ಮಂಗಳೂರು

ವ್ಯವಹಾರದಲ್ಲಿ‌ ಬದ್ಧತೆ ಇದ್ದರೇನೆ ಯಶಸ್ಸು: ಎನ್‌. ಶಶಿಕುಮಾರ್

ಬೆಳ್ತಂಗಡಿ: ವ್ಯವಹಾರದಲ್ಲಿ‌ ಬದ್ಧತೆ ಇದ್ದರೇನೆ ಯಶಸ್ಸು. ಗ್ರಾಹಕರ‌‌ ಮನೋಭಾವಕ್ಕನುಗುಣವಾಗಿ ನಮ್ಮ ವೃತ್ತಿಯಲ್ಲಿ‌ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ ಎಂದು ದ.ಕ.ಜಿಲ್ಲಾ ಪೋಲಿಸ್ ಕಮಿಶನರ್ ಎನ್‌. ಶಶಿಕುಮಾರ್ ಹೇಳಿದರು.

ಅವರು, ಬುಧವಾರ ಉಜಿರೆ ರುಡ್ ಸೆಟ್ಯಲ್ಲಿ ಮೆನ್ಸ್ ಪಾರ್ಲರ್ ಮತ್ತು‌ ಸೆಲೂನ್ ಉದ್ಯಮಿಗಳ 30 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ತರಬೇತುಗೊಂಡವರಿಗೆ ಪ್ರಮಾಣ ಪತ್ರಗಳನ್ನು‌ ವಿತರಿಸಿ ಮಾತನಾಡಿದರು.

ಗ್ರಾಹಕರ ತೃಪ್ತಿಯೇ ನಮಗೆ ಆಧಾರ. ಸೆಲೂನ್‌ಗೆ ಬರುವವರಲ್ಲಿ ಚೆನ್ನಾಗಿ ಮಾತನಾಡಿ, ಸೆಳೆಯುವುದೂ ಒಂದು ಕಲೆಯೇ ಆಗಿದೆ. ಸ್ವಂತ ಉದ್ಯೋಗ ಮಾಡುವುದರಿಂದ ತನಗೆ ಮಾತ್ರವಲ್ಲದೆ ತನ್ನನ್ನು ನೆಚ್ಚಿಕೊಂಡ ಕುಂಟುಂಬಕ್ಕೂ ಸ್ಥೈರ್ಯ ತುಂಬುತ್ತದೆ. ಕೇವಲ ಬೆಳಿಗ್ಗೆ ಕಚೇರಿಗೆ ತೆರಳಿ, ಸಂಜೆ‌ ಮರಳಿ ಬರುವುದರಲ್ಲಿಯೇ ಜೀವನ ಕಳೆದು ಹೋಗಬಾರದು. ಸ್ವ ಉದ್ಯೋಗವು ಸೃಜನಶೀಲತೆಗೆ ದಾರಿಮಾಡಿಕೊಡುತ್ತದೆ ಎಂದ ಅವರು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದ ರುಡ್‌ಸೆಟಿಯಿಂದ‌ ಬಡತನದ ವಿಮೋಚನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ರುಡ್ ಸೆಟ್ಯ ಕಾರ್ಯನಿರ್ವಾಹಕ‌ ನಿರ್ದೇಶಕ ಗಿರಿಧರ ಕಲ್ಲಾಪುರ ವಹಿಸಿದ್ದರು. ವೇದಿಕೆಯಲ್ಲಿ ಕೇಶ ಶೃಂಗಾರ ಸಂಸ್ಥೆ “ಸ್ಪಿನ್” ಸಹಸಂಸ್ಥಾಪಕ ಮಹೇಶ್, ತರಬೇತುದಾರರಾದ ನವೀನ್, ಶ್ರೀನಿವಾಸ, ರುಡ್‌ಸೆಟಿ ನಿರ್ದೇಶಕ ಎಮ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ತರಬೇತಿಯಲ್ಲಿ 35 ಮಂದಿ ಭಾಗವಹಿಸಿದ್ದರು. ನಾಗೇಂದ್ರ ಹಾಗೂ ವಿರೂಪಾಕ್ಷ ಅನಿಸಿಕೆ‌ ವ್ಯಕ್ತಪಡಿಸಿದರು. ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಾಹಂ ಸ್ವಾಗತಿಸಿ, ಕಾರ್ಯಕ್ರಮ‌ ನಿರ್ವಹಿಸಿದರು. ಉಪನ್ಯಾಸಕಿ ಅನಸೂಯಾ ವಂದಿಸಿದರು.

Gayathri SG

Recent Posts

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

17 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

33 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

1 hour ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

1 hour ago

ಕಿಯಾ ಕಾರಿಗೆ ಅಡ್ಡ ಬಂದ ಕುದುರೆ: ಸರಣಿ ಅಪಘಾತ

ಕುದುರೆಯೊಂದು ಏಕಾಏಕಿ ಕಿಯಾ ಕಾರಿಗೆ ಅಡ್ಡ ಬಂದ ಕಾರಣ ಸರಣಿ ಅಪಘಾತ ಸಂಭಿಸಿರೋ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್…

1 hour ago

ಹಿರಿಯಡ್ಕ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

1 hour ago