ಬೆಳ್ತಂಗಡಿ : ತಾಲೂಕಿನ ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿಗೆ ಕಾದಿರಿಸಿದ ಜಮೀನಿನ ಗಡಿ ಗುರುತಿಸಲು ತಹಸೀಲ್ದಾರ್ ಅವರಿಗೆ ಮನವಿ ನೀಡಲಾಗಿದ್ದು, ಮೂರು ಬಾರಿ ದಿನಾಂಕ ನಿಗದಿ ಪಡಿಸಲಾಗಿತ್ತು.
ಆದರೆ ಇದುವರೆಗೂ ಗಡಿ ಗುರುತು ಕೆಲಸ ನಡೆಯದ ಕುರಿತು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಪಂಚಾಯಿತಿ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ಪಂಚಾಯಿತಿ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲಾ,ಸದಸ್ಯರಾದ ಸವಿತಾ,ದಿನೇಶ್, ಸುಮಂಗಲಾ,ಸಜಿತಾ ಹಾಗೂ ಜೆಸ್ಸಿ ಉಪಸ್ಥಿತರಿದ್ದರು.