News Karnataka Kannada
Sunday, April 28 2024
ಮಂಗಳೂರು

ಬಂಟ್ವಾಳ: ಇಂದು ೧೦೨.೫ ಕೋ.ರೂ.ಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಿರುವ ಶಾಸಕ ರಾಜೇಶ್ ನಾಯ್ಕ್

Bantwal: MLA Rajesh Naik held an emergency meeting with officials in connection with the natural calamity.
Photo Credit : By Author

ಬಂಟ್ವಾಳ: ಲೋಕೋಪಯೋಗಿ ಹಾಗೂ ಪಂಚಾಯತ್‌ರಾಜ್-ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಬಂಟ್ವಾಳ ಕ್ಷೇತ್ರದ ೫೬ ಗ್ರಾಮಗಳ ೨೫೩ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಯೋಗ ದೊರಕಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಇಂದು ೧೦೨.೫ ಕೋ.ರೂ.ಗಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ೨೮.೫ ಕೋ.ರೂ.ವೆಚ್ಚದಲ್ಲಿ ತೀರಾ ಗ್ರಾಮೀಣ ೨೩೧ ಕಾಮಗಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ೭೩.೭೫ ಕೋ.ರೂ.ಗಳ ೨೨ ಪ್ರಮುಖ ರಸ್ತೆಗಳ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಯಲಿದೆ. ಆ. ೨೩ರ ಬೆಳಗ್ಗೆ ೭ಕ್ಕೆ ಪೊಳಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಶಿಲಾನ್ಯಾಸ ಕಾಮಗಾರಿ ಆರಂಭಗೊಳ್ಳಲಿದ್ದು, ಬಳಿಕ ದಿನವಿಡೀ ಕ್ಷೇತ್ರದ ವಿವಿಧ ಭಾಗಗಳಲ್ಲಿ ಆಯಾಯಾ ರಸ್ತೆಗಳಿಗೆ ಶಿಲಾನ್ಯಾಸ ನಡೆಯಲಿದೆ.

ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿ ಚರಂಡಿ ನಿರ್ಮಾಣಕ್ಕೆ ೪೦ ಲಕ್ಷ ರೂ., ಶ್ರೀ ಪೊಳಲಿ ರಾಮಕೃಷ್ಣ ತಪೋವನ ರಸ್ತೆ ಅಭಿವೃದ್ಧಿಗೆ ೧೦ ಲಕ್ಷ ರೂ. ಹಾಗೂ ಬಂಟ್ವಾಳ ಕ್ಷೇತ್ರದ ೫೬ ಗ್ರಾಮಗಳ ೨೩೧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ೨೮ ಕೋ.ರೂ.ಗಳ ಅನುದಾನದಲ್ಲಿ ಚಾಲನೆ ದೊರಕಲಿದೆ.

ಅರಳ ದ್ವಾರದ ಬಳಿ ಮೂಲರಪಟ್ಣ-ಸೊರ್ನಾಡು ರಸ್ತೆಗೆ ೪.೧೦ ಕೋ.ರೂ., ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ರಸ್ತೆಗೆ ೧.೨೫ ಕೋ.ರೂ., ಅಣ್ಣಳಿಕೆಯಲ್ಲಿ ರಾಯಿ-ಅಣ್ಣಳಿಕೆ ರಸ್ತೆಗೆ ೨ ಕೋ.ರೂ., ಮೈಂದಾಳದಲ್ಲಿ ಮಣಿಹಳ್ಳ-ಸರಪಾಡಿ-ಬಜ ರಸ್ತೆಗೆ ೭ ಕೋ.ರೂ., ಸರಪಾಡಿಯಲ್ಲಿ ಸರಪಾಡಿ-ಪೆರ್ಲ-ಬೀಯಪಾದೆ ರಸ್ತೆಗೆ ೩ ಕೋ.ರೂ., ಮುಲ್ಕಾಜೆಮಾಡದಲ್ಲಿ ಕುಂಟಾಲಪಲ್ಕೆ-ಉಳಿ ರಸ್ತೆಗೆ ೭ ಕೋ.ರೂ., ಪಣೋಲಿಬೈಲಿನಲ್ಲಿ ಮಾರ್ನಬೈಲು-ಮಂಚಿ-ಸಾಲೆತ್ತೂರು ರಸ್ತೆಗೆ ೧೩ ಕೋ.ರೂ., ಮೆಲ್ಕಾರ್-ಮಾರ್ನಬೈಲು ರಸ್ತೆಗೆ ೨.೪೦ ಕೋ.ರೂ., ಬೊಳ್ಳಾಯಿ-ಕಂಚಿಲ-ಮಂಚಿ ರಸ್ತೆಗೆ ೨ ಕೋ.ರೂ.ಗಳ ಕಾಮಗಾರಿಗೆ ಚಾಲನೆ ಸಿಗಲಿದೆ.

ನರಹರಿ ಪರ್ವತದಲ್ಲಿ ನರಹರಿ ಶ್ರೀ ಸದಾಶಿವ ದೇವಸ್ಥಾನ ರಸ್ತೆಗೆ ೨ ಕೋ.ರೂ., ಕಲ್ಲಡ್ಕ-ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಗೆ ೩ ಕೋ.ರೂ., ಕೋಡಪದವಿನಲ್ಲಿ ಕೋಡಪದವು-ಮಂಗಳಪದವು ರಸ್ತೆಗೆ ೧.೫೦ ಕೋ.ರೂ., ಮಾಣಿ ಮಾಡದಲ್ಲಿ ಮಾಣಿ ಶ್ರೀ ಉಳ್ಳಾಳ್ತಿ ಮಾಡ ರಸ್ತೆಗೆ ೨ ಕೋ.ರೂ., ವ್ಯಾಯಾಮ ಶಾಲೆ ಬಳಿ ಸೆಧೆಕಾರು-ಕಕ್ಕೆಮಜಲು-ಕಾಪಿಕಾಡು ರಸ್ತೆಗೆ ೪.೯೫ ಕೋ.ರೂ., ಮೊಗರ್ನಾಡುನಲ್ಲಿ ನರಿಕೊಂಬು-ದಾಸಕೋಡಿ ರಸ್ತೆಗೆ ೪.೯೫ ಕೋ.ರೂ., ಬೆಂಜನಪದವಿನಲ್ಲಿ ಬೆಂಜನಪದವು-ಪಿಲಿಬೊಟ್ಟು ರಸ್ತೆಗೆ ೨.೫೦ ಕೋ.ರೂ.ಗಳ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು