ಮಂಗಳೂರು

ಮಾ.19-20 ರಂದು ಉಜಿರೆಯಲ್ಲಿ ಅ.ಭಾ.ಸಾ.ಪ 3ನೇ ರಾಜ್ಯ ಮಟ್ಟದ ಅಧಿವೇಶನ

ಉಜಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ 3 ನೇ ರಾಜ್ಯ ಮಟ್ಟದ ಅಧಿವೇಶನ ಮಾ. 19 ಮತ್ತು 20 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ “ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ” ಪರಿಕಲ್ಪನೆಯಲ್ಲಿ ನಡೆಯಲಿದ್ದು, ವಿವಿಧ ಸಮಿತಿ,ಉಪಸಮಿತಿಗಳ ನೇತೃತ್ವದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದ್ದು, ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಎಲ್ಲರಿಗು ಗೊತ್ತಿದ್ದು ,ಇಲ್ಲಿಯ ಅಚ್ಚುಕಟ್ಟುತನ ,ಸಂಘಟನಾ ಚತುರತೆ ,ಯಶಸ್ವಿಗೊಳಿಸುವ ಸಂಕಲ್ಪಶಕ್ತಿ ಯಿಂದ ಕಾರ್ಯಗಳು ಅಂತಿಮ ಹಂತ ತಲುಪಿದ್ದು ಸಂಘಟಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಎಲ್ಲರ ನಿರೀಕ್ಷೆ ,ಆತ್ಮವಿಶ್ವಾಸದಿಂದ ಉಜಿರೆಯ ಅಧಿವೇಶನ ಯಶಸ್ವಿಯಾಗಿ ನೆನಪಿನಲ್ಲಿ ಅಜರಾಮರವಾಗಿ ಉಳಿಯುವಂತಾಗಲಿ ಎಂದು ಅ .ಭಾ .ಸಾ .ಪ .ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಅವರು ಮಾ 13 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ಅ .ಭಾ .ಸಾ .ಪ .3 ನೇ ರಾಜ್ಯ ಮಟ್ಟದ ಅಧಿವೇಶನದ ಅಂತಿಮ ತಯಾರಿ ಬಗ್ಗೆ ನಡೆದ ವಿವಿಧ ಸಮಿತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಭೆಯಲ್ಲಿ ಅಧಿವೇಶನದ ಸ್ವಾಗತ ಸಮಿತಿ ,ಅತಿಥಿ ಸತ್ಕಾರ ಸಮಿತಿ ,ವಿವಿಧ ಗೋಷ್ಠಿಗಳು ,ನೋಂದಾವಣೆ ,ವಸ್ತು ಪ್ರದರ್ಶನ ,ಸ್ವಯಂ ಸೇವಕರು ,ವೇದಿಕೆ ನಿರ್ವಹಣೆ,ಆರ್ಥಿಕ ,ವಾಹನ ಪಾರ್ಕಿಂಗ್ , ಸಾಂಸ್ಕೃತಿಕ ಕಾರ್ಯಕ್ರಮ ,ಫೇಸ್ ಬುಕ್ ಲೈವ್ , ಮಾಧ್ಯಮ ಮೊದಲಾದ ವಿವಿಧ ವಿಭಾಗಗಳ ಪ್ರಗತಿ ಬಗೆಗೆ ವಿಭಾಗ ಪ್ರಮುಖರು ಮಾಹಿತಿ ನೀಡಿ ಅಧಿವೇಶನ ಸಂಚಾಲಕ ನಾರಾಯಣ ಶೇವಿರೆ ಅವರು ಸೂಕ್ತ ಸಲಹೆ ,ಸೂಚನೆ ನೀಡಿ ಗುಣಮಟ್ಟದ ದೃಷ್ಟಿಯಲ್ಲಿ ಅಧೀವೇಶನ ಪೂರ್ಣ ಯಶಸ್ವಿಯಾಗುವಂತೆ ಮಾರ್ಗದರ್ಶನ ನೀಡಿದರು .

ಅ.ಭಾ.ಸಾ.ಪ. ರಾಜ್ಯ ಉಪಾಧ್ಯಕ್ಷ ರಘುನಂದನ ಭಟ್, ಉಜಿರೆಯ ವಿನಯಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ ಕ.ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ|ಶ್ರೀಧರ ಭಟ್ , ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರಕಾಶ ನಾರಾಯಣ , ರಾಜ್ಯ ಕಾರ್ಯದರ್ಶಿ ಡಾ|ಮಾಧವ ಎಂ .ಕೆ ,ತಾಲೂಕು ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಕಾರ್ಯದರ್ಶಿ ರಮೇಶ್ ಮಯ್ಯ ಉಪಸ್ಥಿತರಿದ್ದರು. ಡಾ| ರವಿ ಎಂ. ಎನ್ . ಸ್ವಾಗತಿಸಿ, ವಂದಿಸಿದರು. ಕೇಶವ ಭಟ್ ಅತ್ತಾಜೆ, ಲಕ್ಸ್ಮಿನಾರಾಯಣ, ಭಾಸ್ಕರ ಹೆಗ್ಡೆ, ವಿದ್ಯಾ ಅಡೂರು, ಸುನಿಲ್ ಪಂಡಿತ್ , ನವೀನ ನೆರಿಯ, ನಾರಾಯಣ ಫಡಕೆ, ವನಿತಾ ಶೆಟ್ಟಿ, ಕೃಷ್ಣ ಶೆಟ್ಟಿ , ಸೀತಾರಾಮ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

Sneha Gowda

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

6 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

7 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

7 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago