Categories: ಮಂಗಳೂರು

ಪುತ್ತೂರಲ್ಲಿ ಮತ್ತೆ ಹಿಂದುತ್ವದ ಲೋಕಲ್‌ ಫೈಟ್‌: ಪುತ್ತಿಲ ಪರಿವಾರ ವರ್ಸಸ್‌ ಬಿಜೆಪಿ

ಪುತ್ತೂರು: ವಿಧಾನಸಭಾ ಚುನಾವಣೆಯ ಬಳಿಕ ಹಿಂದುತ್ವದ ಶಕ್ತಿ ಕೇಂದ್ರ ಪುತ್ತೂರಿನಲ್ಲಿ ಮತ್ತೆ ಹಿಂದುತ್ವದ ಫೈಟ್ ನಡೆದಿದೆ. ಬಿಜೆಪಿ ಮತ್ತು‌ ಅರುಣ್ ಪುತ್ತಿಲ ಪರಿವಾರದ ನಡುವೆ ರಾಜಕೀಯ ಫೈಟ್ ನಡೆಯುತ್ತಿದ್ದು, ವಿಧಾನಸಭಾ ಚುನಾವಣೆಯ ಬಳಿಕ ಇದೀಗ ಪುತ್ತಿಲ ಪರಿವಾರ ಬೆಂಬಲಿತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ ಮುಖಂಡರಿಗೆ ದೊಡ್ಡ ತಲೆನೋವು ತಂದಿದೆ.

ಪುತ್ತೂರು ತಾಲೂಕಿನ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮಪಂಚಾಯತ್ ನ ತಲಾ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತರು ಸ್ಪರ್ಧೆ ಮಾಡುತಿದ್ದಾರೆ. ಜುಲೈ 26ರಂದು ಚುನಾವಣೆ ನಡೆಯಲಿದ್ದು, ಮತ್ತೆ ಬಿಜೆಪಿಗೆ ಪರ್ಯಾಯವಾಗಿ ಚುನಾವಣಾ ಕಣಕ್ಕೆ ಪುತ್ತಿಲ ಪರಿವಾರ ಸದಸ್ಯರು ಇಳಿದಿದ್ದಾರೆ. ಎರಡೂ‌ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಯನ್ನು ಪುತ್ತಿಲ ಪರಿವಾರದವರು ನಿಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತಿಲ ಪರಿವಾರ ಮುಖಂಡರು, ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧೆ ನಡೆಯುತ್ತಿದೆ.  ಹಿಂದುತ್ವಕ್ಕಾಗಿ ಹೋರಾಡಿದ ಅರುಣ್ ಕುಮಾರ್‌ ಪುತ್ತಿಲ ಅವರಿಗೆ ಈ ಹಿಂದೆಯೂ ಬಿಜೆಪಿ ಅನ್ಯಾಯ ಮಾಡಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಹಿಂದೆ ಬಿಜೆಪಿ‌ ಜಿಲ್ಲಾಧ್ಯಕ್ಷ ಆಗಿದ್ದಾಗಲೂ ಅರುಣ್ ಪುತ್ತಿಲ ಬೆಂಬಲಿಗರು ಅವರನ್ನು ಬೆಂಬಲಿಸಿದ್ದರು. ಅಲ್ಲದೆ ಸಂಜೀವ ಮಠಂದೂರು ಶಾಸಕ‌ ಸ್ಥಾನಕ್ಕೆ ಸ್ಪರ್ಧಿಸಿದಾಗಲೂ ಅವರಿಗೆ ಬೆಂಬಲ ನೀಡಿದ್ದರು. ಆದರೆ ಅರುಣ್ ಪುತ್ತಿಲರಿಗೆ ಪಕ್ಷದಲ್ಲಿ ಈವರೆಗೂ ಸ್ಥಾನಮಾನ ನೀಡಿಲ್ಲ. ಜವಾಬ್ದಾರಿ ನೀಡುವಂತಹ‌ ಮನೋಭಾವವೂ ಅವರಲ್ಲಿ‌ ಕಾಣುತ್ತಿಲ್ಲ. ಸ್ಥಾನಮಾನ ಸಿಗುವವರೆಗೂ ಇದೇ ರೀತಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ.

ಇದು ಬಿಜೆಪಿಗೆ ಸಡ್ಡು ಹೊಡೆಯುವ, ಬಿಜೆಪಿಗೆ ಪರ್ಯಾಯವಾಗಿ ಸ್ಪರ್ಧೆಯಲ್ಲ. ಆದರೆ ನಮ್ಮ ಗುರಿ ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡಬೇಕು ಎಂಬುದು. ಕಾರ್ಯಕರ್ತರ ಆಶಯಕ್ಕೆ ಬೆಲೆಕೊಡಬೇಕು ನಮ್ಮ ಒತ್ತಾಯ. ಅದರ ಹೊರತು ಬಿಜೆಪಿಗೆ ಪರ್ಯಾಯವಾಗಿ ನಮ್ಮ ಮುಖಂಡರು ಸ್ಪರ್ಧೆ ಮಾಡುತ್ತಿಲ್ಲ ಎಂದು ಪರಿವಾರ ಮುಖಂಡರು ಹೇಳಿದ್ದಾರೆ.

ಬಿಜೆಪಿಯಿಂದಲೂ ಸ್ಪರ್ಧೆ: ಇದೇ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಪಂ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಬಿಜೆಪಿ ಬೆಂಬಲಿತರೂ ಸ್ಪರ್ಧೆ ಮಾಡಲಿದ್ದಾರೆ. ಪುತ್ತೂರು ತಾಲೂಕಿನ 22 ಪಂಚಾಯತ್ ಗಳಲ್ಲಿ 20 ಪಂಚಾಯತ್ ನಲ್ಲಿ ಬಿಜೆಪಿ ಕೈಯಲ್ಲಿದೆ. ತೆರವಾದ ಎರಡೂ ಸ್ಥಾನಗಳಲ್ಲೂ ಬಿಜೆಪಿ ಸದಸ್ಯರಿದ್ದರು. ಆ ಕಾರಣದಿಂದ ಬಿಜೆಪಿ ಎರಡೂ ಸ್ಥಾನಗಳಲ್ಲೂ ಜಯಗಳಿಸಲಿದೆ.

ಪಕ್ಷೇತರ, ಕಾಂಗ್ರೆಸ್ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆಯಿಲ್ಲ. ಬಿಜೆಪಿ ಗೆಲ್ಲುವುದು ನಿಶ್ವಿತ ಎಂಬುದು ಬಿಜೆಪಿ ಮುಖಂಡರ ವಿಶ್ವಾಸ.

Ashika S

Recent Posts

ಡಾಲಿ ನಟನೆಯ‘ಕೋಟಿ’ ಸಿನಿಮಾ ಮೊದಲ ಹಾಡು ಬಿಡುಗಡೆ

ಡಾಲಿ ಧನಂಜಯ್‌ ನಟಿಸಿರುವ ‘ಕೋಟಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಸಿನಿಮಾದ…

4 mins ago

ನಾಮಪತ್ರ ಸಲ್ಲಿಸಲು ‘ಚಟ್ಟ’ದಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ

ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ 'ಚಟ್ಟ'ದಲ್ಲಿ ಜಿಲ್ಲಾಧಿಕಾರಿ…

33 mins ago

ಶಿಕ್ಷಕರಿಗೆ 15 ದಿನಗಳ ರಜೆ ಕಡಿತ : ಎಸ್‌ಎಸ್‌ಎಲ್‌ಸಿ ವಿಶೇಷ ತರಗತಿ ನಡೆಸಲು ಸೂಚನೆ

ರಾಜ್ಯದ ಪ್ರೌಢಶಾಲಾ ಶಿಕ್ಷಕರ 15 ದಿನಗಳ ರಜೆ ಕಡಿತ ಮಾಡಿದ್ದು, ಇಂದಿನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ…

41 mins ago

ಈ ಜಿಲ್ಲೆಗಳಲ್ಲಿ ಧಾರಕಾರ ಮಳೆ : ಸಿಡಿಲು ಬಡಿದು ಯುವಕ ಸಾವು

ನೆನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಧಾರಕಾರವಾಗಿ ಮಳೆ ಸುರಿದು ಭೂಮಿಯನ್ನುವರುಣ ತಂಪಾಗಿಸಿದ್ದಾನೆ  ಆದರೆ ಕೆಲವಡೆ ಅವಾಂತರಗಳಾಗಿವೆ.ಕೃಷ್ಣನ ನಾಡು ಉಡುಪಿಯಲ್ಲೂ ಮಂಗಳವಾರ…

52 mins ago

ಇದು ಮಾವು ಸೀಜನ್‌: ತಾಜಾ ಮಾವಿನ ರಸ ಕುಡಿಯುವುದರಿಂದ ಏನೆಲ್ಲ ಪ್ರಯೋಜನ?

ಈಗ ಮಾವು ಸೀಜನ್‌. ಯಾವ ಹಣ್ಣಿನ ಅಂಗಡಿ ನೋಡಿದರಲ್ಲಿ ಮಾವಿನ ರಾಶಿ ಕಂಡುಬರುತ್ತದೆ. ಆದರೆ ಈಗ ಕೆಲವೊಂದು ಮಾವು ಅಪಾಯಕಾರಿ…

1 hour ago

ರಾಶಿ ಭವಿಷ್ಯ : ಯಾರಿಗೆ ಲಾಭ? ಯಾರಿಗೆ ನಷ್ಟ?

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 15…

1 hour ago