News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ಸಿಡಿಲಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷರ ಮನೆ ಸಂಪೂರ್ಣ ಹಾನಿ, ಅಪಾಯದಿಂದ ಕುಟುಂಬ ಪಾರು   

Former gram panchayat president's house completely damaged due to lightning, family escapes unhurt   
Photo Credit : By Author

ಬಂಟ್ವಾಳ: ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಈ ಘಟನೆಯಿಂದ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.ಆದರೆ ಹರೀಶ ಆಚಾರ್ಯ ಅವರ ಪುಟ್ಟ ಮಗು ಸಹಿತ ವಯೋವೃದ್ಧ ತಂದೆ ಕಾಷ್ಠಶಿಲ್ಪಿ ಅಪ್ಪು ಆಚಾರ್ಯ ದಂಪತಿ ಇನ್ನೂ ಆಘಾತದಿಂದ ಹೊರ ಬಂದಿಲ್ಲ.ಶುಕ್ರವಾರ ರಾತ್ರಿ ದಿಢೀರನೆ ಸುರಿದ ಮಳೆಗೆ ಮೊದಲು ಭಾರೀ ಶಬ್ಧ ಸಹಿತ ಇವರ ಮನೆ ಹಿಂಬದಿ  ಮರವೊಂದಕ್ಕೆ ಸಿಡಿಲು ಬಡಿದಿದೆ.

ಇದೇ ವೇಳೆ ಇವರ ಮನೆ ಮತ್ತು ಸ್ನಾನಗೃಹದ ಗೋಡೆ ಕೊರೆದು ಮನೆಯೊಳಗೆ ವಿದ್ಯುತ್ ಪರಿಕರವೆಲ್ಲಾ ಸುಟ್ಟು ಕರಕಲಾಗಿದೆ. ಸ್ವತಃ ಕಣ್ಣೆದುರೇ ಫ್ಯಾನ್ ಮತ್ತಿತರ ವಿದ್ಯುತ್ ಸಾಮಾಗ್ರಿ ಸುಟ್ಟು ಪುಡಿಯಾಗಿರುವ ದೃಶ್ಯ ಕಂಡು ಮನೆಯವರು ಆಘಾತಗೊಂಡಿದ್ದಾರೆ.

ಮನೆ ಗೋಡೆ ಮತ್ತು ಹೆಂಚಿನ ಮಾಡು ಸಂಪೂರ್ಣ ಬಿರುಕು ಕಾಣಿಸಿಕೊಂಡು ಕುಸಿತದ ಭೀತಿ ಉಂಟು ಮಾಡಿದೆ. ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ್ದು, ದಿನವಿಡೀ ಅಪಾರ ಮಂದಿ ಬಂದು ಕುತೂಹಲದಿಂದ ಹಾನಿ ವೀಕ್ಷಿಸಿ ಮನೆ ಮಂದಿಗೆ ಧೈರ್ಯ ತುಂಬುತ್ತಿರುವ ದೃಶ್ಯ ಕಂಡು ಬಂದಿದೆ. ಕಳೆದ 20 ವರ್ಷಗಳಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಇವರು ಇತರರ ಸಂಕಷ್ಷಗಳಿಗೆ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು