News Karnataka Kannada
Wednesday, May 01 2024
ಮಂಗಳೂರು

ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕೃತ ಕರಡು ಪ್ರತಿ ಬಿಡುಗಡೆ

Election Commission releases revised draft of electoral roll
Photo Credit : News Kannada

ಮಂಗಳೂರು: ಭಾರತೀಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕೃತ ಕರಡು ಪ್ರತಿ ಅಕ್ಟೋಬರ್ 27 ರಂದು ಬಿಡುಗಡೆ ಮಾಡಿದೆ‌.

ಡಿಸೆಂಬರ್ 09 ರ ವರೆಗೆ ಹಕ್ಕು – ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ. ಇನ್ನೂ ವಿಶೇಷ ನೋಂದಣಿ ಅಭಿಯಾನಕ್ಕೆ ಎರಡು ಶನಿವಾರ ಮತ್ತು ಎರಡು ಭಾನುವಾರ ದಿನ ನಿಗದಿ ಪಡಿಸಿದೆ. ನವೆಂಬರ್ 18 ಮತ್ತು19, ಡಿಸೆಂಬರ್ 2 ಮತ್ತು 3 ವಿಶೇಷ ಮತದಾರರ ನೊಂದಣಿ ನಡೆಯಲಿದೆ. ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ ಮತದಾರರ ನೋಂದಣಾಧಿಕಾರಿ, ಸಹಾಯಕ ಅಧಿಕಾರಿಗಳ ನೇಮಕ ಆಗಿದೆ. 2024 ರ ಮತದಾರರ ಕರಡು ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1785835 ಮತದಾರರ ಸಂಖ್ಯೆ ಇದೆ.

ಈ ಪೈಕಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ, 77 ತೃತೀಯ ಲಿಂಗೀಯ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1876 ಮತ ಕೇಂದ್ರಗಳಿವೆ. ಈ ಪೈಕಿ ಬೆಳ್ತಂಗಡಿ ಕ್ಷೇತ್ರದಲ್ಲಿ 229429 ಮತದಾರರಿದ್ದು, ಮೂಡಬಿದಿರೆ 206111, ಮಂಗಳೂರು ಉತ್ತರ 250590, ಮಂಗಳೂರು ದಕ್ಷಿಣ 246665, ಮಂಗಳೂರು ಕ್ಷೇತ್ರದಲ್ಲಿ 205759, ಬಂಟ್ವಾಳ 227685, ಪುತ್ತೂರು 212892, ಸುಳ್ಯ 206704 ಮತದಾರರಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು