News Karnataka Kannada
Monday, April 29 2024
ಮಂಗಳೂರು

ಜಿಲ್ಲಾ ಮಟ್ಟದ ‘ಲಯನ್ಸ್ ಸಿಂಗಿಂಗ್ ಸ್ಟಾರ್ಸ್’ ಕಾರ್ಯಕ್ರಮ

District Level 'Lions Singing Stars' programme
Photo Credit : News Kannada

ಮಂಗಳೂರು: ಲಯನ್ ಜಿಲ್ಲಾ ಮಟ್ಟದ ‘ಲಯನ್ಸ್ ಸಿಂಗಿಂಗ್ ಸ್ಟಾರ್ಸ್’ ಕಾರ್ಯಕ್ರಮ ಲಯನ್ ಸೇವಾ ಮಂದಿರದಲ್ಲಿ ಯಶಸ್ವಿಯಾಗಿ ಇತ್ತೀಚೆಗೆ ನೆರವೇರಿತು. 130 ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿದರು.

ಸಭಾಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆ ಅಪೇಕ್ಷಾ ಪೈ ಹಾಗೂ ತನುಶ್ರೀ ಇವರನ್ನು ಸನ್ಮಾನ ಪತ್ರ ಹಾಗೂ 5000 ರೂ. ಕೊಟ್ಟು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ ದಂಪತಿಗಳು, ಕಾರ್ಯಕ್ರಮದ ಮುಖ್ಯ ಸಂಯೋಜಕ ಸೈಮನ್ ಲೋಬೊ, ಉಪಸಂಯೋಜಕರು, ಜಿಲ್ಲಾ ಸಂಪುಟ ಸದಸ್ಯರು, ಜಿಲ್ಲಾ ಲಿಯೋ ಅಧ್ಯಕ್ಷೆ ಡಾ. ರಂಜಿತಾ ಶೆಟ್ಟಿ, ಮುಖ್ಯ ಸಲಹೆಗಾರರಾಗಿ 2ನೇ ವೈಸ್ ಜಿಲ್ಲಾ ಗವರ್ನರ್ ಅರವಿಂದ್ ಶೆಣೈ ಹಾಜರಿದ್ದರು. ಪ್ರಾಂತೀಯ ಮಟ್ಟದ ಅಂತಾಕ್ಷರಿ ಸ್ಪರ್ಧೆಯನ್ನು ಲ. ಕುಂಬ್ಳೆ ನರಸಿಂಹ ಪ್ರಭು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು