Categories: ಮಂಗಳೂರು

ಚಿತ್ಪಾವನ ಸಂಘಟನೆ ಮುಂಡಾಜೆ: ವಾರ್ಷಿಕೋತ್ಸವ ಕಾರ್ಯಕ್ರಮ

ಬೆಳ್ತಂಗಡಿ: ಚಿತ್ಪಾವನ ಸಂಘಟನೆ ಮುಂಡಾಜೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ಜರಗಿತು.

ವೇದಮೂರ್ತಿ ಸುರೇಶ್ ಗೋಖಲೆ ದೀಪ ಪ್ರಜ್ವಲನಗೊಳಿದರು. ಸಂಘಟನೆ ಅಧ್ಯಕ್ಷ ವಾಸುದೇವ ಗೋಖಲೆ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕೊಪ್ಪದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಮಹೇಶ್ ಕಾಕತ್ಕರ್ ಉಪನ್ಯಾಸ ನೀಡಿ “ಧರ್ಮದ ಜಾಗೃತಿ ನಮ್ಮಲ್ಲಿ ಇರಬೇಕು. ಅಹಿಂಸೆ , ಸತ್ಯ, ಮಾತು, ಶರೀರ, ಆಂತರಿಕ ಶುದ್ದಿ, ಇಂದ್ರಿಯ ನಿಗ್ರಹ, ಜ್ಞಾನ, ವಿಜ್ಞಾನ ಗಳ ಅರಿವೇ ನಿಜವಾದ ಧರ್ಮ. ನಮ್ಮ ಕರ್ತವ್ಯಗಳನ್ನು ಅರಿತು ಪ್ರಬುದ್ಧ ಮನಸ್ಸಿನಿಂದ ಕೆಲಸ ಮಾಡಿದರೆ ಶ್ರೇಯಸ್ಸು ಸಾಧ್ಯ. ನಂಬಿಕೆಗಳ ಮೂಲಕ ಮಾಡುವ ಕಾರ್ಯಗಳಿಗೆ ಜಯವಿದೆ.”ಎಂದರು.

ತಾಲೂಕು ಸಂಘಟನೆ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಮಾತನಾಡಿ “ಸಂಘಟನೆಗಳ ಬೆಳವಣಿಗೆಗೆ ಒಗ್ಗಟ್ಟು ಮುಖ್ಯ.ಜೀವನದಲ್ಲಿ ಕಾಣುವ ಕೆಲವು ಹಿನ್ನಡೆಗಳು, ಭವಿಷ್ಯದ ಬೆಳವಣಿಗೆಗೆ ಮೂಲವಾಗುತ್ತವೆ” ಎಂದರು.

ವೈದಿಕ ಕ್ಷೇತ್ರದ ಕರುಣಾಕರ ಅಭ್ಯಂಕರ್, ಸ್ವ ಉದ್ಯೋಗ ಕ್ಷೇತ್ರದ ಪ್ರಹ್ಲಾದ ಫಡಕೆ, ಜ್ಯೋತಿಷಿ ಗಿರೀಶ್ ಡೋಂಗ್ರೆ,
ಸಮಾಜ ಸೇವೆಯ ಶಕುಂತಳಾ ಮೆಹೆಂದಳೆ, ಧಾರ್ಮಿಕ ಕ್ಷೇತ್ರದ ಶಾಂತಾ ಠೋಸರ್ ಇವರನ್ನು ಸನ್ಮಾನಿಸಲಾಯಿತು. ಈ ಬಾರಿಯ
ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯದರ್ಶಿ ಶಶಿಧರ್ ಠೋಸರ್ ವರದಿ ವಾಚಿಸಿದರು. ನಾರಾಯಣ ಫಡಕೆ ಹಾಗೂ ಚಿತ್ರಾ ಭಿಡೆ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಚಿದಂಬರ ಕಾಕತ್ಕರ್ ಹಾಗೂ ಬಳಗದವರಿಂದ ವೇಣು ವಾದನ ಕಾರ್ಯಕ್ರಮ ಜರಗಿತು.
ಪದಗ್ರಹಣ:
ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಆಯ್ಕೆಯಾದ ಸುಶ್ಮಾ ಶಶಾಂಕ ಭಿಡೆ, ಕಾರ್ಯದರ್ಶಿ ರಂಗನಾಥ ಹೆಬ್ಬಾರ್ ಹಾಗು ನೂತನ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

Sneha Gowda

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

29 mins ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

45 mins ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

1 hour ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

1 hour ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

2 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

2 hours ago