ಮಂಗಳೂರು

ಕೊಕ್ಕಡ:  ಗೋಶಾಲೆಗೆ ಸಚಿವ ಶಂಕರ್ ಪಾಟೀಲ್ ಭೇಟಿ!

ಕೊಕ್ಕಡ:  ಕಬ್ಬು ಅಭಿವೃದ್ಧಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಜ.1ರಂದು ಕಾಯರ್ತಡ್ಕ ಕಳೆಂಜದ ನಂದಗೋಕುಲ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.

ಗೋಶಾಲೆಯ ಚಟುವಟಿಕೆ ಮತ್ತು ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವೈಯಕ್ತಿಕವಾಗಿ ಮತ್ತು ತಮ್ಮ ಇಲಾಖೆ, ಸರಕಾರದಿಂದ, ಅನುದಾನ ಒದಗಿಸುವ ಕುರಿತು ಭರವಸೆ ನೀಡಿದರು.

ಗೋ ಶಾಲೆಯ ಟ್ರಸ್ಟಿನ ಅಧ್ಯಕ್ಷ ಡಾ. ಎಂ.ಎಂ. ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ,ಟ್ರಸ್ಟಿ ನವೀನ್ ನೆರಿಯ,ರಮೇಶ್ ಪ್ರಭು ಕಳೆಂಜ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಗೋ ಶಾಲೆ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಗೋಶಾಲೆಯ ಮ್ಯಾನೇಜರ್ ಗಳಾದ ಕೀರ್ತಿರಾಜ್ ಮತ್ತು ಶ್ರೀಶ ಭಟ್ ಅವರನ್ನು ಸಚಿವರು ಸನ್ಮಾನಿಸಿದರು.

Sneha Gowda

Recent Posts

ವಿಧಾನಸೌಧ ಪ್ರವೇಶಕ್ಕೆ ಇನ್ನು ಮುಂದೆ ಕ್ಯೂಆರ್ ಕೋಡ್ ಪಾಸ್‌: ಪರಮೇಶ್ವರ್‌

ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

2 mins ago

ಮೀನಾ ಹತ್ಯೆ ಪ್ರಕರಣ: ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯ ಕುಟುಂಬಕ್ಕೆ ನ್ಯಾಯ  ಒದಗಿಸುವ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.…

14 mins ago

ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.

16 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

24 mins ago

ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು…

27 mins ago

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

35 mins ago