Categories: ಮಂಗಳೂರು

ಬೆಳ್ತಂಗಡಿ | ಕಾಜೂರು ದರ್ಗಾ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜ ನೆರವು ಶ್ಲಾಘನೀಯ: ಅಹ್ಮದ್ ಬಾವ

ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ದ ಕಾಜೂರು ದರ್ಗಾದ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಯಾವುದೇ ತಾರತಮ್ಯ ಮಾಡದೆ ಎಲ್ಲ ರೀತಿಯ ನೆರವನ್ನೂ ನೀಡಿದ್ದಾರೆ. ಇದನ್ನು ಸಹಿಸದವರು ವ್ಯಂಗ್ಯ ಮಾಡುವುದು ಖಂಡನೀಯ. ಅಲ್ಲಿನ ದರ್ಗಾದ ವಿಚಾರವನ್ನು ನೋಡಿಕೊಳ್ಳಲು ಕಾಜೂರಿನ ಆಡಳಿತ ಮಂಡಳಿಯಿದೆ, ಜನರಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಸಹಿಸೆವು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅಹ್ಮದ್ ಬಾವ ಸ್ಪಷ್ಟಪಡಿಸಿದ್ದಾರೆ.

ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗೊಂದಲ ಸೃಷ್ಟಿಸುವವರಿಗೆ ಎಚ್ಚರಿಕೆ ನೀಡಿದರು. ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಕ್ಕೆ ಕಾಜೂರಿನ ಜನತೆಗೆ ಯಾವುದೇ ತಾರತಮ್ಯ ಮಾಡದೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ನೆರೆ ಬಂದಾಗ ಅತಿ ಹೆಚ್ವು ಸಮಸ್ಯೆಗೆ ಒಳಗಾಗಿದ್ದ ಕಾಜೂರು ಪ್ರದೇಶದ ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು ಎಲ್ಲ ರೀತಿಯ ನೆರವನ್ನೂ ಯಾವುದೇ ಜಾತಿ ಧರ್ಮದ ತಾರತಮ್ಯ ತೋರದೆ ನೀಡಿದ್ದಾರೆ. ಇದು ಕಾಜೂರಿನ ಎಲ್ಲ ಜನರಿಗೂ ತಿಳಿದಿರುವ ವಿಚಾರವಾಗಿದೆ.ಕೊರೊನಾ ಸಂದರ್ಭ ತಮ್ಮದೇ ಖರ್ಚಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಚಿಕಿತ್ಸೆ‌ಗೆ ವ್ಯವಸ್ಥೆ ಮಾಡಿರುವುದನ್ನು ಮರೆಯುವಂತಿಲ್ಲಾ.

ಇದೀಗ ಕಾಜೂರು ದರ್ಗಾದ ಆಡಳಿತ ಸಮಿತಿಯ ಹಾಗೂ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮುಸಾಫಿರ್ ಖಾನ ಕಟ್ಟಡವನ್ನು ನಿರ್ಮಿಸಲು ಶಾಸಕರ ಶಿಫಾರಸ್ಸಿನ ಮೇಲೆ ರಾಜ್ಯ ವಕ್ಫ್ ಸಚಿವೆ ಶಶಿಕಾಲಾ ಜೊಲ್ಲೆ ಹಾಗೂ ರಾಜ್ಯ ವಕ್ಪ್ ಮಂಡಳಿಯ ಅಧ್ಯಕ್ಷ ಶಾಫಿ ಸ ಅದಿಯವರ ಪ್ರಯತ್ನದಿಂದ ಇದೀಗ 1.5ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಹಾಗೂ ಅದಕ್ಕಾಗಿ ಶಾಸಕರು ಹಾಗೂ ಸರಕಾರವನ್ನು ಅಭಿನಂದಿಸುತ್ತೇವೆ ಎಂದರು.

ಅಲ್ಲದೆ ಕಾಜೂರಿನಲ್ಲಿ ಆವರಣಗೋಡೆ ನಿರ್ಮಾಣಕ್ಕೆ ಶಾಸಕರ ಶಿಫಾರಸ್ಸಿನ ಮೇಲರ ರೂ. 30ಲಕ್ಷ ಅನುದಾನ ಮಂಜೂರು ಗೊಳಿಸಿದ್ದು ಇದರ ಕಾಮಗಾರಿಯೂ ನಡೆಯುತ್ತಿದೆ ಇದಲ್ಲದೆ ಕೆಸರು, ಧೂಳು‌ಮಯವಾಗಿರುತ್ತಿದ್ದ ರಸ್ತೆ ಸೇರಿದಂತೆ ಇತರ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಶಾಸಕ ಹರೀಶ್ ಪೂಂಜ ಅವರು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ‌. ತಾಲೂಕಿನಲ್ಲಿ ದುಸ್ಥಿತಿಯಲ್ಲಿರುವ ಮಸೀದಿಗಳ ಪಟ್ಟಿಯನ್ನು ಮಾಡಿದ್ದು ಇದೀಗ ಪಡಂಗಡಿ‌ ಮಸೀದಿಗೆ ರೂ.5 ಲಕ್ಷ ಅನುದಾನ ಬಂದಿದೆ. ಕಾಜೂರಿನ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು ಕಾಜೂರಿನ ಜನರ ಪರವಾಗಿ ಅವರ ಕೊಡುಗೆಗಳಿಗೆ ಅವರನ್ನು ಅಭಿನಂದಿಸುತ್ತೇವೆ ಎಂದರು.

ಪೂರಕವಾಗಿ ಮಾತನಾಡಿದ ಕಾಜೂರು ದರ್ಗಾದ ಆಡಳಿತ‌ ಮಂಡಳಿ ಸದಸ್ಯ ಬದ್ರುದ್ದೀನ್ ಕಾಜೂರು ಅವರು ಕಳೆದ ಒಂಭತ್ತು ವರ್ಷಗಳಿಂದ ದರ್ಗಾ ಸಮಿತಿ ಅಸ್ತಿತ್ವದಲ್ಲಿರಲಿಲ್ಲ. ಪೂಂಜ ಅವರು‌ ಕಳೆದ ಬಾರಿ ಸಮಿತಿ ಆಗುವಲ್ಲಿ ಶ್ರಮಿಸಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಗುರುವಾಯನಕೆರೆಯ ಸಲೀಂ ಎಂಬವರು ಕಾಜೂರಿಗೆ ಶಾಸಕರು ನೀಡಿದ ಕೊಡುಗೆಯ ಬಗ್ಗೆ ಅತ್ಯಂತ ವ್ಯಂಗವಾದ ರೀತಿಯಲ್ಲಿ ಮಾತನಾಡಿದ್ದು ಇದನ್ನು ನಾವು ಖಂಡಿಸುತ್ತೇವೆ. ಕಾಜೂರಿನ ವಿಚಾರ ನೋಡಿಕೊಳ್ಳಲು ಅಲ್ಲಿ ಆಡಳಿತ ಮಂಡಳಿಯಿದೆ ಕಾಜೂರಿನ ಜನರಿದ್ದಾರೆ ಅದಕ್ಕೆ ಸಲೀಂಅವರ ಎಚ್ಚರಿಕಯೂ ಬೇಡ ಸಲಹೆಯೂ ಬೇಕಾಗಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯವನ್ನು ತಂದುಗೊಂದಲ ಸೃಷ್ಟಿಸಿ ಅಭಿವೃದ್ಧಿಗೆ ತೊಡಕನ್ನುಂಟುಮಾಡುವುದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ.

ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ನಮ್ಮ ಬೆಂಬಲ ಸದಾ ಇದ್ದೇ ಇದೆ ಎಂದರು. ಗೋಷ್ಠಿಯಲ್ಲಿ ಅಬ್ದುಲ್ ಅಜೀ಼ಜ್ ಕಾಜೂರು, ಹಂಸ಼ ಕಾಜೂರು, ಮಹಮ್ಮದ್ ಉಜಿರೆ ಇದ್ದರು.

Sushma K

Recent Posts

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

5 seconds ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

13 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

23 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago