Categories: ಮಂಗಳೂರು

ಬೆಳ್ತಂಗಡಿ: ಜ 7 ಕಾಂಗ್ರೆಸ್ ಪಕ್ಷದಿಂದ ಬ್ರಹತ್ ಪ್ರತಿಭಟನೆ

ಬೆಳ್ತಂಗಡಿ: ಮುಗೆರಡ್ಕದಲ್ಲಿ ನಡೆಯುವ ಅಕ್ರಮ ಮರಳು ದಂದೆ,ಮತ್ರು 250 ಕೋಟಿ ವೆಚ್ಚದ ನೀರಾವರಿ ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಸರಕಾರದ ಜನವಿರೋದಿ ನಡವಳಿಕೆಯ ವಿರುದ್ದ ಜ 7 ರಂದು ಮಿನಿ ವಿದಾನಸೌದದ ಎದುರು ಬ್ರಹತ್ ಪ್ರತಿಭಟನೆ ನಡೆಸಿ ಬಳಿಕ ಮೊಗೆರಡ್ಕವರೆಗೆ ವಾಹನ ಜಾಥಾ ನಡೆಸಿ ಅಲ್ಲಿನ ಅಕ್ರಮ ಮರಳುಗಾರಿಕೆ ಮತ್ತು ನೀರಾವರಿ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪೆಟ್ರೋಲ್, ಡಿಸೇಲ್ ,ಗ್ಯಾಸ್ ಬೆಲೆ ಗಗನಕ್ಜೆ ಏರಿದೆ, ವಿಮಾನ ನಿಲ್ದಾಣ, ಕಾರ್ಖಾನೆ, ಬ್ಯಾಂಕ್ , ಎಲ್ ಐ ಸಿ , ಬಂದರುಗಳನ್ಬು ಖಾಸಗೀಕರಣ ಗೊಳಿಸುತ್ತಿದೆ ಸರಕಾರ, ಯುವಕರಿಗೆ ಉದ್ಯೋಗ ನೀಡುತ್ತಿಲ್ಲ, ಬೆಲೆಏರಿಕೆ ಯಿಂದ ರೈತರು ಕಂಗಾಲಾಗಿದ್ದಾರೆ.

ಇತ್ತಿಚೆಗೆ ಜವಾಬ್ದಾರಿಯುತ ಸಚಿವರು ಅಡಿಕೆ ಬೆಳೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ ರೈತರನ್ಬು ದಾರಿ ತಪ್ಪಿಸಲು ಹೊರಟಿದ್ದಾರೆ. ರೈತರ ಮುಂದೆ ಸಚಿವರು ಕ್ಷಮೆಯಾಚಿಸಬೇಕು. ರೈತರು ಇಂತಹ ಮಾತಿಗೆ ಕಿವಿಗೊಡಬೇಡಿ. ಅಡಿಕೆಗೆ ಉತ್ತಮ ಬೆಲೆ ಸಿಗಲಿದೆ.ಅಡಿಕೆ ಬೆಳೆಸಲು ಹಿಂಜರಿಯಬೇಡಿ ಎಂದರು.

ಅನ್ಬ ಭಾಗ್ಯ ಯೋಜನೆಯಲ್ಲಿ ಅಕ್ಜೆ ಕಡಿತ ಮಾಡಿ ಬಡವರಿಗೆ ಅನ್ಯಾಯ ಮಾಡಿದ ಸರಕಾರ ಅವಶ್ಯ ದಿನ ಬಳಕೆ ವಸ್ತುಗಳ ಮೇಲೆ ಜಿ ಎಸ್ ಟಿ ದರ ವಿದಿಸಿ ಜನರಿಗೆ ಅನ್ಯಾಯಾಡಿದೆ.ಬಿ ಪಿ ಎಲ್ ಕಾರ್ಡ್ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ, ಜಾತಿ ದರ್ಮಗಳ ನಡುವೆ ಒಟಿಗಾಗಿ ವಿಷ ಬೀಜ ಬಿತ್ತುವ ಕಾರ್ಯ ತಾಲೂಕಿನಲ್ಲಿ ನಡೆಯುತ್ತಿದ್ದು ಇದರ ವಿರುದ್ದವೂ ಪ್ರತಿಭಟನೆ ನಡೆಸಲಿದ್ದೆವೆ ಎಂದರು.

ಜ 8 ರಿಂದ ನೇತ್ರಾವತಿ ಉಳಿಸಿ ನಡೆಯುವ ಪಾದಯಾತ್ರೆ ಬಗ್ಗೆ ಮಾಹಿತಿ ಇಲ್ಲ ಇದಕ್ಜೆ ನನ್ನ ಬೆಂಬಲವೂ ಇಲ್ಲ ಎಂದರು. ಮಾಜಿ ಸಚಿವ ಗಂಗಾದರ ಗೌಡ ಮಾತನಾಡಿ ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ಕಾರ್ಯ ಕಾಂಗ್ರೆಸ್ ಮಾಡುತ್ತಿದ್ದು ಜನರ ಬಳಿ ಇಂದಿರಾ ಗಾಂದಿ ರಥಯಾತ್ರೆ ಮೂಲಕ ಗ್ರಾಮ ಗ್ರಾಮಗಳಿಗೆ ತೆರಳಿ ಜನರಿಗೆ ಸರಕಾರದ ವೈಫಲ್ಯ ಗಳನ್ನು ತಿಳಿಸಲಿದ್ದೇವೆ ಎಂದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ರಂಜನ್ ಗೌಡ,ಶೈಲೇಶ್ ಕುಮಾರ್,ನಗರ ಪಂಚಾಯತ್ ಸದಸ್ಯ ಜಗದೀಶ್, ಮುಖಂಡರುಗಳಾದ ಕೇಶವಗೌಡ ಬೆಳಾಲು,ಅಶ್ರಪ್ ನೆರಿಯ,ಅಬ್ದುಲ್ ರಹಿಮಾನ್ ಪಡ್ಪು,ರವಿ ಕೋಟ್ಯಾನ್,ಎಸಿ ಮ್ಯಾಥ್ಯೂ, ಶೋಬಾ ನಾರಾಯಣ ಗೌಡ,ಭರತ್ ಕುಮಾರ್,ರವಿ ,ನಾರಾಯಣ ಗೌಡ ಮುಂಡಾಜೆ,ಮೆಹಬೂಬ್ ಉಪಸ್ಥಿತರಿದ್ದರು.

Sneha Gowda

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

5 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

5 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

5 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago