Categories: ಮಂಗಳೂರು

ಬಂಟ್ವಾಳ: ಶಿಕ್ಷಕರ ದಿನಾಚರಣೆಯ ಸಂಭ್ರಮಾಚರಣೆ

ಬಂಟ್ವಾಳ: ಯಾವಾಗ್ಲೂ ಸ್ಟ್ರಿಕ್ಟ್ ಆಗಿರೋ ಆಡಳಿತಾಧಿಕಾರಿ ಗುತ್ತಿನ ಯಜಮಾನನಾಗಿದ್ದರೆ, ಮುಖ್ಯಶಿಕ್ಷಕಿ ಕೋಳಿ ಹಿಡಿದು ಅಜ್ಜಿಯಾಗಿದ್ದರೆ, ಶಿಕ್ಷಕರೊಬ್ಬರು ಟೀಚರ್ ಗೆರಸೆ ಹಿಡಿದಿದ್ದರು, ಇನ್ನಿಬ್ಬರು ಶಿಕ್ಷಕರು ಹಿಡಿಸೂಡಿ ಮಾಡುತ್ತಿದ್ದರು.
ಡ್ರಾಯಿಂಗ್ ಮಾಸ್ಟ್ರು ಮುಂಡಾಸು ಕಟ್ಟಿ ಅಡಿಕೆಯ ಸಿಪ್ಪೆ ಸುಲಿಯುತ್ತಿದ್ದು.. ಒಬ್ಬೊಬ್ಬರು ಒಂದೊಂದು ವೇಷತೊಟ್ಟಿದ್ದರು. ಒಟ್ಟಿನಲ್ಲಿ ಕ್ಲಾಸಿಗೆ ಬಂದು ಪಾಠ ಮಾಡ್ತಿದ್ದ ಶಿಕ್ಷಕರೆಲ್ಲಾ ವೇಷ ತೊಟ್ಟು‌ಅಭಿನಯದಲ್ಲಿ‌ ತೊಡಗಿದ್ದು, ಹಲವರು ಡ್ಯಾನ್ಸಿಂಗ್ ಮೂಡ್ ನಲ್ಲಿದ್ರು.
ಹೌದು ಈ ದೃಶ್ಯಾವಳಿಗಳೆಲ್ಲಾ ಕಂಡು ಬಂದದ್ದು. ಬಂಟ್ವಾಳ ತಾಲೂಕಿನ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ. ಮಕ್ಕಳ ದಿನಾಚರಣೆಗೆ ಮಕ್ಕಳೆಲ್ಲಾ ವೇಷ ತೊಟ್ಟು ಸಂಭ್ರಮಿಸಿದಂತೆ, ಶಿಕ್ಷಕರ ದಿನದ ಅಂಗವಾಗಿ ಶಿಕ್ಷಕರು ವೇಷ ತೊಟ್ಟು, ಒಂದಷ್ಟು ಹೊತ್ತು ಮಕ್ಕಳಿಗೆ  ಸಂಭ್ರಮ ನೀಡಿದ್ದು, ಮಕ್ಕಳೆಲ್ಲರೂ  ಸಂತಸ ಪಟ್ಟರು.
ಜಾನಪದ ಹಾಡಿನ ಮೂಲಕ ಶಿಕ್ಷಕರು ಹಳ್ಳಿಯ ಬದುಕನ್ನು  ಸುಂದರವಾಗಿ ಕಟ್ಟಿಕೊಟ್ಟರು.ಜೊತೆಗೆ ಸೆಮಿಕ್ಲಾಸಿಕಲ್ ಹಾಡಿನ ನೃತ್ಯ, ಕೇರಳದ ಸುಗ್ಗಿ ನೃತ್ಯ, ದೀಪ ಹಿಡಿದ ನೃತ್ಯ, ವೈಯುಕ್ತಿಕ ಗೀತೆ, ಸಮೂಹ ಗೀತೆಗಳು ಗಮನಸೆಳೆದವು.
ಶಾಲಾ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ, ಟ್ರಸ್ಟಿ ಸುಭಾಶಿಣಿ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಎಂ.ವೀರಪ್ಪ ನಾಯ್ಕ್ ಕಾರ್ಯಕ್ರಮ ಕ್ಕೆ ಸಾಕ್ಷಿಗಳಾಗಿದ್ದರು. ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ವಿ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಅಪರಾಹ್ನದ ವರೆಗೆ ನಡೆದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.
Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

5 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

5 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

5 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

6 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

6 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

6 hours ago