Categories: ಮಂಗಳೂರು

ಚುನಾವಣೆಗಾಗಿ ಬರ ಪರಿಹಾರ, ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಅಣ್ಣಾಮಲೈ ಪ್ರತಿಕ್ರಿಯೆ

ಮಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರದಿಂದ ತಾರತಮ್ಯ ವಿಚಾರ ಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ನಗರದಲ್ಲಿ ಬಿಜೆಪಿ ಪರ ಮತಯಾಚಿಸಲು ಬಂದ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾಧ್ಯಮದೊಂದಿಗೆ ಮಾತನಾಡಿ, ಯುಪಿಎ ಸರಕಾರಕ್ಕೆ 10 ವರ್ಷದಲ್ಲಿ ರಾಜ್ಯ ಸರಕಾರಗಳು ಕೇಳಿದ ಬರ ಪರಿಹಾರದ ಪೈಕಿ 8 % ಮಾತ್ರ ಪರಿಹಾರ ಸಿಕ್ಕಿದೆ. 2014 -2022 ವರೆಗೂ ಎನ್ ಡಿ ಎ, ಸರಕಾರಗಳ ಬೇಡಿಕೆಯ ಪೈಕಿ 38 % ನೀಡಿದ್ದಾರೆ.

ತಮಿಳುನಾಡು -ಕರ್ನಾಟಕದ ಸರಕಾರಗಳು ಚುನಾವಣೆಗೂ ಮುನ್ನ ಇಷ್ಟು ಕೊಡಿ ಅಷ್ಟು ಅಂತ ಕೇಳುತ್ತಿದ್ದಾರೆ. ಈ ಮೂಲಕ ಒಂದು ಪೊಲಿಟಿಕಲ್ ನಾರೇಟಿವ್ ಬಿಲ್ಡ್ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಧೀಶರು ಯಾರಿಗೆ ಏನು ಕೊಡಬೇಕು ಅದನ್ನ ಕೊಟ್ಟೆ ಕೊಡುತ್ತೀವಿ ಅಂದಿದ್ದಾರೆ.

ತಮಿಳುನಾಡಿನಲ್ಲಿ ಪ್ರವಾಹ ಪರಿಹಾರ ಎಂಬ ನಾರೇಟಿವ್ ಸೆಟ್ ಮಾಡುತ್ತಿದ್ದಾರೆ. ನಾವು ಕೂಲಂಕುಷವಾಗಿ ಎಲ್ಲವನ್ನ ತಾಳೆ ಹಾಕಿದಾಗ ಎನ್ ಡಿ ಎ ಯಾರಿಗೂ ತಾರತಮ್ಯ ಮಾಡಿಲ್ಲ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.

ಇನ್ನು ಕರ್ನಾಟಕ-ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಹಾಗು ತಮಿಳುನಾಡು ನಡುವೆ ಸಹೋದರತ್ವದ ಬಾಂಧವ್ಯವಿದೆ. ಕಾಂಗ್ರೆಸ್ ತಪ್ಪು ಆಡಳಿತವೇ ಕಾವೇರಿ ವಿವಾದಕ್ಕೆ ಕಾರಣ, ಎಲ್ಲವೂ ಕಾವೇರಿ ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರಕಾರದ ಅನುಗುಣ ಚೆನ್ನಾಗಿ ನಡಿತಿದೆ.

ಇದರಲ್ಲಿ ಭಾವನೆಗಳನ್ನ ಮುಂದಿಡೋ ಬೇಡ. ಕರ್ನಾಟಕಕ್ಕೆ ಸಮರ್ಪಕ ಕುಡಿಯುವ ನೀರು ಸಿಗಲು ನಾವೆಲ್ಲಾ ಬೆಂಬಲ ನೀಡುತ್ತೇವೆ. ಇದರಲ್ಲಿ ರಾಜಕೀಯ ಮಾತನಾಡುವ ಪ್ರಶ್ನೆ ಇಲ್ಲ.

ಬಿಜೆಪಿ ಸರಕಾರವಿದ್ದಾಗ ಕಾವೇರಿ ವಿವಾದವೇ ಇರೋದಿಲ್ಲ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ನಾನು ಇತರೆ ರಾಜಕಾರಣಿಗಳ ತರಹ ಕರ್ನಾಟಕ -ತಮಿಳುನಾಡು ಎಂಬ ಅರ್ಥದಲ್ಲಿ ಮಾತನಾಡೋದಿಲ್ಲ. ಎರಡು ರಾಜ್ಯಕ್ಕೂ ಒಳ್ಳೇದು ಆಗಬೇಕು ಅದರಲ್ಲಿ ಯಾವುದೇ ಮಾತಿಲ್ಲ ಎಂದರು.

Chaitra Kulal

Recent Posts

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

16 mins ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

38 mins ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

50 mins ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

1 hour ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

1 hour ago

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

2 hours ago