ಸುಳ್ಯ: ಗೂನಡ್ಕದ ಸಮೀಪ ಸರ್ಕಾರಿ ಬಸ್ಗೆ ಹಿಂದಿನಿಂದ ಬಂದು ಆಲ್ಟೋ ಕಾರು ಗುದ್ದಿದ ಘಟನೆ ಇದೀಗ ಸಂಭವಿಸಿದೆ. ಘಟನೆಯ ರಭಸಕ್ಕೆ ಅಲ್ಟೋ ಕಾರು ಬಸ್ಸಿನೊಳಗೆ ನುಗ್ಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.
ಬಸ್ಸಿನೊಳಗೆ ನುಗ್ಗಿದ ಕಾರನ್ನು ಹೊರಗೆ ತೆಗೆಯಲು ಸ್ಥಳೀಯರು ಹರಸಾಹಸಪಡಬೇಕಾಯಿತು. ಘಟನೆಯಿಂದ ಯಾವುದೇ ಪ್ರಾಣ ಹಾನಿ, ಗಾಯ ಸಂಭವಿಸಿಲ್ಲ. ಬಸ್ ಸುಳ್ಯದಿಂದ ಕೊಯನಾಡಿಗೆ ಸಂಚರಿಸುತ್ತಿತ್ತು. ಅದೇ ಮಾರ್ಗವಾಗಿ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.