Categories: ಕರಾವಳಿ

ಅಪಘಾತದಲ್ಲಿ ವಿದ್ಯಾರ್ಥಿಯ ಸಾವು: ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂಡುಬಿದಿರೆ: ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಸೋಮವಾರ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಮೃತಪಟ್ಟಿದ್ದು, ಚಾಲಕನ ನಿರ್ಲಕ್ಷ್ಯ ಖಂಡಿಸಿ ಮುಡುಬಿದಿರೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ಸಾಯಂಕಾಲ ವಿದ್ಯಾಗಿರಿ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಶಾಂತಿ ಪ್ರಸಾದ್ ಹೆಗ್ಡೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಖಾಸಗಿ ಬಸ್ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ದಿಂದಾಗಿ ಮೂಡುಬಿದಿರೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 10 ಕ್ಕೂ ಅಧಿಕ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.  ನಿರ್ಲಕ್ಷ್ಯ ದಿಂದ ಬಸ್ ಚಲಾಯಿಸುವವರ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ತಿಕ್ ಆಚಾರ್ಯ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮೂಡುಬಿದಿರೆ ವಲಯದ ಖಾಸಗಿ ಬಸ್ಸಿನ ಎಲ್ಲಾ ಚಾಲಕರು ಕಟ್ಟು ನಿಟ್ಟಾಗಿ ರಸ್ತೆ ನಿಯಮಗಳನ್ನು ಪಾಲಿಸಬೇಕು. ವಿಶೇಷ ಜನಸಂಚಾರವಿರುವ ಪ್ರದೇಶಗಳಲ್ಲಿ ವೇಗಕ್ಕೆ ಕಡಿವಾಣ ಹಾಕಬೇಕು. ಆಳ್ವಾಸ್ – ವಿದ್ಯಾಗಿರಿ ಬಳಿ ಹೆದ್ದಾರಿಗೆ ಹಂಪ್ಸ್ ಹಾಕಬೇಕು. ಶಾಲಾ ಕಾಲೇಜುಗಳ ಬಳಿ ಡಿವೈಡರ್‌ಗಳನ್ನು ಅಳವಡಿಸಿ ಬಸ್ಸುಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂಬ ಮನವಿಯನ್ನು ವಿದ್ಯಾರ್ಥಿಗಳು ಪೊಲೀಸ್ ವೃತ್ತ ನಿರೀಕ್ಷಕ ನಿರಂಜನ್ ಅವರಿಗೆ ನೀಡಿದರು.

Umesha HS

Recent Posts

ತಂದೆ ಮುಖಕ್ಕೆ ಮನ ಬಂದಂತೆ ಹೊಡೆದು ಕೊಂದೆ ಬಿಟ್ಟ ಕ್ರೂರಿ ಮಗ

ಆಸ್ತಿ ಆಸೆಯಿಂದಾಗಿ ಹೆತ್ತ ತಂದೆ ಎಂದು ನೋಡದೆ ಮನಬಂದಂತೆ ಹೊಡೆದಿದ್ದಾನೆ. ಆತನ ಹೊಡೆತದ ನೋವು ತಾಳಲಾರದೆ ವೃದ್ಧ ಪ್ರಾಣಬಿಟ್ಟಿದ್ದಾರೆ. ಈ…

27 mins ago

ಮಸೀದಿ ಒಳಗೆ ನುಗ್ಗಿ ಮಕ್ಕಳ ಮುಂದೆ ದೊಣ್ಣೆಗಳಿಂದ ಹೊಡೆದು ಧರ್ಮಗುರುವಿನ ಕೊಲೆ

ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್​ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.…

46 mins ago

ನಾಮಪತ್ರ ಹಿಂಪಡೆದ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​

ಚುನಾವಣೆಗೂ ಮುನ್ನ ಇಂದೋರ್​ನ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

51 mins ago

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜೆಡಿಎಸ್…

1 hour ago

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಅರ್ಥಪೂರ್ಣವಾಗಿ ನಡೆದ ಆಟಿಸಂ ಜಾಗೃತಿ ʼಎಕ್ಷಪ್ಸನಲ್ 2024ʼ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ ಐಬ ಅಸೋಸಿಯೇಷನ್…

1 hour ago

ಮೋದಿ ಅವರೆ ನೀವಿನ್ನೂ ಮೌನವಾಗಿಯೇ ಇರುತ್ತೀರಾ?: ಪ್ರಿಯಾಂಕಾ ಗಾಂಧಿ ವಾದ್ರಾ

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು, ಇದನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿ…

1 hour ago