Categories: ಮಂಗಳೂರು

ಬೆಳ್ತಂಗಡಿ: ಉಜಿರೆ ರತ್ನ ಮಾನಸದಲ್ಲಿ ತೆನೆಹಬ್ಬ, ಹೊಸ ಅಕ್ಕಿ ಊಟ

ಬೆಳ್ತಂಗಡಿ: ಇಲ್ಲಿನ ರತ್ನಮಾನಸ ವಸತಿ ನಿಲಯದಲ್ಲಿ ತೆನೆಹಬ್ಬ ಮತ್ತು ಹೊಸ ಅಕ್ಕಿ ಊಟ ಕಾರ್ಯಕ್ರಮ ನಡೆಯಿತು. ಉಜಿರೆ ಶ್ರೀ ಧ. ಮಂ. ವಸತಿ ಪಿ. ಯು. ಕಾಲೇಜಿನ ಉಪನ್ಯಾಸಕ ಸುನಿಲ್ ಪುರಾಣಿಕ್ ಹೊಸ ಅಕ್ಕಿ ಊಟ ಆಚರಣೆ,ವಿಶೇಷತೆ ಕುರಿತು ಮಾತನಾಡಿ ಇಂತಹ ಆಚರಣೆ ಮೂಲಕ ಹಿಂದಿನ ಆಚಾರ ವಿಚಾರಗಳ ಕುರಿತು ತಿಳಿಸಿ ಉಳಿಸುವ ಕಾರ್ಯ ಆಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಧ. ಮಂ.ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಮನಮೋಹನ್ ನಾಯಕ್, ಉಜಿರೆ ಸರಕಾರಿ ಆಸ್ಪತ್ರೆಯ ಹಿರಿಯ ಪರಿವೀಕ್ಷಣಾಧಿಕಾರಿ ಸೋಮನಾಥ್, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು,ಮೈತ್ರಿ ವಸತಿ ನಿಲಯದ ಲಲಿತಾ ಮುದ್ರಾಡಿ, ಅಜ್ಜರಕಲ್ಲು ಕೃಷಿ ವಿಭಾಗದ ಮೋಹನ್ ಭಾಗವಹಿಸಿದ್ದರು.

ರತ್ನ ಮಾನಸದ ನಿಲಯ ಪಾಲಕ ಯತೀಶ್ ಬಳಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿ ರವಿಚಂದ್ರ, ತ್ರಿಭುವನ್ ಉದಯರಾಜ್ ಇನ್ನಿತರು ಸಹಕರಿಸಿದರು. ಬೆಳಿಗ್ಗೆ ಗದ್ದೆಯಿಂದ ಭತ್ತದ ತೆನೆ ತಂದು ಪೂಜಿಸಲಾಯಿತು ಮಧ್ಯಾಹ್ನ ಹೊಸ ಅಕ್ಕಿಯ ಸಹ ಭೋಜನ ನಡೆಯಿತು.

Ashika S

Recent Posts

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

10 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

20 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

8 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

9 hours ago