News Karnataka Kannada
Sunday, April 28 2024
ಮಂಗಳೂರು

ಕೆಎಂಸಿಯಿಂದ ‘ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ ಮಂಗಳೂರು’ (ಇಎಂಸಿಎಂ) ಉದ್ಘಾಟನೆ

Mangaluru KMC inaugurates 'Emergency Medicine Club Mangaluru' (EMCM)
Photo Credit : News Kannada

ಮಂಗಳೂರು: ಡಾ ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ, ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆ ಜಂಟಿಯಾಗಿ ಆಯೋಜಿಸಿದ “ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ ಮಂಗಳೂರು” (ಇಎಂಸಿಎಂ) ಉದ್ಘಾಟನಾ ಸಭೆ ಆಯೋಜಿಸಿದ್ದವು.

ಮಂಗಳೂರಿನ ವಿವಿಧ ಆಸ್ಪತ್ರೆಗಳ ತುರ್ತು ವೈದ್ಯಕೀಯ ವೃತ್ತಿಪರರನ್ನು ಒಂದುಗೂಡಿಸಿದ್ದ ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳು ಮತ್ತು ಅಗ್ರ ಖಾಸಗಿ ಆಸ್ಪತ್ರೆಗಳು ಬೆಂಬಲಿಸಿದ್ದವು. ಈ ಕಾರ್ಯಕ್ರಮ ತುರ್ತು ವೈದ್ಯಕೀಯ ಆರೈಕೆಯನ್ನು ಮುಂದುವರಿಸಲು ಸಾಂಘಿಕ ಬದ್ಧತೆ ಪ್ರದರ್ಶಿಸಿತ್ತು. ಈ ಕಾರ್ಯಕ್ರಮವು 85 ವೈದ್ಯರು ಮತ್ತು 9 ವೈದ್ಯಕೀಯ ಕಾಲೇಜುಗಳ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಅಲ್ಲದೇ ಮಂಗಳೂರಿನ ಎಲ್ಲಾ ಆಸ್ಪತ್ರೆಗಳು ಭಾಗವಹಿಸಿ ಈ ಉಪಕ್ರಮವನ್ನು ಬೆಂಬಲಿಸಿದವು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಜಿ.ಕೆ.ಭಟ್ ಸಂಕಬಿತ್ತಿಲು ಅವರು ಹಾಜರಿದ್ದರು.

ತುರ್ತು ವೈದ್ಯಕೀಯ ತಜ್ಞರು, ವೈದ್ಯರು ಮತ್ತು ಸಂಶೋಧಕರು ಜ್ಞಾನ ವಿನಿಮಯ ಮಾಡಿಕೊಳ್ಳಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಕ್ಷೇತ್ರದಲ್ಲಿನ ನವೀನ ವಿಧಾನಗಳನ್ನು ಚರ್ಚಿಸಲು ವೇದಿಕೆ ರೂಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಸಭೆಯು ಒಳನೋಟಪೂರ್ಣ ಪ್ರಾಸ್ತಾವಿಕ ಭಾಷಣಗಳು ಮತ್ತು ಸಂವಾದಾತ್ಮಕ ಚರ್ಚೆಗಳ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು. ತುರ್ತು ಆರೈಕೆಯ ಎಲ್ಲ ಪರಿಣತಿಯನ್ನು ಒಂದಡೆ ಸೇರಿಸುವ ಮೂಲಕ, ಈ ಕಾರ್ಯಕ್ರಮ ತುರ್ತು ಆರೈಕೆಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಗುರಿ ಹೊಂದಿತ್ತಲ್ಲದೇ ಗಂಭೀರ ಪರಿಸ್ಥಿತಿಗಳಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಗಳನ್ನು ಖಾತ್ರಿ ಮಾಡಿಕೊಳ್ಳುವಂಥದ್ದಾಗಿದೆ.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರು ಮಾತನಾಡಿ, “ಇದು ಈ ಸಮಯದ ಅಗತ್ಯ” ಎಂದರಲ್ಲದೇ ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರನ್ನು ಹೇಗೆ ಉತ್ತಮವಾಗಿ ನಿಭಾಯಿಸಬಹುದಿತ್ತು ಎಂಬುದನ್ನು ಕುರಿತಂತೆ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಆಸ್ಪತ್ರೆ ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ನಡೆಸಲು ಅವರು ಕೇಳಿಕೊಂಡರು. ಪ್ರದೇಶದ ತುರ್ತು ತಜ್ಞರಿಗೆ ಅವರು ಶುಭ ಕೋರಿದರು.

ಈ ಸಂದರ್ಭದಲ್ಲಿ ತುರ್ತು ವೈದ್ಯಕೀಯ ವಿಭಾಗದ ಡಾ. ಜೀಧು ರಾಧಾಕೃಷ್ಣನ್ ಅವರು ಮಾತನಾಡಿ, “ಪ್ರಮಾಣಿತ ಏಕರೂಪದ ತುರ್ತು ಆರೈಕೆ ವ್ಯವಸ್ಥೆ ಅಭಿವೃದ್ಧಿಪಡಿಸಲು, ಇತರ ವಿಶೇಷತೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮತ್ತು ತುರ್ತು ನಿಗಾ ತಜ್ಞರ ನಡುವೆ ಸಾರ್ವಜನಿಕ ಸಹಯೋಗ ಹೆಚ್ಚಿಸಲು ಈ ಕ್ಲಬ್‍ನ ಉಪಕ್ರಮ ಕೈಗೊಳ್ಳಲಾಗಿದೆ. ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ ಮಂಗಳೂರು ವೃತ್ತಿಪರ ಬೆಳವಣಿಗೆಯನ್ನು ಪೋಷಿಸುವುದು ಮಾತ್ರವಲ್ಲದೆ ಅಂತರ ವಿಭಾಗೀಯ ಸಹಯೋಗ ಮತ್ತು ಜ್ಞಾನ ವಿನಿಮಯವನ್ನು ಪ್ರೋತ್ಸಾಹಿಸಿತ್ತು. ಇದು ಮಂಗಳೂರಿನ ಜನರಿಗೆ ತುರ್ತು ವೈದ್ಯಕೀಯ ಆರೈಕೆಯಲ್ಲಿನ ಇತ್ತೀಚಿನ ಪ್ರಗತಿಗಳ ಒಳನೋಟಗಳನ್ನು ಹಂಚಿಕೊಳ್ಳಲು ಮತ್ತು ಹೊಸ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಹೊಸ ಅಧ್ಯಾಯ ಪ್ರಾರಂಭಿಸಲಿದೆ” ಎಂದರು

“ಈ ಉಪಕ್ರಮದ ಮೂಲಕ, ಕ್ಲಬ್ ಸತತ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ ತುರ್ತು ಸಮಯದಲ್ಲಿ ಸಮುದಾಯ ಜಾಗೃತಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಮುದಾಯ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಅಣಕು ಡ್ರಿಲ್‍ಗಳನ್ನು ನಡೆಸಲು ಇಚ್ಛಿಸುತ್ತದೆ. ಯಾವುದೇ ಸಮಯದಲ್ಲಿ ತುರ್ತು ಪರಿಸ್ಥಿತಿಗಳು ಸಂಭವಿಸಬಹುದು ಮತ್ತು ಗೋಲ್ಡನ್ ಅವರ್ ಎಂದೂ ಕರೆಯಲ್ಪಡುವ ಮೊದಲ ಗಂಟೆಯ ಅವಧಿಯು ಪೂರ್ವಜ್ಞಾನ ನಿರ್ಧರಿಸುವಲ್ಲಿ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳುವಲ್ಲಿ ಪ್ರಮುಖವಾಗಿದೆ” ಎಂದು ಡಾ.ರಾಧಾಕೃಷ್ಣನ್ ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಘೀರ್ ಸಿದ್ದಿಕಿ ಅವರು ಮಾತನಾಡಿ, “ಕೆಎಂಸಿ ಆಸ್ಪತ್ರೆಯಲ್ಲಿನ ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ ಮಂಗಳೂರು (ಇಎಂಸಿಎಂ)ಅನ್ನು ಆರೋಗ್ಯ ರಕ್ಷಣೆಯ ಎಲ್ಲ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುವ ತಾಣವಾಗಿ ವಿನ್ಯಾಸಗೊಳಿಸಲಾಗಿದೆ. ಉನ್ನತ ಕೌಶಲ್ಯದ ಮತ್ತು ಸಹಾನುಭೂತಿಯ ಆರೋಗ್ಯ ವೃತ್ತಿಪರರ ತಂಡದೊಂದಿಗೆ, ತುರ್ತು ವೈದ್ಯಕೀಯ ಸೇವೆಗಳ ಸಮಯದಲ್ಲಿ ರೋಗಿಗಳಿಗೆ ಅಸಾಧಾರಣ ಆರೈಕೆಯ ಸೇವೆ ಒದಗಿಸಲು ನಾವು ಸಮರ್ಪಿತರಾಗಿದ್ದೇವೆ. ಕೆಎಂಸಿ ಆಸ್ಪತ್ರೆಯು ಗೋಲ್ಡನ್ ಅವರ್ ಅವಧಿಯ ಒಳಗೆ ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಮೂಲಕ ತುರ್ತು ಪ್ರಕರಣಗಳನ್ನು ನಿರ್ವಹಿಸುತ್ತಾ ಬಂದಿದೆಯಲ್ಲದೇ ಅದನ್ನು ಮುಂದುವರಿಸಿದೆ. ಈ ರೀತಿಯ ಉಪಕ್ರಮಗಳು ಮಂಗಳೂರು ಮತ್ತು ಸುತ್ತಮುತ್ತಲ ಜನರಿಗೆ ಕ್ಲಬ್ ಮೂಲಕ ಇತ್ತೀಚಿನ ಉನ್ನತೀಕರಣಗಳು ಮತ್ತು ಪ್ರಗತಿಗಳ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ ಎಂದು ನಾವು ನಂಬಿದ್ದೇವೆ” ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು