Categories: ಮಂಗಳೂರು

ಸ್ವಾತಂತ್ರ‍್ಯದ ಇತಿಹಾಸ ಸಾರಿದ “ಸಮನ್ವಯ ಕವಿ ಸಮ್ಮೇಳನ”

ಅಖಿಲ ಭಾರತ ಸಾಹಿತ್ಯ ಪರಿಷತ್ ಅಧಿವೇಶನದಲ್ಲಿ ಬಹುಭಾಷಾ ಕವಿಗೋಷ್ಟಿ

ಉಜಿರೆ ಮಾ ೨೦: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ ೩ನೆಯ ರಾಜ್ಯ ಅಧಿವೇಶನದ ‘ಸಮನ್ವಯ ಕವಿ ಸಮ್ಮಿಲನ’ ಕಾರ್ಯಕ್ರಮ ಭಾನುವಾರದಂದು ಜರುಗಿತು. ಕವಿಗೋಷ್ಠಿಯಲ್ಲಿ ಒಟ್ಟು ೧೮ ಕವಿಗಳು ಕನ್ನಡ, ತುಳು, ತೆಲುಗು, ಕೊಡವ, ಮಲಯಾಳಂ ಮರಾಠಿ, ಅರೆಭಾಷೆ, ಸಂಸ್ಕೃತ ಮತ್ತು ಕೊಂಕಣಿ ಭಾಷೆಗಳಲ್ಲಿ ಸ್ವರಚಿತ ಕವನ ವಾಚಿಸಿದರು. ಸ್ವಾತಂತ್ರಯ -ಸ್ವರಾಜ್ಯ ಎಂಬ ಮೂಲ ಆಶಯವನ್ನು ಬಿಂಬಿಸಿದ ಕವನಗಳು ಸಾಹಿತ್ಯಾಸಕ್ತರಿಗೆ ಮುದನೀಡಿದವು.

ತುಳು ಭಾಷಾ ಕವಯಿತ್ರಿ ಅನಿತಾ ಪೂಜಾರಿ ‘ಅಕ್ಷರ’ ಎಂಬ ಶೀರ್ಷಿಕೆಯಡಿ ಕವನ ವಾಚಿಸಿದರು. ಅಕ್ಷರವು ರಕ್ತಕ್ಕಿಂತಲೂ ಹರಿತವಾದುದು. ಅಕ್ಷರವು ಶುದ್ಧ ಸಮಾಜವನ್ನು ನಿರ್ಮಿಸುತ್ತದೆ. ಅಕ್ಷರದೊಂದಿಗೆ ನುಡಿ ಸಾಮ್ರಾಜ್ಯವನ್ನು ನಿರ್ಮಿಸಬೇಕು ಎಂಬ ಸಾರ ಅವರ ಕವನದಲ್ಲಿ ಧ್ವನಿಸಿತ್ತು . ಅವಧಾನಿ ಸೂರ್ಯ ಹೆಬ್ಬಾರ್, ಸಂಸ್ಕೃತ ಭಾಷೆಯಲ್ಲಿ ಸ್ವಾತಂತ್ರ‍್ಯ ಮತ್ತು ರಾಷ್ಟ್ರ ರಕ್ಷೆಯ ಆಶಯವನ್ನು ಬಿಂಬಿಸುವ ಕವಿತೆಯನ್ನು ವಾಚಿಸಿದರು. ಭಾರತಕ್ಕೆ ಬ್ರಿಟಿಷರು ಬರುವ ಮುನ್ನ ಹೇಗಿತ್ತು ಬ್ರಿಟಿಷರು ಭಾರತವನ್ನು ಯಾವ ಸ್ಥಿತಿಗೆ ತಲುಪಿದ್ದರು ಎಂಬುದು ಇವರ ಕವನದ ಭಾವಾರ್ಥವಾಗಿತ್ತು.

ನಮ್ಮಲ್ಲಿರುವ ವೈಮನಸುಗಳನ್ನು ಮರೆತು ನಾವೆಲ್ಲರು ಭಾರತೀಯರು ಎಂಬ ಭಾವದೊಂದಿಗೆ ಒಂದಾಗಿರಬೇಕು. ಕೈಗಳನ್ನು ಬೆಸೆದು ನಡೆಯುವಾಗ ಕಿವಿಯಲ್ಲಿ ವಂದೇ ಮಾತರಂ ಗೀತೆ ಮೊಳಗುತಿರಬೇಕು ಎಂಬುದು ಕವಯತ್ರಿ ಮೀನಾಕ್ಷಿ ರಾಮಚಂದ್ರರವರ ಮಲಯಾಳಂ ಭಾಷೆಯ ‘ಅಮ್ಮನೊಂದಿಗೆ ಒಂದು ಯಾತೆ’್ರ ಎಂಬ ಕವಿತೆಯ ಸತ್ವವಾಗಿತ್ತು.
ಸುಜಾತ ಹೆಗಡೆ, ತನ್ಮಯಿ ಪ್ರೇಮಕುಮಾರಿ, ವೆಂಕಟೇಶ್ ನಾಯಕ್, ಶ್ರೀವಿದ್ಯಾ, ಸೋಮಶೇಖರ ಕೆ ತುಮಕೂರು, ಪೂರ್ಣಿಮಾ ಸುರೇಶ್, ಹೃತ್ಪೂರ್ವಕ ಕೋರ್ನ, ಚಿನ್ಮಯಿ ಬೆಂಗಳೂರು, ಸುಭಾಷಿಣಿ, ಅಣ್ಣಪ್ಪ ಅರಬಗಟ್ಟೆ, ಸುಷ್ಮಾ, ಗುರುಪುತ್ರ, ಸ್ನೇಹ ಫಾತರಫೇಕರ, ಮೀನಾಕ್ಷಿ ರಾಮಚಂದ್ರ ಮತ್ತ ಪರಿಣಿತ ರವಿ ತಮ್ಮ ಕವಿತೆಗಳನ್ನು ವಾಚಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಮಾ ವಸಂತ ಸಾವಂತ್ ಮಾತನಾಡಿ, ಕಾವ್ಯದ ಮೂಲಕ ಸಮಾಜಿಕ ಜಾಗೃತಿ ಮೂಡಿಸಬಹುದು, ಭಾಷಣಗಳಿಗಿಂತ ಕವಿತೆ ಜನರನ್ನು ಬೇಗ ತಲುಪುತ್ತದೆ. ಸನಾತನ ಧರ್ಮ ಮತ್ತು ಸರ್ವಜನಾಂಗದ ತೊಟ್ಟಿಲಾಗಿರುವ ಭಾರತ ಕವಿಗಳ ನಾಡಾಗಿದ್ದು ಪ್ರತಿ ಇತಿಹಾಸವೂ ಕವಿಗಳ ಮೂಲಕವೇ ದಾಖಲೆಗೊಂಡಿದೆ ಎಂದರು. ಸಮಾನ ಭಾಷೆಗಳ ಸಾಕ್ಷೀಕರಣದ ಸಮನ್ವಯವಾಗಿ ಕವಿಗೋಷ್ಠಿ ಜರುಗಿತು. ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಬೆಂಗಳೂರು ಮತ್ತು ತುಮಕೂರು ವಿಭಾಗದ ಸಂಯೋಜಕ ತಿಮ್ಮಣ್ಣ ಭಟ್ ನಿರೂಪಿಸಿದರು.

Sneha Gowda

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

6 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

7 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

7 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

7 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

8 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

9 hours ago