Categories: ಮಂಗಳೂರು

ಹಿಂದುಗಳ ಮೇಲೆ ಹಲ್ಲೆಗಳು, ಹತ್ಯೆ ಹೆಚ್ಚಾಗಿದೆ : ಸಿದ್ದು ವಿರುದ್ಧ ಕಟೀಲ್‌ ಕಿಡಿ

ಮಂಗಳೂರು: ನಗರದಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರೆ, ಆತಂಕವಾದ ತಾಂಡವವಾಡುತ್ತೆ. ವಿಧಾನ ಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಮೊಳಗಿತು. ಹಿಂದುಗಳ ಮೇಲೆ ಅತೀ ಹೆಚ್ಚು ಹತ್ಯೆ ಹಲ್ಲೆಗಳು ಆರಂಭವಾಗಿದೆ.

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆ ನಡೆದಿದೆ. ಹತ್ಯೆಯ ಹಿನ್ನಲೆಯನ್ನ ತನಿಖೆ ಮಾಡುವ ಮುಂಚೆಯೇ ಸಿದ್ದರಾಮಯ್ಯ ಹಗುರ ವಾಗಿರುವ ಹೇಳಿಕೆ ಕೊಡ್ತಾರೆ. ಇದು ಸಿದ್ದರಾಮಯ್ಯನವರ ಇವತ್ತು ನಿನ್ನೆಯ ಶೈಲಿಯಲ್ಲ. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಗ ಡಿಕೆ ಶಿವಕುಮಾರ್ ಇದೆ ರೀತಿ ಹೇಳಿಕೆ ಕೊಟ್ಟಿದ್ರು. ತನಿಖೆಯಲ್ಲಿ ಸಾಬೀತಾದ ಬಳಿಕ ವಿಷಯಂತರ ಮಾಡಿದ್ರು. ಕೃತ್ಯಗಳ ಹಿಂದಿನ ತನಿಖೆ ಮಾಡುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗ ತಿರುಚುವ ಕೆಲಸ ಮಾಡಿತ್ತು. ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಮೇಲೆ ದಾಳಿಯಾದಗ. ಅವರ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡ ಹೋಗಿಲ್ಲ. ನೇಹಾ ಹತ್ಯೆಯಾಗಿದೆ ಅವರದ್ದೇ ಪಕ್ಷದ ಕಾರ್ಪೋರೇಟರ್ ಮಗಳು. ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನ ಮಾಡಿಲ್ಲ. ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ನಾವು ಅಗ್ರಹಿಸುತ್ತೇವೆ.

ನಮ್ಮ ಸರಕಾರ ಇದ್ದಾಗ ಶಿವಮೊಗ್ಗ ಹರ್ಷ ಹತ್ಯೆಯಾದಗ, ಪ್ರವೀಣ್ ನೆಟ್ಟಾರ್ ಹತ್ಯೆ ಆದಾಗ ತಕ್ಷಣ ಪರಿಹಾರ ನೀಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಜೊತೆ ಎಸ್ ಡಿ ಪಿ ಐ ಒಳ ಸಂಬಂಧ ಇರಿಸಿಕೊಂಡಿದೆ. ಇವತ್ತು ಪಿ ಎಫ್ ಐ ನಿಷೇಧವಾಗಿದೆ..ಇದರಿಂದ ಹತ್ಯೆಗಳು ನಿಯಂತ್ರಣಕ್ಕೆ ಬಂದಿತ್ತು. ಈಗ ಸಿದ್ದರಾಮಯ್ಯ ಸರಕಾರದ ತುಷ್ಠಿಕರಣದಿಂದ ಮತ್ತೆ ಇಂತಹ ಹತ್ಯೆಗಳು ಜಾಸ್ತಿಯಾಗುತ್ತಿದೆ. ತುಷ್ಠಿಕರಣದಿಂದ ನೀತಿಯಿಂದಾಗಿ ಇವತ್ತು ಇಲ್ಲಿನ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ.

ಹತ್ಯೆಯಾದ್ರೆ ಹತ್ಯೆಯ ತನಿಖೆಯನ್ನ ಕಾಂಗ್ರೆಸ್ ಮಾಡ್ತಾಯಿಲ್ಲ. ಎನ್ ಐ ಎ ಸಕ್ರಿಯವಾಗಿರೋದ್ರಿಂದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ತನಿಖೆಯಾಗಿದೆ. ಕಾಂಗ್ರೆಸ್ ಇದ್ದಿದ್ರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಳ್ಳ ಹಿಡಿಯುತ್ತಿತ್ತು. ನೇಹಾ ಕುಟುಂಬದವರಿಗೂ ಪರಿಹಾರ ನೀಡುವ ಕೆಲಸ ಮಾಡಬೇಕು. ಕಾಂಗ್ರೆಸ್ ಕೈ ಗೆ ಚೊಂಬು,, ನೀವು ಈ ರಾಜ್ಯಕ್ಕೆ ಬಾಂಬ್ ಕೊಟ್ಟವರು ಅದಕ್ಕೆ ನಿಮಗೆ ಚೊಂಬು. ನಮ್ಮ ಶಾಸಕರಿಗೆ ನೀವು ಕೊಟ್ಟ ಅನುದಾನ ಎಷ್ಟು ಬಹಿರಂಗ ಪಡಿಸಿ. ಅವ್ರ ಪಕ್ಷದ ಶಾಸಕನ ನಿಧಿಯೇ ಕೊಟ್ಟಿಲ್ಲ. ಗ್ಯಾರಂಟಿಯನ್ನ ಸಮರ್ಪಕವಾಗಿ ನೀಡುತ್ತಿಲ್ಲ.

ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ದಿವಾಳಿಯಾಗುತ್ತೆ. ಕೇರಳ ರಾಜ್ಯ ದಿವಾಳಿಯಾದಗ ಹಾಗೆ ಕರ್ನಾಟಕವೂ ದಿವಾಳಿಯಾಗುತ್ತೆ. 80% ಸರಕಾರ ಇದು, ಇದನ್ನ ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದರು.

Nisarga K

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

6 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

7 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

7 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

7 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

8 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

9 hours ago