Categories: ಮಂಗಳೂರು

ಪೊಲೀಸರು ಸರಿಯಾಗಿ ಕೆಲಸ ಮಾಡದಿದ್ದಲ್ಲಿ ನಮ್ಮಲ್ಲಿ ಬೇರೆ ಔಷಧ ಇದೆ: ಗೃಹ ಸಚಿವ ಪರಮೇಶ್ವರ್‌

ಮಂಗಳೂರು: ರಾಜ್ಯದ ಜನ ಬಿಜೆಪಿ ಮೇಲಿನ ಆಕ್ರೋಶದಿಂದ ಮತ ಹಾಕಿದ್ದಾರೆ. ಕಾಂಗ್ರೆಸ್ ‌ಮತ್ತು ಅದರ ನಾಯಕತ್ವ ನಂಬಿ ನಮಗೆ 135 ಸೀಟ್ ಕೊಟ್ಟಿದ್ದಾರೆ. ಜ‌ನ ನಮ್ಮನ್ನು ವಿಶ್ವಾಸದಿಂದ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ಗೆಲ್ಲಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದರು.
ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನಾವು ಐದು ಗ್ಯಾರಂಟಿ ಕೊಟ್ಟಿದ್ದೆವು. ನಾವು ಗ್ಯಾರಂಟಿ ಘೋಷಣೆ ಬಗ್ಗೆ ಬೇಕಾಬಿಟ್ಟಿಯಾಗಿ ತೀರ್ಮಾನಿಸಿರಲಿಲ್ಲ. ಹಣಕಾಸು ಖರ್ಚಿನ ಲೆಕ್ಕಾಚಾರ ಮಾಡಿ ಸಾದ್ಯತೆ ಬಳಿಕ ಪ್ರಕಟ ಮಾಡಿದ್ದೆವು. ನಾವು ಯಾವುದೇ ಬೇಜವಾಬ್ದಾರಿಯಿಂದ ಘೋಷಣೆಗಳನ್ನು ಮಾಡಿರಲಿಲ್ಲ. ಕಾಂಗ್ರೆಸ್ ದೇಶ ದಿವಾಳಿ ಮಾಡುತ್ತದೆ ಅಂತ ಬಿಜೆಪಿ ಮತ್ತು ಮೋದಿ ಹೇಳುತ್ತಿದ್ದಾರೆ. ಆದರೆ ನಾವು ಘೋಷಣೆ ಗಳನ್ನು ಬೇಜವಾಬ್ದಾರಿಯಿಂದ ಮಾಡಿಲ್ಲ. ಗೃಹ ಇಲಾಖೆ ನನಗೆ ಹ್ಯಾಟ್ರಿಕ್ ಆಗಿದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಹೀಗೆ ಹೇಳಿದ್ದೆ. ಜನರಿಗೆ ಸೇವೆ ಮಾಡಲು ಬೇರೆ ಖಾತೆ ಕೊಡಿ ಎಂದು ಹೇಳಿದ್ದೆ. ಆದರೆ ಸಿಎಂ ಅವರು ದ.ಕ ಜಿಲ್ಲೆಯರಿಗೆ ನೀವೇ ಹೋಂ ಮಿನಿಸ್ಟರ್ ಆಗಬೇಕು ಎಂದು ಹೇಳಿದರು. ಸದ್ಯ ಪೊಲೀಸರ ಸಭೆ ನಡೆಸಿ ಕಠಿಣ ಕ್ರಮಗಳ ಬಗ್ಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿ ಸಹಿಸಲ್ಲ ಎಂದು ಹೇಳಿದ್ದೇನೆ. ಪ್ರಣಾಳಿಕೆ ರಚನೆ ವೇಳೆ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯವರು ಕೋಮು ವಿಚಾರದ ಕಾರಣಕ್ಕೆ ಹೂಡಿಕೆಯಾಗುತ್ತಿಲ್ಲ ಎಂದು ಹೇಳಿದ್ದರು. ಈ ಕಾರಣದಿಂದ ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ನಾನು ಖಡಕ್ ಸೂಚನೆ ಕೊಟ್ಟಿದ್ದೇನೆ

ಮೊದಲು ಹೇಗೆ ಇದ್ದರೋ ಗೊತ್ತಿಲ್ಲ, ಏನೇನ್ ಆಟ ಆಡಿದ್ದರೋ ಗೊತ್ತಿಲ್ಲ. ಕೇಸರಿಕರಣ ಮಾಡಿದ್ದೋ ಮತ್ತೊಂದು ಈಗ ನನಗೆ ಅಗತ್ಯ ಇಲ್ಲ. ಆದರೆ‌ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ಮಾಡದೇ ಇದ್ದಲ್ಲಿ ನಮ್ಮ ಔಷಧಾಲಯದಲ್ಲಿ ಬೇರೆ ಔಷಧಿ ಇದೆ. ಇಲ್ಲಿ ಕಾಂಗ್ರೆಸ್ ಸೋತಿದೆ ಅನ್ನುವ ಭಾವನೆ ಬೇಡ. ಇವತ್ತು ಅಧಿಕಾರ ಸಿಕ್ಕಿದೆ, ಸರ್ಕಾರ ನಿಮ್ಮ ಜೊತೆಯಲ್ಲಿ ಕೆಲಸ ಮಾಡಲಿದೆ. ಯಾವುದೇ ಸಚಿವರು ಇಲ್ಲಿಗೆ ಭೇಟಿ ನೀಡಬೇಕು ಅಂದರೆ ನನಗೆ ತಿಳಿಸಿ ಎಂದರು.

Umesha HS

Recent Posts

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು “ಆಟಿಸಂ ಜಾಗೃತಿ”ಕುರಿತು ಎಕ್ಷಪ್ಸನಲ್ ಕಾರ್ಯಕ್ರಮ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association…

7 hours ago

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್‌ಐಟಿ ತನಿಖೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ…

8 hours ago

ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ, ಪ್ರಿಯಾಂಕ ಅಬ್ಬರ

ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಇಂದು ಬೆಳಗಾವಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ…

8 hours ago

ಮೆಂಟಲ್ ಸೂರಿ ಹತ್ಯೆ ಕೇಸ್‌ : ಮೃತನ ಮಗನೂ ಸೇರಿ ಮೂವರ ಬಂಧನ

ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಕಿಂಗ್‌ ಎನಿಸಿಕೊಂಡಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಶಿವಮೊಗ್ಗ ಬಾಪೂಜಿನಗರದ 7ನೇ ಕ್ರಾಸ್ ನಲ್ಲಿರುವ…

9 hours ago

ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ರವಾನೆ : ಮುಸ್ಲಿಂ ಯುವಕನಿಗೆ ಬಿತ್ತು ಧರ್ಮದೇಟು

17 ವರ್ಷದ ಅಪ್ರಾಪ್ತೆಗೆ ಮುಸ್ಲಿಂ ಯುವಕನೋರ್ವ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದನ್ನು ರೆಡ್‌ ಹ್ಯಾಂಡ್‌ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ…

9 hours ago

ಅಕ್ರಮ ಜಾನುವಾರು ಸಾಗಾಟ: 9 ಆರೋಪಿಗಳು ಪೊಲೀಸರ ವಶಕ್ಕೆ

ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ 16 ಎತ್ತುಗಳನ್ನು ಆರೋಪಿಗಳು ಖರೀದಿಸಿ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಗಂಗಾವತಿ…

9 hours ago