News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಗ್ರಹಣವೀಕ್ಷಣೆ ಬರಿಗಣ್ಣಿನಿಂದ ನೋಡುವುದು ಹಾನಿಕಾರಕ, ಸೌರಕನ್ನಡಕ ಬಳಸಿ

ಸೂರ್ಯಗ್ರಹಣ
Photo Credit : Freepik

ಮಂಗಳೂರು: ಇದೇ ಬರುವ ಮಂಗಳವಾರ ದಿನಾಂಕ 25-10-2022ರಂದು ವಿಶ್ವದ ಹಲವಾರು ದೇಶಗಳಲ್ಲಿ ಕಾಣಲಿರುವ ಸೂರ್ಯಗ್ರಹಣ, ಭಾರತದ ಭೂಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿ ಗೋಚರಿಸಲಿದೆ.

ಮಂಗಳೂರಿನ ಆಸುಪಾಸಿನಲ್ಲಿ ಸುಮಾರು ಘಂಟೆ ಸಂಜೆ 5:09 ರಿಂದ 6:06ರ ವರೆಗೆ ಕಾಣಸಿಗುವ ಈ ಘಟನೆಯಲ್ಲಿ ಸುಮಾರು ಘಂಟೆ ಸಂಜೆ 5:50ರ ಹೊತ್ತಿಗೆ ಅತಿಹೆಚ್ಚು ಅಂದರೆ ಸೂರ್ಯನ ಬಿಂಬದ 10.9% ಶೇಕಡದಷ್ಟು ಭಾಗವನ್ನು ಮರೆಮಾಚಲಿದೆ.

ಗ್ರಹಣವೀಕ್ಷಣೆ ಬರಿಗಣ್ಣಿನಿಂದ ನೋಡುವುದು ಹಾನಿಕಾರಕ. ಇದನ್ನು ದೂರದರ್ಶಕದಿಂದ (ಟೆಲೆಸ್ಕೋಪ್) ಪರದೆಯ ಮೇಲೆ ಕಾಣಲಾಗುವ ಗ್ರಹಣದ ಬಿಂಬ ಅಥವಾ ಲಭ್ಯವಿರುವ ಪ್ರಮಾಣೀಕರಿಸಿದ ಸೌರಕನ್ನಡಕವನ್ನು ಬಳಸಿಯೇ ನೋಡಬೇಕು.

ಈ ನಿಟ್ಟಿನಲ್ಲಿ, ಸಾರ್ವಜನಿಕರಿಗೆ ಸುಲಭವಾಗಿ ಗ್ರಹಣ ವೀಕ್ಷಣೆ ಮಾಡಲು ಯೆನೆಪೋಯ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ, ಬಲ್ಮಠದಲ್ಲಿರುವ ಯೆನೆಪೋಯ ಪದವಿ ಕಾಲೇಜಿನ 6ನೇ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರಿನ ಹವ್ಯಾಸಿ ಖಗೋಲಶಾಸ್ತ್ರಜ್ಞರ ಸಂಘದ ಶ್ರೀ ರೋಹಿತ್ ರಾವ್ ಮತ್ತು ಡಾ. ಸಂಗೀತಲಕ್ಷ್ಮಿ ಎಂ.ಜೆ ಇವರು ತಿಳಿಸಿರುತ್ತಾರೆ.

ಮನೆಯಲ್ಲಿಯೇ ಗ್ರಹಣ ವೀಕ್ಷಣೆ ಮಾಡುವ ಆಸಕ್ತರು ತಮಗೆ ಸೂಕ್ತವಾದ ಪ್ರದೇಶದಲ್ಲಿ ಸೌರಕನ್ನಡಕವನ್ನು ಬಳಸಿಯೇ ನೋಡಬೇಕಾಗಿ, ಮತ್ತು ಸೌರಕನ್ನಡಕಗಳನ್ನು ಮುಂಚಿತವಾಗಿ ಡಾ. ಸಂಗೀತಲಕ್ಷ್ಮಿ (ದೂರವಾಣಿ: 9448790070) ಇವರಿಂದ ಪಡೆದುಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ನಾಗರಿಕರು ಭಾಗವಹಿಸಬೇಕಾಗಿ ಕೋರಿಕೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು