News Karnataka Kannada
Tuesday, April 30 2024
ಮಂಗಳೂರು

ಮಂಗಳೂರಿಗೆ ಮೋದಿ; ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಬಿಲ್ಲವ ಮುಖಂಡರು

Billv
Photo Credit :

ಮಂಗಳೂರು: ಮಂಗಳೂರಿಗೆ ಮೋದಿ ಆಗಮನ ಹೊತ್ತಲ್ಲೇ ಮತ್ತೆ ನಾರಾಯಣ ಗುರು ಟ್ಯಾಬ್ಲೋ ವಿವಾದ ಮುನ್ನಲೆಗೆ ಬಂದಿದೆ. ಹೌದು. . ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೊ ನಡೆಯಲಿದೆ. ಇದಕ್ಕೂ ಮುನ್ನ ಮೋದಿ ಅವರು ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದಾರೆ.

ಹೀಗಾಗಿ ಚುನಾವಣೆ ಸಂದರ್ಭ ಮಾತ್ರ ನಾರಾಯಣ ಗುರುಗಳ ಬಗ್ಗೆ ಬಿಜೆಪಿಗೆ ನೆನಪು ಎಂದು ಬಿಲ್ಲವ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್, ಪ್ರತಿ ಚುನಾವಣೆಯ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿಗಳು ಮಂಗಳೂರಿಗೆ ಕಾಲಿಡುತ್ತಾರೆ. ಕೊನೆಯ ಕ್ಷಣದಲ್ಲಿ ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ರೋಡ್ ಶೊ ಮುನ್ನ ನಾರಾಯಣ ಗುರುಗಳಿಗೆ ಮಾಲಾರ್ಪಣೆ ಗೌರವ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆಯಾಗುತ್ತಿದೆ. ಬಿಜೆಪಿಯ ಸ್ಥಳೀಯ ಅಭ್ಯರ್ಥಿಯ ಸಾಮಾಜಿಕ ಜಾಲತಾಣಗಳ ಪೋಸ್ಟರ್ ಗಳಲ್ಲಿ ನಾರಾಯಣ ಗುರುಗಳ ಭಾವಚಿತ್ರ ಕಂಡು ಬರುತ್ತಿದೆ. ಮೋದಿಜಿ ಭಾವ ಚಿತ್ರ, ನಾರಾಯಣ ಗುರುಗಳ ಭಾವ ಚಿತ್ರ, ಕೋಟಿ ಚೆನ್ನಯ್ಯರ ಭಾವಚಿತ್ರ ಕಾಣಿಸುತ್ತಿದೆ.

ಎರಡು ವರ್ಷದ ಹಿಂದೆ ಮಹಿಳಾ ಸಬಲೀಕರಣ ವಿಚಾರದಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ಗೆ ಅವಕಾಶ ಕೊಟ್ರಿದ್ರೆ ಅದುವೇ ಬಹಳ ದೊಡ್ಡ ಗೌರವವಾಗುತ್ತಿತ್ತ್ತು. ಅಳತೆ ಸರಿಯಿಲ್ಲ ಎಂದು ಗಣರಾಜ್ಯೋತ್ಸವ ಪರೇಡ್ ನಿಂದ ಟ್ಯಾಬ್ಲೋ ರಿಜೆಕ್ಟ್ ಮಾಡಿದ್ರು. ಯಾವ ಅಳತೆ ಸರಿಯಲ್ಲ ಎಂದು ಮಾಹಿತಿ ನೀಡಲಿಲ್ಲ . ಕೊನೆಯ ಕ್ಷಣದ ವರೆಗೂ ಯಾವ ಸ್ಥಳೀಯ ಭಾ. ಜ ಪ ನಾಯಕರು ಪತ್ರಿಕಾಗೋಷ್ಠಿ ನಡೆಸಲಿಲ್ಲ. ಬರುವ ವರ್ಷದ ಪರೇಡ್ ಗೆ ನಾವೇ ಗುರುಗಳ ಟ್ಯಾಬ್ಲೋ ಮಾಡಿ ಕಲಿಸುತ್ತೇವೆ ಅಂದಿದ್ರು.

ಟ್ಯಾಬ್ಲೋ ನಿರಾಕರಣೆಯ ವಿರುದ್ಧ ನಡೆದ ಹೋರಾಟದಲ್ಲೂ ಯಾವ ಬಿಜೆಪಿ ನಾಯಕರು ಹೆಜ್ಜೆ ಹಾಕಲಿಲ್ಲ. 10ನೇ ತರಗತಿ ಸಮಾಜ ವಿಜ್ಞಾನದಿಂದ ನಾರಾಯಣ ಗುರುಗಳ ಪಾಠ ತೆಗೆಯುವ ಕೆಲಸ ನಡೆಯಿತು. ಸಮಾಜ ಒತ್ತಡ ಜಾಕಿ ಪ್ರತಿಭಟನೆಗೆ ಇಳಿದ ಮೇಲೆ ಗುರುಗಳ ಪಾಠ ತರುತ್ತಾರೆ.

ಯಾವ ಬಿಜೆಪಿಯವರು ಇದು ಗುರುಗಳಿಗೆ ಆದ ಅನ್ಯಾಯ ಅಂತಾ ಹೇಳಲಿಲ್ಲ. ಮಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥನಿಗೆ ಸನ್ಮಾನ ಮಾಡುವ ಕೆಲಸ ಆಯಿತು. ಹರೀಶ್ ಪೂಂಜ ನೇತೃತ್ವದಲ್ಲಿ ವೇಣೂರು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕರ್ಕೊಂಡು ಬರ್ತಾರೆ. ಸಮಾಜದಿಂದ ವಿರೋಧ ವ್ಯಕ್ತವಾದರೂ ಕರೆಸಿ ಸನ್ಮಾನ ಮಾಡುತ್ತಾರೆ. ಕರೆಸಿದ್ದೇವೆ ಏನು ಮಾಡಿದ್ರು ಎಂದು ಸಮಾಜಕ್ಕೆ ಸವಾಲು ಹಾಕುತ್ತಾರೆ. ಅವತ್ತು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದು ಮಾತ್ರ ಅಲ್ಲ ಇಡೀ ಸಮಾಜಕ್ಕೆ ಅವಮಾನ ಮಾಡುತ್ತಾರೆ.

ಈಗ ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ ವ್ಯಕ್ತಿ ಚುನಾವಣೆಗೆ ನಿಂತಾಗ ಎಲ್ಲಿ ಬಿಲ್ಲವ ಸಮಾಜ ಕೈ ಬಿಡುತ್ತೋ ಅನ್ನೋ ಆತಂಕ ಎದುರಾದಾಗ ನಾರಾಯಣ ಗುರುಗಳಿಗೆ ಗೌರವ ಕೊಡುವ ನೆಪದಲ್ಲಿ ಸಮಾಜಕ್ಕೆ ಮತ್ತೊಮ್ಮೆ ಮಂಕು ಬೂದಿ ಎರೆಚುವ ಕೆಲಸ ಮಾಡುತ್ತಿದ್ದಾರೆ. ಕೋಟಿ ಚೆನ್ನಯ್ಯರು ಪುಂಡರು ಎಂದು ಹೇಳಿದ ವ್ಯಕ್ತಿ ಇವತ್ತಿಗೂ ಬಿಜೆಪಿಯಲ್ಲಿ ಇದ್ದಾರೆ. ಇನ್ನೂ ಪಕ್ಷದಿಂದ ಆ ವ್ಯಕ್ತಿಯನ್ನ ಉಚ್ಚಾಟನೆ ಮಾಡಲಿಲ್ಲ. ಕೋಟಿ ಚೆನ್ನಯ್ಯರ ಬಿಲ್ಲವ ಸಮಾಜದ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಗೆ ನೇರವಾಗಿ ಬಿಜೆಪಿ ಬೆಂಬಲ ನೀಡುತ್ತಿದೆ. ಇಲ್ಲವಾದಲ್ಲಿ ಆ ವ್ಯಕ್ತಿಯನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು. ಯಾವ ನೈತಿಕತೆಯಿಂದ ಕೋಟಿ ಚೆನ್ನಯ್ಯ ನಾರಾಯಣ ಗುರುಗಳ ಅವರ ಫೋಟೊಗಳನ್ನ ಬಳಕೆ ಮಾಡುತ್ತೀರಾ?.

ಅವಕಾಶ ಇದ್ದಾಗ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರು ಇಡದೆ. ಈಗ ಹೆಸರು ಇಡುತ್ತೇವೆ ಎಂದು ಹೇಳುತ್ತಿದ್ದೀರ. ನಿಮ್ಮೆಲ್ಲ ನಾಟಕಗಳನ್ನ ಸಮಾಜ ನೋಡುತ್ತಿದೆ. ಮತ್ತೆ ಸಮಾಜದ ದಾರಿ ತಪ್ಪಿಸಲು ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಬೇಡಿ. ಬಿಲ್ಲವ ಸಮಾಜ ಈ ಬಾರಿ ಉತ್ತರ ಕೊಡಲೇ ಬೇಕಾಗುತ್ತದೆ ಕೊಟ್ಟೆ ಕೊಡುತ್ತದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು