲ್ಲದೇ ನೆರೆಯ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ನೈಸರ್ಗಿಕ ಬಣ್ಣವು ಥರ್ಮಲ್ ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಿಕಿರಣವನ್ನು ತಡೆಯುತ್ತದೆ, ಇದರಿಂದಾಗಿ ಬೇಸಿಗೆಯಲ್ಲಿ ಮನೆ ತಂಪಾಗಿರುತ್ತದೆ ಎಂದು ಘಟಕದ ಮಾಲಕಿ ಅಕ್ಷತಾ ಎ ಹೇಳುತ್ತಾರೆ.

Nisarga K

Recent Posts

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

6 mins ago

ನ್ಯೂಯಾರ್ಕ್​ಗೆ ತೆರಳಲಿದೆ ಟೀಮ್ ಇಂಡಿಯಾದ ಮೊದಲ ಬ್ಯಾಚ್ : ಯಾವಾಗ?

ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗಾಗಿ ಟೀಮ್​ ಇಂಡಿಯಾದ ಮೊದಲ ಬ್ಯಾಚ್​…

10 mins ago

ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

ಖಾಸಗಿ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್‌ ಅವರು ಪತ್ನಿ ಹಾಗು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಶಾಸಕ ಶರಣು ಸಲಗರ್‌ರಿಂದ…

20 mins ago

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

51 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

2 hours ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

2 hours ago