News Karnataka Kannada
Monday, April 29 2024
ಮಂಗಳೂರು

ಮಾಸ್ಕ್ ಧರಿಸಿ; ಸರಿಯಾಗಿ ಧರಿಸಿ ಅಭಿಯಾನಕ್ಕೆ ಚಾಲನೆ

Mangalore
Photo Credit :
ಮಂಗಳೂರು : ಮಾಸ್ಕ್ ಧರಿಸಿ: ಸರಿಯಾಗಿ ಧರಿಸಿ  ಎಂಬ ಅಭಿಯಾನವನ್ನು ಜಿಲ್ಲಾಡಳಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೆಡ್ ಕ್ರಾಸ್ ವತಿಯಿಂದ ನಗರದ  ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಜ. 10 ಸೋಮವಾರ ಹಮ್ಮಿಕೊಳ್ಳಲಾಗಿತ್ತು.
 ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಅವರು ಕಾರ್ಯಕ್ರಮದಲ್ಲಿ ಮಾಸ್ಕ್ ವಿತರಿಸಿ, ಕೋವಿಡ್ ವಿರುದ್ದದ ಸಂಗ್ರಾಮದಲ್ಲಿ ಕಡ್ಡಾಯವಾಗಿ ಮಾಸ್ ಧರಿಸಲೇಬೇಕು, ಅದು ಕೂಡ ಸರಿಯಾಗಿ ಧರಿಸಬೇಕು, ಆ ಮೂಲಕ ಜಿಲ್ಲೆಯ ಎಲ್ಲರೂ ಕೋವಿಡ್ ಹರಡದಂತೆ ಸಹಕರಿಸಬೇಕು ಎಂದರು.
ಈ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಮಾಧ್ಯಮಗಳು ಪ್ರತಿಯೊಬ್ಬರಲ್ಲಿಯೂ ಹೊಣೆಗಾರಿಕೆಯನ್ನು ಮೂಡಿಸುತ್ತಿವೆ, ಆ ಮೂಲಕ ಯಶಸ್ವಿಯಾಗಿ ಹಾಗೂ ಸುಲಭವಾಗಿ ನಾಗರೀಕರಲ್ಲಿ ಅರಿವು ಮೂಡಿಸಬಹುದಾಗಿದೆ, ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಅವರ ಆರೋಗ್ಯದ ಹಿತದ ಮುನ್ನೇಚ್ಚರಿಕಾ ಕ್ರಮಗಳಿಗಾಗಿ ವಾರಾಂತ್ಯ ಕಫ್ರ್ಯೂ ವಿಧಿಸಲಾಗಿದೆ, ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಜನರ ಸಹಕಾರ ಅಗತ್ಯ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ,  ಜನರಲ್ಲಿ ಈಗಾಗಲೇ ಈ ಸೋಂಕು ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿದೆ,  ಆದಾಗ್ಯೂ, ಕೆಲವರು ಗುಂಪುಗಳಲ್ಲಿ  ಸೇರುವುದು, ಸಾಮಾಜಿಕ ಅಂತರ ವಹಿಸದೇ  ಇರುವುದು ಬಗ್ಗೆ ಜಿಲ್ಲಾಡಳಿತದಿಂದ ಅರಿವು ಮೂಡಿಸಲಾಗುತ್ತಿದೆ, ಇದಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೆಡ್ ಕ್ರಾಸ್ ಕೈ ಜೋಡಿಸಿರುವುದು ಸ್ವಾಗತಾರ್ಹ  ಎಂದು ಹೇಳಿದರು.
ಕೋವಿಡ್ ಸೋಂಕು ಹರಡದಂತೆ ಮಾಸ್ಕ್ ಅನ್ನು ಮೂಗು ಮುಚ್ಚುವ ಹಾಗೆ ಸರಿಯಾಗಿ ಧರಿಸಬೇಕು,  ಬಾಯಿಯ ಕೆಳಗೆ ಅಥವಾ ಗಂಟಲಿಗೆ ಹಾಕಿಕೊಳ್ಳಬಾರದು,  ಪರಸ್ಪರ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಹಾಗೂ ಆಗಾಗ್ಯೆ ಸ್ಯಾನಿಟೈಸರ್ ಬಳಕೆ ಅತ್ಯುತ್ತಮ ಮಾರ್ಗಗಳಾಗಿವೆ, ಬಸ್ಸುಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು,  ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು,  ಏಕೆಂದರೆ ತಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುತ್ತಾರೆ, ಅದನ್ನು ಸರ್ಕಾರದಿಂದ ಅನುಷ್ಠಾನ ಗೊಳಿಸಲಾಗುತ್ತದೆ,  ಓಮಿಕ್ರೋನ್ ತಡೆಗಟ್ಟಲು ಸಾಮಾಜಿಕ ಅಂತರ, ಮಾಸ್ಕ್  ಧಾರಣೆ, ವ್ಯಾಕ್ಸಿನೇಷನ್ ಪಡೆಯಬೇಕು, ಲಾಕ್ ಡೌನ್ ನಿಂದ ಪಾರಾಗಲು ವ್ಯಾಪಾರಸ್ಥರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು, ರೋಗ ಲಕ್ಷಣಗಳು  ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆದು, ಕ್ವಾರಂಟೈನ್ ಗೆ ಒಳಗಾಗಬೇಕು,  ಜಿಲ್ಲೆಯಲ್ಲಿ ಕೋವಿಡ್ ನ ಹೆಚ್ಚು ಪ್ರಕರಣಗಳು ವರದಿಯಾದಲ್ಲಿ ನಾಗರೀಕರು ಭಯಪಡುವ ಅಗತ್ಯವಿಲ್ಲ, ಏಕೆಂದರೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಮದುವೆ, ಜಾತ್ರೆ ಸೇರಿದಂತೆ ಜನ ಜನಸಂದಣಿ ಸೇರುವ ಸ್ಥಳಗಳಿಗೆ ಹೋಗಬಾರದು,  ಮಾಸ್ಕ್ ನ ಹೊರಪದರವನ್ನು ಪದೇಪದೇ ಹುಟ್ಟಬಾರದು, ಮಾಸ್ ಧರಿಸುವ ಮೂಲಕ ಕೋವಿಡ್ ಅನ್ನು ಗೆಲ್ಲಬೇಕು ಎಂದು ಹೇಳಿದರು.
 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್  ಇಂದಾಜೆ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,   ಹಿರಿಯ ಪತ್ರಕರ್ತರಾದ ಮಹಮ್ಮದ್ ಆರೀಫ್, ಪುಷ್ಪರಾಜ್, ಭಾಸ್ಕರ ರೈ, ಸುಖ ಪಾಲ್ ಪೊಳಲಿ , ರೆಡ್ ಕ್ರಾಸ್ ನ ಅಧ್ಯಕ್ಷರಾದ ಶಾಂತರಾಮ ಶೆಟ್ಟಿ, ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ,  ಕಾರ್ಯದರ್ಶಿ   ಕುಸುಮಾಧರ,ಮಾಜಿ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮ,ಕಾರ್ಯಕಾರಿ  ಸಮಿತಿ ಸದಸ್ಯ  ರವೀಂದ್ರ , ಮಂಗಳಾ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು