News Karnataka Kannada
Monday, April 29 2024
ಮಂಗಳೂರು

ಬಸವ ಹಾಗೂ ಡಾ.ಬಿ‌.ಆರ್.ಅಂಬೇಡ್ಕರ್ ವಸತಿ ಯೋಜನೆಯ 2060 ಫಲಾನುಭವಿಗಳಿಗೆ ಸವಲತ್ತು ವಿತರಣಾ ಸಮಾರಂಭ

Bantwal
Photo Credit : By Author
ಬಂಟ್ವಾಳ:  ಸರಕಾರದ ಪ್ರತಿ ಯೋಜನೆ ಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಅದ್ಭುತವಾದ ಕಾರ್ಯ ಮಾಡುವ ಮೂಲಕ ಅಂತ್ಯೋದಯದ ಕಲ್ಪನೆಯಡಿಯಲ್ಲಿ ಬಡವರ ಕಣ್ಣೀರು ಒರೆಸುವ ಕೆಲಸವನ್ನು  ರಾಜೇಶ್ ನಾಯ್ಕ್ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಶುಕ್ರವಾರ ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್, ರಾಜೀವ ಗಾಂಧಿ , ರಾಜೀವ ಗಾಂಧಿ ವಸತಿ ನಿಗಮ ಬೆಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 2021-22 ನೇ ಸಾಲಿನ ಬಸವ ವಸತಿ ಹಾಗೂ ಡಾ.ಬಿ‌.ಆರ್.ಅಂಬೇಡ್ಕರ್ ವಸತಿ ಯೋಜನೆಯ 2060 ಫಲಾನುಭವಿಗಳಿಗೆ ಕಾರ್ಯದೇಶ, 94ಸಿ, 94 ಸಿಸಿ ಹಕ್ಕು ಪತ್ರ, ಪಾಕೃತಿಕ ವಿಕೋಪದ ಚೆಕ್, ವಿಕಲಚೇತನರಿಗೆ ಸಾಧನಾ ಸಲಕರಣೆ,ಪಶುಸಂಗೋಪನೆ ಇಲಾಖೆಯ ಸವಲತ್ತು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಜನರ ಸೇವಕ ಎಂಬ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಶಾಸಕರು ,ಕಳೆದ ನಾಲ್ಕು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದ ಅಮೂಲಾಗ್ರವಾದ ಅಭಿವೃದ್ಧಿಗೆ ಸಾಕ್ಷಿಭೂತರಾಗಿದ್ದು, ಬಸವಣ್ಣನ  ವಚನವನ್ನು ಅನುಷ್ಠಾನ ಮಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.
ಬಂಟ್ವಾಳದ ಅಭಿವೃದ್ಧಿಯನ್ನು  ಮೈಲಿಗಲ್ಲಿನಲ್ಲಿ ಬರೆದಿಡುವ ದಿನ  ಎಂದು ಹೇಳಿದ ಅವರು ಅಭಿವೃದ್ಧಿ ಪಟ್ಟಿಯನ್ನು ಜನರ ಮುಂದಿಟ್ಟರು. ಬಂಟ್ವಾಳ ಕ್ಷೇತ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ತೆರಳಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ  ಮಾಡಿದ ಏಕೈಕ ಶಾಸಕ ರಾಜೇಶ್ ನಾಯ್ಕ್ ಎಂದು  ಹೇಳಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 55 ಕೋ.ರೂ.ವೆಚ್ಚದ ಯುಜಿಡಿ ಯೋಜನೆ ಅನುಷ್ಠಾನ,1600 ಕೋಟಿ ಅನುದಾನದ ಮೂಲಕ ಬಂಟ್ವಾಳ ಕ್ಷೇತ್ರದ ಹಳ್ಳಿ ಹಳ್ಳಿ ಯಲ್ಲಿ ರಸ್ತೆ ನಿರ್ಮಾಣ,ತಾಲೂಕಿನ ಪ್ರತಿ ಮನೆಗೆ ಕುಡಿಯುವ ನಳ್ಳಿ ನೀರು ಪೂರೈಕೆ ಮಾಡಲು ಬೇಕಾದ ಸಕಲ ವ್ಯವಸ್ಥೆಗಳನ್ನು ಶಾಸಕರ ನೇತೃತ್ವದಲ್ಲಿ ಮಾಡಲಾಗಿದ್ದು, ಅಭಿವೃದ್ಧಿ ಕಾಣದೇ ಇರುವ ಸುಮಾರು 240 ಧಾರ್ಮಿಕ ಕೇಂದ್ರಗಳ ರಸ್ತೆ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಬಂಟ್ವಾಳ  ಸರಕಾರಿ ಆಸ್ಪತ್ರೆಯಲ್ಲಿ  ಪ್ರಥಮ ಐಸಿಯು ಘಟಕವನ್ನು ಸ್ಥಾಪಿಸಿದ ಹೆಗ್ಗಳಿಕೆ ಅದು ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ, ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ಶವವನ್ನು ಸಂಸ್ಕಾರ ಮಾಡಲು ತಾನು ಜಾಗ ನೀಡುತ್ತೇನೆ ಎಂದು ಮಾತು ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರು ಬಡವರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಮುಂದೆಯ ಜನರ ಅರ್ಶೀವಾದ ಸದಾ ಇರಲಿ  ಎಂದು ಅವರು ಹೇಳಿದರು.
ಶೀಘ್ರವಾಗಿ ಸಮಸ್ಯೆ ಪರಿಹಾರ
ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸರಕಾರ ಬಡವರ ಬಗ್ಗೆ ಚಿಂತನೆ ಮಾಡುತ್ತಿದ್ದು, ಕುಮ್ಕಿ ಹಕ್ಕಿನ ಸಮಸ್ಯೆ ಪರಿಹಾರಕ್ಕೆ ಸರಕಾರ ಬದ್ದವಾಗಿದೆ. ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ದವಾಗಿದೆ ಎಂದರು.
ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪತ ಕಾಮಗಾರಿ ವೇಗ ಪಡೆದಿದೆ. ಸ್ವಾಭಿಮಾನಿಯಾಗಿ ಸ್ವಾವಲಂಭಿಯಾಗಿ ಬದುಕು ನಡೆಸಬೇಕು ಎಂಬ ಯೋಚನೆಯ ಮೂಲಕ  ಐದು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿ ಮಾಡಿದ್ದಲ್ಲದೆ ಪ್ರತಿಯೊಬ್ಬನ ಮನೆಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.12 ಸಾವಿರ ಕೋಟಿ ಶೌಚಾಲಯ ಮಾಡಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಅವರು ನಿರುದ್ಯೋಗ ನಿವಾರಣೆಗಾಗಿ ಹಾಗೂ ತಾಯಿ ಭಾರತಿಯ ಸೇವೆಗಾಗಿ ಅಗ್ನಿ ಪಥ  ಯೋಜನೆಯನ್ನು ಕೇಂದ್ರ ಸರಕಾರ ಜಾರಿ ಮಾಡಿದೆ ಎಂದರು.
ಮೌಲ್ಯಾಧಾರಿತ ಶಿಕ್ಷಣ ನೀಡುವುದಕ್ಕೆ ನಾರಾಯಣಗುರು ವಸತಿ ಶಾಲೆ ನಿರ್ಮಾಣಕ್ಕೆ  ಬೊಮ್ಮಾಯಿ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು,ಬಂಟ್ವಾಳ ಕ್ಷೇತ್ರಷ ಪುಂಜಾಲಕಟ್ಟೆಯಲ್ಲಿ 29 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ರೀತಿಯ ಶಾಲೆ ನಿರ್ಮಾಣವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ,ಕಾನೂನಾತ್ಮಕ ತೊಂದರೆಗಳಿಂದ ಬಾಕಿಯಾಗಿದ್ದ ಸೌಲಭ್ಯಗಳನ್ನು ಅಧಿಕಾರಿಗಳ ಮುಖಾಂತರ ಪರಿಹಾರ ಮಾಡಿ ಬಳಿಕ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ಹಾಗೂ 94 ಸಿ.ಮತ್ತು 94 ಸಿ.ಸಿ.ಹಕ್ಕು ಪತ್ರ ನೀಡುವ ಕೆಲಸ ಮಾಡಿದ್ದೇವೆ.ಈ ಕಾರ್ಯಕ್ಕೆ ಸಹಕಾರ ನೀಡಿದ ತಾಲೂಕಿನ ತಹಶೀಲ್ದಾರ್,ಉಪತಹಶೀಲ್ದಾರ್,  ತಾ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಗ್ರಾಮ ಕರಣೀಕರು, ಸಿಡಿಪಿಒ,ಪಿಡಿಒ, ಕಾರ್ಯದರ್ಶಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಜೀವ ಮತ್ತು ಜೀವನ ಎರಡನ್ನು ಸಮಾನವಾಗಿ ಕಾಣುವ ಮೋದಿಯವರ ಅಧಿಕಾರತ್ವದಲ್ಲಿ ಕೋವಿಡ್ ಸಂಕಷ್ಟದ ದಿನಗಳಲ್ಲಿ  130 ಕೋಟಿ ಜನರಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯದಂತೆ ಪ್ರತಿಯೊಬ್ಬರಿಗೂ  ರೇಷನ್ ವ್ಯವಸ್ಥೆ ಮಾಡಿದ್ದಾರೆ.
ಅಭಿವೃದ್ಧಿಯ ಜೊತೆಗೆ ಶಾಂತಿಯುತ ನವ ಬಂಟ್ವಾಳ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು ಎಂದು ಅವರು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ  ಹರಿಕೃಷ್ಣ ಬಂಟ್ವಾಳ,  ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ,  ಜಿಲ್ಲಾ ನೊಡೆಲ್ ಅಧಿಕಾರಿ ಸವಿತಾ ಉಪಸ್ಥಿತರಿದ್ದರು.
ತಾಪಂ.ಇ.ಒ.ರಾಜಣ್ಣ ಸ್ವಾಗತಿಸಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ವಂದಿಸಿದರು.ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು