News Karnataka Kannada
Monday, April 29 2024
ಮಂಗಳೂರು

ಮುಖ ವಿರೂಪವಿದ್ದ ಬಾಲಕನಿಗೆ ಟಿಎಂಜೆ ಶಸ್ತ್ರಚಿಕಿತ್ಸೆ: ವೈದ್ಯರ ಪ್ರಯತ್ನ ಯಶಸ್ವಿ

Kmc
Photo Credit : News Kannada

ಮಂಗಳೂರು: ಮುಖ ವಿರೂಪವಾದ 10 ವರ್ಷದ ಬಾಲಕನಿಗೆ ಟೆಂಪೊರೋಮ್ಯಾಂಡಿಬ್ಯೂಲರ್ ಜಾಯಿಂಟ್ (ಟಿಎಂಜೆ) ಎಂಬ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ದೇಶದಲ್ಲಿ ಮಾಡಿದ ಮೊಟ್ಟಮೊದಲ ಶಸ್ತ್ರಚಿಕಿತ್ಸೆ ಆಗಿದ್ದು, ಇದು ಯಶಸ್ವಿಯಾಗಿ ನಡೆದು ಬಾಲಕನ ಮುಖದಲ್ಲಿ ವಿರೂಪ ಸರಿಯಾಗಿದೆ.

ಬಹರೈನ್​ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಟುಂಬದ ಮಗುವಿಗೆ ಜನಿಸಿದ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಸಮಸ್ಯೆ ಆರಂಭವಾಗಿತ್ತು. ಎಂಜಲಿನ ಕೋಶದಲ್ಲಿ ಉಂಟಾದ ಇನ್ಪೆಕ್ಸನ್​ನಿಂದ ಬಾಲಕನಿಗೆ ಪ್ಯಾರೊಟಿಡ್ ಆಬ್ಸಸ್ ರೂಪದಲ್ಲಿ ಆರಂಭವಾದ ಸಮಸ್ಯೆ ಬೆಳೆಯುತ್ತಾ ಹೋದಂತೆ ಆಂಕಿಲೋಸಿಸ್​ಗೆ ಮಾರ್ಪಟ್ಟಿತ್ತು.

ಮಗುವಿನ ಕೆಳದವಡೆಯಲ್ಲಿ ಬೆಳವಣಿಗೆಯಿಲ್ಲದೆ ಮಗುವಿನ ಮುಖ ವಿರೂಪಗೊಂಡಿತ್ತು. ಬಾಲಕನಿಗೆ ಬಾಯಿ ತೆರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ದ್ರವ ರೂಪದ ಆಹಾರವನ್ನು ಮಾತ್ರ ಸೇವಿಸಲು ಸಾಧ್ಯವಾಗುತ್ತಿತ್ತು. ಬಾಲಕನ ಸಮಸ್ಯೆ ಪರಿಹರಿಸಲು ಪೋಷಕರು ದೇಶದ ವಿವಿಧ ಆಸ್ಪತ್ರೆಗಳಿಗೆ ಹೋದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಬಂದ ಪೋಷಕರಿಗೆ ಹೊಸ ಭರವಸೆ ಸಿಕ್ಕಿತು.

ಮುಖ ವಿರೂಪವಿದ್ದ ಬಾಲಕನಿಗೆ ಟಿಎಂಜೆ ಶಸ್ತ್ರಚಿಕಿತ್ಸೆ ನೀಡಿರುವ ಕುರಿತಂತೆ ವೈದ್ಯರು ಮಾಹಿತಿ ನೀಡಿರುವುದು..
ಚಿಕಿತ್ಸೆಯ ಬಗ್ಗೆ ತಂಡದ ಮೂಲಕ ಚರ್ಚಿಸಿದ ಡಾ.ಅಭಯ ಕಾಮತ್ ನೇತೃತ್ವದ ವೈದ್ಯರ ತಂಡ, ಭಾರತದ ಮೊಟ್ಟಮೊದಲ ಟಿಎಂಜೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ಹಲವಾರು ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡ ಸಂಪೂರ್ಣ ಶಸ್ತ್ರಚಿಕಿತ್ಸೆಯಲ್ಲಿ ಕೆಳದವಡೆಯಲ್ಲಿ ಬೆಳವಣಿಗೆಗೆ ಅಗತ್ಯವಿರುವ ಪಕ್ಕೆಲುಬುಗಳನ್ನು ಬಳಸಿ, ಕೆಳಮಟ್ಟದ ಮೂಳೆಯನ್ನು ಹೊರತೆಗೆದು ಸ್ನಾಯುಗಳನ್ನು ನಡುವೆ ಜೋಡಿಸಿ ಅಂತರವನ್ನು ಸೃಷ್ಟಿಸಲಾಗಿತ್ತು.

ಇದರ ಜೊತೆಗೆ ಹೆಚ್ಚುವರಿಯಾಗಿ ಡಿಸ್ಟ್ರಾಕ್ಷನ್ ಓಸ್ಟಿಯೋಜೆನಿಸಿಸ್ ಬಳಸಿ ಮೂಳೆಗಳ ಉದ್ದವನ್ನು ಹೆಚ್ಚಿಸುವ ಚಿಕಿತ್ಸೆ ಮಾಡಲಾಯಿತು. ಬಾಲಕನಿಗೋಸ್ಕರ ಯುಎಸ್‌ಎಯ ಅಟ್ಲಾಂಟದ ಜಾಕ್ಸನ್ ವಿಲೆಯಿಂದ ತಯಾರಿಸಿದ ಜೋಡಣೆಯನ್ನು ತಂದು ಅಳವಡಿಸಲಾಯಿತು. ಈ ಚಿಕಿತ್ಸೆ ನಡೆದು ಆರು ತಿಂಗಳಾಗಿದ್ದು, ಎಲ್ಲಾ ಪರಿಶೀಲನೆಯ ಬಳಿಕ ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಯಶಸ್ವಿ ಎಂದು ಪರಿಗಣಿಸಲಾಗಿದೆ. ಇದೀಗ ಬಾಲಕನು 30 ಎಂಎಂವರೆಗೆ ಬಾಯಿ ಅಗಲಿಸಲು ಸಫಲನಾಗಿದ್ದಾನೆ. ಬಾಲಕನಿಗೆ ಆದ ಯಶಸ್ವಿ ಶಸ್ತ್ರಚಿಕಿತ್ಸೆ ಹೆತ್ತವರಲ್ಲಿ ಖುಷಿ ಮೂಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು