News Karnataka Kannada
Monday, April 29 2024
ಮಂಗಳೂರು

99ರ ಹರೆಯದ ಜೋಸೆಫ್ ಗೊನ್ಸಾಲ್ವಿಸ್ ಇನ್ನಿಲ್ಲ

New Project (4)
Photo Credit :

ಮಂಗಳೂರು :  ಮಂಗಳೂರು ನಗರದ ಬಹುತೇಕ ಮಂದಿಗೆ ಚಿರಪರಿಚಿತರಾಗಿದ್ದ, ಸ್ಫೂರ್ತಿಯ ಚಿಲುಮೆ ಟ್ರಾಫಿಕ್ ವಾರ್ಡನ್ 99ರ ಹರೆಯದ ಜೋಸೆಫ್ ಗೊನ್ಸಾಲ್ವಿಸ್ ಇನ್ನಿಲ್ಲ!

ಟ್ರಾಫಿಕ್ ವಾರ್ಡನ್ ಜವಾಬ್ದಾರಿಯ ಜೊತೆ ಜೊತೆಗೆ ಹಲವಾರು ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಗೊನ್ಸಾಲ್ವಿಸ್ 100 ವರ್ಷಗಳನ್ನು ಪೂರೈಸಲು ಕೇವಲ ನಾಲ್ಕು ತಿಂಗಳು ಬಾಕಿಯಿರುವಾಗಲೇ ಕೊನೆಯುಸಿರೆಳೆದಿದ್ದಾರೆ. ಫಳ್ನೀರ್ ನಿವಾಸಿಯಾಗಿದ್ದ ಜೋಸೆಫ್ ಗೊನ್ಸಾಲ್ವಿಸ್ ಅವರಿಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

1921ರ ಜನವರಿ 1ರಂದು ಜನಿಸಿದ ಗೊನ್ಸಾಲ್ವಿಸ್ ತಮ್ಮ ವೃತ್ತಿ ಜೀವನದ ನಿವೃತ್ತಿಯ ಬಳಿಕ ಸಕ್ರಿಯವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ತೊಂಬತ್ತು ವರ್ಷ ವಯಸ್ಸು ದಾಟಿದ ಮೇಲೂ ಅವರು ಹಲವು ವರ್ಷಗಳ ಕಾಲ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುತ್ತ ಟ್ರಾಫಿಕ್ ವಾರ್ಡನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 2015ರಲ್ಲಿ ತನ್ನ 94ನೇ ವಯಸ್ಸಿನಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು ತಮ್ಮ ಜನಸೇವೆಯ ಮೂಲಕವೇ ಗುರುತಿಸಿಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು