Categories: ಮಂಗಳೂರು

ವೆನ್ಲಾಕ್ ಆಸ್ಪತ್ರೆಯಲ್ಲಿ ಸುಸಜ್ಜಿತ ಆಮ್ಲಜನಕ ಘಟಕ ಕಾರ್ಯಾರಂಭ

ಮಂಗಳೂರು: ಪ್ರಧಾನಿಯವರ ಆಶಯದಂತೆ ದಕ್ಷಿಣ ಕನ್ನಡ ಜಿಲ್ಲೆ ಸುಸಜ್ಜಿತವಾದ ಮತ್ತು ಶಾಶ್ವತವಾದ ಆಕ್ಸಿಜನ್ ಘಟಕವನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 16 ವೈದ್ಯಕೀಯ ಆಮ್ಲಜನಕ ಘಟಕಗಳ ಪೈಕಿ ವೆನ್ಲಾಕ್‌ನಲ್ಲಿ ಬೃಹತ್ ಗಾತ್ರದ (ಒಂದು ಸಾವಿರ ಲೀಟರ್ ಪರ್ ಮಿನಿಟ್ ) ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕ ಘಟಕವನ್ನು ಗುರುವಾರ ಲೋಕಾರ್ಪಣೆಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅರ್ಹ ರೋಗಿಗಳಿಗೆ ಇದರ ಪ್ರಯೋಜನ ಲಭಿಸಲಿದೆ ಎಂದು ಸಂಸದ ನಳಿನ್ ಕಟೀಲ್ ಹೇಳಿದ್ದಾರೆ.

ಆಮ್ಲಜನಕ ಘಟಕ ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಕೋವಿಡ್ ನಂತಹ ಯಾವುದೇ ಮಾರಕ ಕಾಯಿಲೆ ಎದುರಾದರೂ ಅದನ್ನು ಎದುರಿಸಲು ವೆನ್ಲಾಕ್ ಸಜ್ಜಾಗಿದೆ. ಅಗತ್ಯವಾದ ವೆಂಟಿಲೇಟ‌ರ್ , ಬೆಡ್ ವ್ಯವಸ್ಥೆ, ಆಕ್ಸಿಜನ್ ಘಟಕ ಎಲ್ಲವೂ ಇಲ್ಲಿದೆ. ಖಾಸಗಿ ಆಸ್ಪತ್ರೆಗಳಂತೆ ಗುಣಮಟ್ಟದ ಚಿಕಿತ್ಸೆ ವೆನ್ಲಾಕ್ ನಲ್ಲಿ ದೊರೆಯುತ್ತಿದೆ ಎಂದರು.

ಕೋವಿಡ್ ಎರಡನೇ ಅಲೆಯ ಸಂದರ್ಭ ಕೋವಿಡ್ ಸೋಂಕಿತ ರೋಗಿಗಳಿಗೆ ಆಮ್ಲಜನಕದ ಕೊರತೆ ಎದುರಾಗಿತ್ತು. ಕೊಚ್ಚಿ ಮತ್ತು ಬಳ್ಳಾರಿಯಿಂದ ಆಮ್ಲಜನಕ ತರಿಸಲಾಗಿತ್ತು. ಆದರೆ ಕೇರಳದಲ್ಲಿ ಅಮ್ಲಜನಕ ಕೊರತೆಯಾದ ಕಾರಣ ಕೊಚ್ಚಿಯಿಂದ ತರುವುದನ್ನು ನಿಲ್ಲಿಸಲಾಯಿತು. ಬಳ್ಳಾರಿಯಿಂದ ತರಿಸಲು ಟ್ಯಾಂಕರ್‌ ಸಮಸ್ಯೆ ಎದುರಾಗಿತ್ತು. ಆದ್ದರಿಂದ ಜಿಲ್ಲೆಯಲ್ಲಿಯೇ ಆಮ್ಲಜನಕ ಘಟಕ ಸ್ಥಾಪಿಸಲು ನಿರ್ಧರಿಸಲಾಯಿತು ಎಂದರು.

ಮೊದಲ ಅಮ್ಲಜನಕ ಘಟಕ ವೆನ್ಲಾಕ್ ನಲ್ಲಿ ಕಾರ್ಯಾರಂಭಿಸಲು ಆರಂಭಿಸಿದೆ. ಉಳಿದ 15ಕಡೆಯೂ ಶೀಘ್ರವೇ ಘಟಕ ಸಿದ್ಧವಾಗಲಿದೆ. ತಾಲೂಕು ಕೇಂದ್ರಗಳನ್ನು ಸೇರಿದಂತೆ ಉಪ್ಪಿನಂಗಡಿ, ವಾಮದಪದವು ಮುಂತಾದೆಡೆ ಘಟಕ ಆರಂಭಿಸಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Sneha Gowda

Recent Posts

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಗಾಡ್ ಪ್ರಾಮಿಸ್’ ಚಿತ್ರದ ಮುಹೂರ್ತ

ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ…

3 mins ago

ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಮೃತ್ಯು

ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.

14 mins ago

ಬಸವೇಶ್ವರ ಹಾಗೂ ಮಹಾನಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಆಚರಣೆ

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಜಗಜ್ಯೋತಿ ಬಸವೇಶ್ವರ ಹಾಗೂ ಮಹಾನಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ತಹಸೀಲ್ದಾ‌ರ್ ಮಲ್ಲಿಕಾರ್ಜುನ ಹೆಗ್ಗಣ್ಣವರವರು…

33 mins ago

ಶ್ರೀನಿವಾಸ್ ಪ್ರಸಾದ್ ಗೆ ನುಡಿ ನಮನ ಸಲ್ಲಿಸಿ ಕಣ್ಣೀರಿಟ್ಟ ಬದನವಾಳು ಗ್ರಾಮಸ್ಥರು

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಸಾದ್ ನೆನೆದು…

44 mins ago

ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯಿಂದ ʼಅಕ್ಷಯ ಅನ್ನʼ ಕಾರ್ಯಕ್ರಮ

ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ‌…

56 mins ago

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ‘ಎ’ ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು…

1 hour ago