News Karnataka Kannada
Monday, April 29 2024
ಮಂಗಳೂರು

ಹನ್ನೆರಡನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

New Project 2021 12 17t161305.508
Photo Credit :

ಮಂಗಳೂರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅರ್ಪಿಸುವ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಆಶ್ರಯದಲ್ಲಿ 12 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಡಿಸೆಂಬರ್ 18 ನೇ ತಾರೀಖಿನಂದು ಶ್ರವಣಬೆಳಗೊಳ ಶ್ರೀ ಜೈನ ಮಠದ ತುಳುವ ವೇದಿಕೆಯಲ್ಲಿ ನಡೆಯಲಿದೆ. ಜಗದ್ಗುರು ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಇವರು ಸಮ್ಮೇಳನದ ಉದ್ಘಾಟನೆ ಹಾಗೂ ಸಾನಿಧ್ಯ ಮಾರ್ಗದರ್ಶನ ಮತ್ತು ಶುಭನುಡಿಗಳೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅ.ಬೆ.ಸಾ ಸಮ್ಮೇಳನ ಸಮಿತಿ ರಾಜ್ಯದ್ಯಕ್ಷರು ಡಾ. ಶೇಖರ ಅಜೆಕಾರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಸಾಮಾಜಿಕ ಮುಖಂಡರು ಅಭಯಚಂದ್ರ ಜೈನ್, ಎಪಿಎಂಸಿ ಹಾಸನ ಇದರ ಅಧ್ಯಕ್ಷರು ಕೆಪಿ ರಂಗಸ್ವಾಮಿ ಕಾಂತರಾಜು ಹಾಗೂ ನಿರ್ಗಮನ ರಾಜ್ಯದಕ್ಷರು ವೈದ್ಯಕೀಯ ಬರಹಗಾರರ ಬಳಗ ಐ ಎಂ.ಎ ಡಾ. ಅಣ್ಣಯ್ಯ ಇವರು ಭಾಗವಹಿಸಲಿದ್ದಾರೆ.
ನಮ್ಮೂರು ನಮ್ಮ ಹೆಮ್ಮೆ ಶ್ರವಣಬೆಳಗೊಳ ವಿಚಾರದ ಕುರಿತು ಗೊಮ್ಮಟವಾಣಿ ಸಂಪಾದಕರು ಅಶೋಕ್ ಕುಮಾರ್ ಮಾತನಾಡಲಿದ್ದಾರೆ.
ಗೌರವ ಪ್ರದಾನ ಸಮಾರಂಭದಲ್ಲಿ, ಕ ಸಾ ಪ ಮಾಜಿ ಅಧ್ಯಕ್ಷರು ಹರಿಕೃಷ್ಣ ಪುನರೂರು ಪ್ರಧಾನಿಸುವವರಾಗಿ ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ನಾಡೋಜ ಡಾ ಮಹೇಶ್ ಜೋಶಿ ಇವರು ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕ. ಸಾ. ಪ ಅಧ್ಯಕ್ಷರು ಡಾ. ಎಂಪಿ ಶ್ರೀನಾಥ ಇವರು ಗೌರವ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರು ಶಿವಾನಂದ ತಗಡೂರು, ಕ, ಸಾ,ಪ ನಿಕಟಪೂರ್ವ ಅಧ್ಯಕ್ಷರು ಪ್ರದೀಪ್ ಕುಮಾರ್ ಕಲ್ಕೂರ, ಹಾಸನ ಜಿಲ್ಲಾ ಗಮಕ ಕಲಾ ಪರಿಷತ್ತು ಅಧ್ಯಕ್ಷರು ಕಲಾಶ್ರೀ ಜಿಎ ಗಣೇಶ ಉಡುಪ ಅದೇ ರೀತಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಡಾ ಎಚ್ ಎಲ್ ನಾಗೇಗೌಡ ,ಪರ್ವ ಅಸೋಸಿಯೇಷನ್ ಮೈಸೂರು ಇದರ ಕಾರ್ಯದರ್ಶಿ ಶ್ರೀಲತಾ ಕುಮಾರಿ ಆಹ್ವಾನಿತರಾಗಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಗೊರೂರು ರೇಷ್ಮಾ ಶೆಟ್ಟಿ ಅವರ ಕವನ ಸಂಕಲನ ನೀನಾನಾನಾ ಕವನ ಸಂಕಲನ, ಪ್ರೇಮ ಪ್ರಶಾಂತ್ ಶ್ರವಣಬೆಳಗೊಳ ಅವರ ಪ್ರಣತಿ ಕವನ ಸಂಕಲನ ಗಂಗಾಧರ ಕಿದಿಯೂರು ನಾಟಕ ಸಂಪುಟ ಮೆಂಕೂನ ಸಿರಿ ಸಿಂಗಾರ ಪುಸ್ತಕಗಳು ಬಿಡುಗಡೆಯಾಗಲಿವೆ.

ಮಹಾತ್ಮರ ಚರಿತಾಮೃತ ಪ್ರಭು ಚನ್ನಬಸವ ಸ್ವಾಮೀಜಿ ಅಥಣಿ ದಶಮಾನದ ಶ್ರೇಷ್ಠ ಕೃತಿ ಗೌರವವು ಈ ಸಂದರ್ಭದಲ್ಲಿ ನಡೆಯಲಿದೆ.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಪೂರ್ವಾಧ್ಯಕ್ಷರಾಗಿ ಎಚ್ ದುಂಡಿರಾಜ್ ಎಂ ಎಸ್ ನರಸಿಂಹಮೂರ್ತಿ ದೊಡ್ಡರಂಗೇಗೌಡ ಡಾ.ನಾ ಮೊಗಸಾಲೆ ಎ ಎಸ್ ಎನ್ ಹೆಬ್ಬಾರ್, ಅಂಬಾತನಯ ಮುದ್ರಾಡಿ ಹರಿಕೃಷ್ಣ ಪುನರೂರು ಬನ್ನಂಜೆ ಬಾಬು ಅಮೀನ್ ಡಾ ಪ್ರದೀಪ್ ಕುಮಾರ್ ಹೆಬ್ರಿ ಭುವನೇಶ್ವರಿ ಹೆಗಡೆ ಭಾಗವಹಿಸಲಿದ್ದಾರೆ. ( ಡಾ ಎಸ್ ಪದ್ಮಪ್ರಸಾದ್ ಪ್ರಸ್ತುತ)

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಶತಮಾನದ ಕನ್ನಡಿಗ ಗೌರವ ಪ್ರಶಸ್ತಿಯು ಅವರ ನಿವಾಸದಲ್ಲಿ ಗೌರವ ಪ್ರದಾನ ನಡೆಯಲಿದೆ.
ಚೆನ್ನರಾಯಪಟ್ಟಣ ಬಾಲಕೃಷ್ಣ ಮತ್ತು ಕುಸುಮಾ ದಂಪತಿಗಳಿಗೆ ಕರ್ನಾಟಕ ದಂಪತಿ ರತ್ನ ಗೌರವ ಈ ಸಂದರ್ಭದಲ್ಲಿ ದೊರಕಲಿದೆ.
ಕರ್ನಾಟಕ ಸಾಧನಾ ರತ್ನ ಗೌರವವು ಹೆಬ್ರಿ ಮಂಡ್ಯ ಕರ್ನಾಟಕ ಮಹಾಕವಿ ರತ್ನ ಡಾ. ಪ್ರದೀಪ್ ಕುಮಾರ್, ಉಡುಪಿ ಕರ್ನಾಟಕ ಕಂಬಳ ರತ್ನ ಎಚ್. ಸುಧಾಕರ ಹೆಗಡೆ, ಕರ್ನಾಟಕ ಮಾಧ್ಯಮ ರತ್ನ ಮದನ್ ಗೌಡ ಹಾಸನ, ಕರ್ನಾಟಕ ವಿದ್ವತ್ ರತ್ನ ತಾಳ್ತಜೆ ವಸಂತಕುಮಾರ್ ಉಪ್ಪಿನಂಗಡಿ, ಕರ್ನಾಟಕ ಆಡಳಿತ ಸೇವಾ ರತ್ನ ಎಂ ಆರ್ ವಾಸುದೇವ್ ಮಂಗಳೂರು, ಕರ್ನಾಟಕ ಜಿನಾ ಸಾಹಿತ್ಯ ರತ್ನ ಡಾ ಎಚ್. ‌ಪಿ ಮೋಹನ್ ಕುಮಾರ್ ಶಾಸ್ತ್ರಿ, ಕರ್ನಾಟಕ ಸುಪ್ರತಿಭಾ ರತ್ನ ಡಾ ಎಸ್ ಶ್ರೀನಿವಾಸ ಶೆಟ್ಟಿ ಉಡುಪಿ, ಕರ್ನಾಟಕ ಶಿಕ್ಷಣ ರತ್ನ ಡಾ ಮಂಜುನಾಥ ಎಸ್ ರೇವಣಕರ್,
ಕರ್ನಾಟಕ ರಂಗಭೂಮಿ ರತ್ನ ಪ್ರಭಾಕರ ಕಲ್ಯಾಣಿ ಪೆಡ್ರೂರು , ಕರ್ನಾಟಕ ಸಾಹಿತ್ಯ ಅನಂತ್ರಾಜ ಗೊರೂರು ಹಾಸನ, ಮೂಡಬಿದಿರೆ ಕರ್ನಾಟಕ ಗ್ರಾಮೀಣ ವೈದ್ಯ ರತ್ನ ಎಂ.ಕೆ ಗಡ್ರಾಡಿ, ಕರ್ನಾಟಕ ಸಾರಸ್ವತ ರತ್ನ ಹೊಸಹಳ್ಳಿ ದಾಳೇಗೌಡ, ಕರ್ನಾಟಕ ಕಾಯಕರತ್ನ ಎಂ.ಎಸ್ ಶಿವಪ್ರಕಾಶ್ ಮಂಡ್ಯ, ಕರ್ನಾಟಕ ಯಕ್ಷಗಾನ ರತ್ನ ಸುರೇಂದ್ರ ಪಣಿಯೂರು, ಕರ್ನಾಟಕ ತುಳುವ ರತ್ನ ಗಂಗಾಧರ ಕಿದಿಯೂರು ಉಡುಪಿ, ಕರ್ನಾಟಕ ಎಕ್ಷ ಸೇವಾರತ್ನ ಎಂ ಶಾಂತಾರಾಮ ಕುಡ್ವ ಹಾಗೂ ಕರ್ನಾಟಕ ರಾಜಕೀಯ ರತ್ನ ಯು ಟಿ ಖಾದರ್ ಮಂಗಳೂರು ಇವರಿಗೆ ದೊರಕಲಿದೆ.

ಬೆಳದಿಂಗಳ ಕವಿಗೋಷ್ಠಿ ರಾಜ್ಯದ ವಿವಿಧೆಡೆಗಳ ಲೋಕದ ಹಿರಿಯ-ಕಿರಿಯ ಯುವ ತಾರೆಯರ ಸಮಾಗಮವು ಈ ಸಂದರ್ಭದಲ್ಲಿ ನಡೆಯಲಿದೆ.
80 ಯಕ್ಷಗಾನ ಪ್ರಸಂಗಗಳ ಕವಿ ದೇವದಾಸ ಈಶ್ವರಮಂಗಲ ಇವರು ಬೆಳದಿಂಗಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಣ್ಣಕ್ಕಿಬೆಟ್ಟು ರವೀಂದ್ರ ನಾಯಕ್ ಇವರು ಉದ್ಘಾಟನಾ ಕವಿತೆಯನ್ನು ವಾಚಿಸಲಿದ್ದಾರೆ.

ಕರ್ನಾಟಕ ಯುವ ರತ್ನ ಪ್ರಶಸ್ತಿಯು ಈ ಸಂದರ್ಭದಲ್ಲಿ ಯಕ್ಷಗಾನ ಹಾಗೂ ತುಳುವ ಸೇವೆ ದಿನೇಶ ರೈ ಕಡಬ , ಬರವಣಿಗೆ ಹಾಗೂ ಪ್ರಕಾಶನ ವಿಭಾಗದಿಂದ ರಾ. ರಾಧಾಕೃಷ್ಣ ಬೆಂಗಳೂರು, ಸಂಗೀತ/ ಪ್ರಚಾರ ಅರ್ವಿಂದ್ ವಿವೇಕ್ ಮಂಗಳೂರು, ಮಾಧ್ಯಮ/ ಸೇವೆ ಯೋಗಾನಂದ ಹೊನ್ನೇನಹಳ್ಳಿ, ಸಾಹಿತ್ಯ/ ಕಾರ್ಮಿಕ ಸೇವೆಯ ಈರಣ್ಣ ಕುರುವತ್ತಿ ಗೌಡರ್ ಹಾವೇರಿ, ಸಾಹಿತ್ಯ ಕ್ಷೇತ್ರಕ್ಕೆ ಜಯಂತಿ ಚಂದ್ರಶೇಖರ್ ಶ್ರವಣಬೆಳಗೊಳ, ಕಲೆ ಹಾಗೂ ರಂಗಭೂಮಿ ವಿಭಾಗದಲ್ಲಿ ಡಿ. ಜಿ ತಿರುಮಲ ಬಳ್ಳಾರಿ, ಸಾಹಿತ್ಯ/ ಮಹಿಳೆ ವಿಭಾಗದಲ್ಲಿ ಗೋರೂರು ರೇಷ್ಮಾ ಶೆಟ್ಟಿ, ಕಲೆ ವಿಭಾಗದಲ್ಲಿ ರಾಮಕೃಷ್ಣ ಸವಣೂರು, ದೈವಾರಾಧನೆ /ಸಾಧನೆ ಸದಾನಂದ ಸಾಲ್ಯಾನ್ ಕೆರ್ವಸೆ ಕಾರ್ಕಳ, ವೈದ್ಯಕೀಯ/ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಸಲೀಮ್ ನದಾಫ್, ಸಾಹಿತ್ಯ ಮಾಧ್ಯಮ ಕ್ಷೇತ್ರಕ್ಕೆ ಪಂಕಜ ಗೊರೂರು, ಕೃಷಿ ಮತ್ತು ಸೇವೆ ವಿಭಾಗದಲ್ಲಿ ಕೃಷ್ಣಪ್ಪ ಸೊಪ್ಪಿನ ಲಿಂಗನಾಯಕನಹಳ್ಳಿ, ಸಂಗೀತ ಹಾಗೂ ನೃತ್ಯ ಕ್ಷೇತ್ರಕ್ಕೆ ಟ್ಯಾಲೆಂಟ್ ರಾಜೇಶ ಭಟ್ ಮೂಡಬಿದಿರೆ,

ಹೂವಿನ ಸಂಯೋಜನೆ ಕಲೆ ಈ ಕ್ಷೇತ್ರಕ್ಕೆ ರೂಪ ವಸುಂಧರ ಆಚರ್ಯ ಪಡುಬಿದ್ರಿ, ಸಂಘಟನೆ ವಿಭಾಗದಲ್ಲಿ ಸಿದ್ರಾಮ ಮಹದೇವ ನಿಲಜಗಿ ಬ್ಯಾಕೋಡ ಬೆಳಗಾವಿ, ರೇಡಿಯೋ ಆರ್ ಜೆ ವಿಭಾಗಕ್ಕೆ ಅಭಿಷೇಕ್ ಜೆ ಶೆಟ್ಟಿ ಪಡೀಲ್ ಮಂಗಳೂರು ಇವರಿಗೆ ದೊರಕಲಿದೆ.
ಅದೇ ರೀತಿ ಸಿನಿಮಾ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಟ್ಯಾಟ್ಸನ್ ಪಿರೇರಾ, ಛಾಯಾಗ್ರಹಣ ಮಾಧ್ಯಮ ಸೇವಚೆ ಬಾಲಕೃಷ್ಣ ಶೆಟ್ಟಿ ಹೆಬ್ರಿ, ದೇವಾಲಯ ಕಾಷ್ಟ ಶಿಲ್ಪ ವಿಭಾಗದಲ್ಲಿ ಉಮಾ ದರ ವಿಶ್ವಕರ್ಮ ಕಾರ್ಕಳ, ಸಿನಿಮಾ ವಿಭಾಗದಲ್ಲಿ ಸಚಿನ್ ಪ್ರಕಾಶ ನಾಯಕ್ ಮಂಗಳೂರು, ಕ್ರೀಡೆ ಹಾಗೂ ಸಂಘಟನೆ ವಿಭಾಗದಲ್ಲಿ ಭಾರತಿ ಎಚ್. ಎಲ್ ಹಾಸನ, ಮಕ್ಕಳ ಪ್ರೋತ್ಸಾಹ ಪದ್ಮಶ್ರೀ ನಿಡ್ಡೋಡಿ ಕಿನ್ನಿಗೋಳಿ ಅವರಿಗೆ ದೊರಕಲಿದೆ. ಹಾಗೂ ಭರತನಾಟ್ಯ ವಿಭಾಗದಲ್ಲಿ ಶುಭ್ರತಾ ಪಿ ಚನ್ನರಾಯಪಟ್ಟಣ ಕವಿತೆ ಮತ್ತು ನಿರೂಪಣೆ ವಿಭಾಗದಲ್ಲಿ ಚೈತ್ರ ಕಬ್ಬಿನಾಲೆ ಹೆಬ್ರಿ ಇವರಿಗೆ ಕರ್ನಾಟಕ ಯುವ ರತ್ನ ಪ್ರಶಸ್ತಿ ದೊರಕಲಿದೆ.

ಸ್ಪೇರ್ ಹೆಡ್ ಮೀಡಿಯ ಗ್ರೂಪ್ ನ ಸಂಪಾದಕ ಶ್ರೀನಿವಾಸ ಪೆಜತ್ತಾಯ ಮಂಗಳೂರು ಇವರಿಗೆ ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಿಂದ ಕರ್ನಾಟಕ ಯುವ ರತ್ನ ಪ್ರಶಸ್ತಿ ದೊರಕಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು