News Karnataka Kannada
Saturday, May 18 2024
ಮಂಗಳೂರು

ಬಂಟ್ವಾಳ: ‘ಗ್ರಾಮ ವಿಕಾಸ ಪಾದಯಾತ್ರೆ’ ಗ್ರಾಮದೆಡೆಗೆ ಶಾಸಕರ ನಡಿಗೆ

Photo Credit : By Author

ಬಂಟ್ವಾಳ: ಅರ್ಕಾವತಿ ಹಗರಣ ತನಿಖೆ ಯಾದರೆ ಭಷ್ಟಾಚಾರದ ಆರೋಪದಡಿ  ಮುಂದಿನ ಚುನಾವಣೆಗೆ ಮುನ್ನವೇ ಮಾಜಿ ಸಿಎಂ ಸಿದ್ರಾಮಣ್ಣರವರು ಜೈಲಿಗೆ ಹೋಗ್ತಾರೆ ಎಂದು ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಶ್ರೀಕ್ಷೇತ್ರ ಪೊಳಲಿಯ ಸುಮಂಗಳ ಸಭಾಂಗಣದಲ್ಲಿ ಶನಿವಾರ ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ‌ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ 13 ದಿನಗಳ ಕಾಲ ನಡೆಯಲಿರುವ” ಗ್ರಾಮ ವಿಕಾಸ ಪಾದಯಾತ್ರೆ ಗ್ರಾಮದೆಡೆಗೆ ಶಾಸಕರ ನಡಿಗೆ”ಯನ್ನು‌ ಉದ್ಘಾಟಿಸಿ ಅವರು ಮಾತನಾಡಿದರು.

ಪರಿವಾರ ವಾದ, ಆತಂಕವಾದ, ಭ್ರಷ್ಟಾಚಾರ ವಾದ ದೇಶಕ್ಕೆ ಕಾಂಗ್ರೇಸ್ ಕೊಡುಗೆ ಎಂದು ತೀವ್ರ ವಾಗ್ದಾಳಿ ನಡೆಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ದೇಶದೆಲ್ಲೆಡೆ ನರೇಂದ್ರ ಮೋದಿ ತಂದ ಪರಿವರ್ತನೆ ಎದ್ದು ಕಾಣುತ್ತಿದೆ ಹೀಗಾಗಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತೆ, ಬಂಡೆ ಹುಡಿಯಾಗುತ್ತೆ, ಇಲ್ಲಿ ಸಚಿವ ಸ್ಥಾನಕ್ಕೆ ಸೂಟ್ ಹೊಲಿಸಿದವರು ನಿರುದ್ಯೋಗಿ ಆಗ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರಕಾರ ಭಯೋತ್ಪಾದನೆಯನ್ನು ಬುಡ ಸಮೇತವಾಗಿ ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದು,
ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಜನಪರ ಶಾಸಕ ಎಂದು‌ ಬಿಂಬಿತರಾಗಿದ್ದಾರೆ,  ಶರತ್ ಹತ್ಯೆ, ಕಲ್ಲಡ್ಕ ಗಲಭೆ, ಕಲ್ಲಡ್ಕ ಮಕ್ಕಳ ಹೊಟ್ಟೆಗೆ ಒಡೆಯುವ ಕೆಲಸ ಕಾಂಗ್ರೆಸ್ ಅವಧಿಯಲ್ಲಿ ಆಗಿದ್ದರೆ, ಇವತ್ತು ಬಂಟ್ವಾಳದಲ್ಲಿ ಮನೆ ಮನೆಗೆ ಅನ್ನ,ನೀರು ನೀಡುವ ಕೆಲಸ ಬಿಜೆಪಿ ಆಡಳಿತದಲ್ಲಿ ಆಗುತ್ತಿದೆ.

ಸ್ಯಾಂಡ್,ಲ್ಯಾಂಡ್ ಮಾಫಿಯ ಬಂದ್:
ಬಂಟ್ವಾಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಗೂಂಡಾಗಿರಿ ರಾಜಕಾರಣ,ಸ್ಯಾಂಡ್ , ಲ್ಯಾಂಡ್ ಮಾಫಿಯಾ ಬಂದ್ ಮಾಡಿರುವ ಶಾಸಕ ರಾಜೇಶಣ್ಣ, ಅಭಿವೃದ್ಧಿ ಅಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕಾಂಗ್ರೆಸ್ ಗಾಂಧಿ ಕುಟುಂಬದ ಹೆಸರಿನಲ್ಲಿ ದೇಶದಲ್ಲಿ ರಾಜಕಾರಣ ಮಾಡಿದ್ದಾರೆ. ಭಯೋತ್ಪಾದನೆಯ ಇನ್ನೊಂದು ‌ಹೆಸರೇ ಕಾಂಗ್ರೆಸ್. ಇಂದಿರಾ ಗಾಂಧಿ ಈ ದೇಶದಲ್ಲಿ ಭಯೋತ್ಪಾದನೆಗೆ ಪ್ರೇರಣೆಯಾಗಿ ನಿಂತರು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮಂಗಳೂರು ‌ಮತ್ತು ಬೆಳಗಾವಿ ಕುಕ್ಕರ್ ಮೇಲೆ ಪ್ರೀತಿ. ಈಗ ಕುಕ್ಕರ್ ಬ್ಲಾಸ್ಟ್ ಕೇಸ್ ನ ಲಿಂಕ್ ನಲ್ಲಿ ಉಡುಪಿಯ ಕಾಂಗ್ರೆಸ್ ಮುಖಂಡನ ಮಗನ ಬಂಧನ ಆಗಿದೆ. ಉಳ್ಳಾಲದಲ್ಲಿ ‌ಮಾಜಿ ಶಾಸಕರ ಸೊಸೆಯನ್ನು ಐಸಿಸ್ ಲಿಂಕ್ ನಲ್ಲಿ ಬಂಧಿಸಿದ್ದಾರೆ.

ಕಾಂಗ್ರೆಸ್ ಕುಟುಂಬದವರನ್ನೇ ಟೆರರ್ ಲಿಂಕ್ ನಲ್ಲಿ ಬಂಧಿಸಿ ಕರೆದುಕೊಂಡು ಹೋಗಲಾಗುತ್ತಿದ್ದು,  ಇದರ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಮಾತೇ ಎತ್ತುತ್ತಿಲ್ಲ.ಅಲ್ಲಿಗೆ ಕಾಂಗ್ರೆಸ್ ಗೆ ಭಯೋತ್ಪಾದಕರ ಪಕ್ಷ ಎನ್ನುವುದು ಸ್ಪಷ್ಟವಾದಂತೆ ಎಂದು ಸಂಸದ ನಳಿನ್ ಲೇವಡಿ ಮಾಡಿದರು.

ಕೊಲೆ, ಟಿಪ್ಪು ಹೆಸರಿನಲ್ಲಿ ಗಲಭೆ ನಡೆಸಿದ ಪಿಎಪ್ ಐ ಸಂಘಟನೆಯನ್ನು ನಿಷೇಧಿಸುವ ಹಾಗೂ ಭಯೋತ್ಪಾದನೆಯ ಬುಡ ಸಮೇತ ಯನ್ನು ನಿಗ್ರಹಿಸುವ ಕಾರ್ಯ ವನ್ನು ಪ್ರಧಾನಿ‌ನರೇಂದ್ರ ಮೋದಿ ಸರಕಾರವನ್ನು ಮಾಡಿದ್ದು, ಕರ್ನಾಟಕದಲ್ಲಿ ಗೋಹತ್ಯೆ,ಮತಾಂತರ ನಿಷೇಧ ಕಾಯ್ದೆಯನ್ನು‌ಜಾರಿಗೊಳಿಸುವ ತಾಕತ್ತನ್ನು ಸಿಎಂ  ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ತೋರಿಸಿಕೊಟ್ಟಿದೆ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ‌ನಮ್ಮ ಶಾಸಕರ ಮೇಲೆ ಆರೋಪ ಮಾಡಿ  ಜೈಲಿಗೆ ಹೋದ, ಆದರೆ ನಮ್ಮ ಮುನಿರತ್ನ ಹೋಗಿಲ್ಲ ಅಂದ್ರೆ ನಾವು ಸರಿ ಇದ್ದೇವೆ. ಸಿದ್ದರಾಮಯ್ಯ ತಾಕತ್ ಇದ್ರೆ ನಮ್ಮ 40% ವಿರುದ್ದ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಸವಾಲೆಸೆದರು.

ಡಿಕೆಶಿಯವರೇ  ಪವರ್ ಮಿನಿಸ್ಡರ್ ಆದಾಗ ಕೃಷಿಕರ ಪಂಪ್ ಸೆಟ್ ಗಳಿಗೆ ಹತ್ತು ಸಾವಿರ ಶುಲ್ಕ ಹಾಕಿದವರು ನೀವು. ಸುಳ್ಯದ ಬೆಳ್ಳಾರೆಯ ಯುವಕ ಕರೆಂಟ್ ಕೇಳಿದ್ದಕ್ಕೆ ರಾತ್ರೋರಾತ್ರಿ ಜೈಲಿಗೆ ಹಾಕಿದ್ರಿ. ಈಗ ಉಚಿತ ವಿದ್ಯುತ್ ಕೊಡೋ ಭರವಸೆ ಕೊಡ್ತಾ ಇದೀರಿ ನೀವು ಈ ರಾಜ್ಯಕ್ಕೆ ಕೊಟ್ಟಿದ್ದು ಕೊಲೆ ಭಾಗ್ಯ ಮಾತ್ರ ಎಂದು ಟೀಕಾಪ್ರಹಾರಗೈದರು.

ಶಾಸಕ ರಾಜೇಶ್ ನಾಯ್ಕ್ ಅವರ  ಕಾಲಘಟ್ಟದಲ್ಲಿ ಕ್ಷೇತ್ರದ ಧಾರ್ಮಿಕ ಕೇಂದ್ರಗಳು,ಪ್ರತಿ  ಹಳ್ಳಿಯು ಅಭಿವೃದ್ಧಿ ಕಂಡಿದೆ ಎಂದ ಹೇಳುದ ಸಂಸದ ನಳಿನ್ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಜೊತೆ ಶಾಂತಿ,ಸಾಮರಸ್ಯದ ಬಂಟ್ವಾಳ ವನ್ನಾಗಿ ಮಾರ್ಪಾಡು ಮಾಡಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ ಎಂದರು.

ವಿವಾದ ರಹಿತ ಶಾಸಕ:
ನಾಯಕ ಪದಕ್ಕೆ ಅರ್ಥ ತುಂಬಿದವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ರಾಜ್ಯದಲ್ಲಿ ವಿವಾದ ರಹಿತ  ಶಾಸಕರಲ್ಲಿ ರಾಜೇಶ್ ನಾಯ್ಕ್ ಅವರು ಓರ್ವರಾಗಿದ್ದಾರೆ ಎಂದು ಬಣ್ಣಿಸಿದ ಬಿಜೆಪಿ‌ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು‌ ಮಾತನಾಡಿ ಜನಸೇವೆ ಮಾಡುವ ಅವಕಾಶ ಬಂಟ್ವಾಳದ ಜನತೆ ನೀಡಿದ್ದು,ಇದನ್ನು ಪ್ರಾಮಾಣಿಕವಾಗಿ ಮಾಡಿರುವ ಸಂತಸ ಇದೆ ಎಂದು‌ ಹೇಳಿದರು.

ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,  ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪೊಳಲಿ ದೇವಳದ ಅರ್ಚಕರಾದ ರಾಮ್ ಭಟ್, ನಾರಾಯಣ ಭಟ್ , ಪ್ರಮುಖರಾದ  ಸುಲೋಚನಾ ಭಟ್,  ತುಂಗಪ್ಪ ಬಂಗೇರ,  ಮಾಧವ ಮಾವೆ, ಸುದರ್ಶನ್ ಬಜ,  ರವೀಶ್ ಶೆಟ್ಟಿ ಕರ್ಕಳ ಉಪಸ್ಥಿತರಿದ್ದರು.

ಗ್ರಾಮ ವಿಕಾಸ ಪಾದಯಾತ್ರೆ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬಿಜೆಪಿ ಕಾರ್ಯದರ್ಶಿ ಡೊಂಬಯ್ಯ  ಅರಳ ಕಾರ್ಯಕ್ರಮ‌ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು