Categories: ಮಂಗಳೂರು

ಹಿರಿಯ ಗಾಂಧಿವಾದಿ ಡಾ. ಎಸ್. ಎನ್. ಸುಬ್ಬರಾವ್ ಸ್ಮಾರಕಕ್ಕೆ ಧರ್ಮಸ್ಥಳದಿಂದ ನೇತ್ರಾವತಿ ನದಿಯ ಪುಣ್ಯ ಜಲ ಹಾಗೂ ಮೂರು ಹಿಡಿ ಮಣ್ಣು

ಬೆಳ್ತಂಗಡಿ: ಗಾಂಧಿ ಶಾಂತಿ ಪ್ರತಿಷ್ಠಾನದ ರಾಷ್ಟ್ರೀಯ ಯುವ ಯೋಜನೆ ರೂವಾರಿ ಹಾಗೂ ಹಿರಿಯ ಗಾಂಧಿವಾದಿ ಡಾ. ಎಸ್.ಎನ್. ಸುಬ್ಬರಾವ್ ಅವರ ಸ್ಮಾರಕವನ್ನು ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಕಣಿವೆಯಲ್ಲಿ ನಿರ್ಮಿಸಲು ಯೋಜಿಸಿದ್ದು ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದಪೂರ್ವಕ ನೇತ್ರಾವತಿ ನದಿಯ ಪುಣ್ಯ ಜಲ ಹಾಗೂ ಮೂರು ಹಿಡಿ ಮಣ್ಣನ್ನು ಬೆಂಗಳೂರಿನ ಡಾ. ವಿ. ಪ್ರಶಾಂತ ಮತ್ತು ಬಳಗದವರು ಪಡೆದರು.

ದೇಶದ ಹಿರಿಯ ಗಾಂಧಿವಾದಿಯಾಗಿದ್ದು ನಡೆದಾಡುವ ಗಾಂಧಿ ಎಂದೇ ಪ್ರಸಿದ್ಧರಾಗಿದ್ಧ ಡಾ. ಎಸ್.ಎನ್. ಸುಬ್ಬರಾವ್ ಶಿಸ್ತಿನ ಸಿಪಾಯಿಯಾಗಿ ಸರಳ ಜೀವನ ನಡೆಸುತ್ತಿದ್ದರು. ತಮ್ಮ 92ನೆ ವಯಸ್ಸಿನಲ್ಲಿ 2021ರ ಅಕ್ಟೋಬರ್ 27ರಂದು ಅವರು ರಾಜಸ್ಥಾನದ ಜೈಪುರದಲ್ಲಿ ನಿಧನರಾದರು. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಕಣಿವೆಯಲ್ಲಿರುವ ಮಹಾತ್ಮಾ ಗಾಂಧಿ ಸೇವಾಶ್ರಮದ ಆವರಣದಲ್ಲಿ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.

2022ರ ಫೆಬ್ರವರಿ 7 ರಂದು ಅವರ 93ನೆ ಹುಟ್ಟುಹಬ್ಬವನ್ನು ಆಚರಿಸಿ ಅಲ್ಲಿ ಒಂದು ಪುತ್ಥಳಿ ಮತ್ತು ಭವ್ಯ ಸಮಾಧಿ ನಿರ್ಮಿಸಲು ಯೋಜಿಸಲಾಗಿದೆ. ದೇಶದ ವಿವಿಧ ಸ್ಥಳಗಳಲ್ಲಿ ಡಾ. ಎಸ್.ಎನ್. ಸುಬ್ಬರಾವ್ ರಾಷ್ಟ್ರೀಯ ಯುವ ಶಿಬಿರಗಳನ್ನು ಆಯೋಜಿಸಿದ್ದು ಅಲ್ಲಿಂದ ಸ್ಮಾರಕ ನಿರ್ಮಾಣಕ್ಕೆ ಪವಿತ್ರ ಜಲ ಮತ್ತು ಮಣ್ಣು ಸಂಗ್ರಹಿಸಲಾಗುತ್ತಿದೆ. ಧರ್ಮಸ್ಥಳದಲ್ಲಿ ಕೂಡಾ ಡಾ. ಎಸ್.ಎನ್ ಸುಬ್ಬರಾವ್ ರಾಷ್ಟ್ರೀಯ ಯುವ ಶಿಬಿರ ಆಯೋಜಿಸಿದ್ದು ಪವಿತ್ರ ನೇತ್ರಾವತಿ ನದಿಯಿಂದ ಪುಣ್ಯಜಲ ಮತ್ತು ಮೂರು ಹಿಡಿ ಮಣ್ಣನ್ನು ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ್ ಮತ್ತು ಬಳಗದವರು ಸೋಮವಾರ ಪಡೆದುಕೊಂಡರು.

Sneha Gowda

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

4 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

4 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

4 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

6 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

6 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

6 hours ago