ಮಂಗಳೂರು: ಸೈನಿಕನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ದ.ಕ. ಜಿಲ್ಲೆಯ ಕಡಬದ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದೆ. ಜಾಗದ ತಕರಾರಿನ ವಿಚಾರದಲ್ಲಿ ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ ಮೇಲೆ ಪಕ್ಕದ ಮನೆಯ ನಾಲ್ವರು ಹಲ್ಲೆ ನಡೆಸಿದ್ದಾರೆ.
ನಿತ್ಯ ಜಾಗದ ವಿಚಾರದಲ್ಲಿ ವಿನಾಕಾರಣ ಜಗಳವಾಡುತ್ತಿದ್ದ ಪಕ್ಕದ ಮನೆಯ ಪುಂಡರ ಗ್ಯಾಂಗ್, ಫೌಝಿಯಾ ಕಲ್ಲುಗುಡ್ಡೆಯಲ್ಲಿ ತಂದೆಯ ಮನೆಗೆ ಹೋಗಿದ್ದ ವೇಳೆ ಅವರ ತಂದೆಯ ಮೇಲೆ ಹಾಗು ಫೌಝಿಯಾ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಸದ್ಯ ಗಾಯಾಳು ಫೌಝಿಯಾ ಹಾಗು ಅವರ ತಂದೆ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.