Categories: ಮಂಗಳೂರು

ಮಂಗಳೂರು: ಶಾಲಾ ವಿದ್ಯಾರ್ಥಿಗಳಿಗಾಗಿ ತಾರಸಿ ಕೃಷಿ ಪ್ರಾತ್ಯಕ್ಷಿಕೆ, ಸಸಿ ನೆಡುವ ಕಾರ್ಯಕ್ರಮ

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾಕೇಂದ್ರ , ಜಲ್ಲಿಗುಡ್ಡೆ ಇದರ ವಿಂಶತಿ ವರ್ಷಾಚರಣೆಯ ಸರಣಿ ಕಾರ್ಯಕ್ರಮ ಇಪ್ಪತ್ತೆರಡರನ್ವಯ ಸಂತ ಜೋಸೆಫರ ಪ್ರೌಢ ಶಾಲೆ, ಬಜಾಲ್ ನಲ್ಲಿ ವನಮಹೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ತಾರಸಿ ಕೃಷಿ ಪ್ರಾತ್ಯಕ್ಷಿಕೆ ಹಾಗೂ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜು. 8ರಂದು  ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಕೃಷ್ಣಪ್ಪ ಪಡ್ಡಂಬೈಲ್ ಮಕ್ಕಳಿಗೆ ತಾರಸಿಯಲ್ಲಿ ಕೃಷಿ ಮಾಡುವ ವಿಧಾನವನ್ನು ವಿವರಿಸಿ ಮಾಹಿತಿ ನೀಡಿದರು. ಈ ಸಂಧರ್ಭ ಕಲಾಕೇಂದ್ರದ ವತಿಯಿಂದ ಪಡ್ಡಂಬೈಲ್ ಅವರನ್ನು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಬಿ.ಪ್ರಕಾಶ್ ಪೈ. ಯವರು ಫಲಕ ಕಾಣಿಕೆ ಇತ್ತು ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು ಮನೆಯಲ್ಲಿಯೇ ತರಕಾರಿ ಬೆಳೆಸಿ ಆರೋಗ್ಯ ಕರ ಜೀವನ ನಿಮ್ಮದಾಗಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಭಾಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಅಧ್ಯಕ್ಷ ಕೆ.ಸಿ. ಹರಿಶ್ಚಂದ್ರ ರಾವ್ ವಹಿಸಿದ್ದರು ಅತಿಥಿಗಳಾಗಿ ಆತ್ಮಶಕ್ತಿ ಸಹಕಾರ ಸಂಘದ ಅದ್ಯಕ್ಷ ರಾದ ಚಿತ್ತರಂಜನ್ ಬೋಳಾರ್, ನಹರು ಯುವಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ., ಲಯನ್ಸ್ ಕೇಂದ್ರ ಸಂಘದ ಅಧ್ಯಕ್ಷ ರಾದ ಎಸ್. ಎಸ್. ಪೂಜಾರಿ , ಮುಖ್ಯೋಪಾಧ್ಯಾಯರಾದ ಲವಿಟಾ , ಶಾಲಾ ವ್ಯವಸ್ಥಾಪಕಿ ಭಗಿನಿ ಶೈಲಾ, ರಾಜೇಶ್ ವಿಕ್ಟರ್, ಶ್ರೀಮತಿ ಮಂಗಳಾ ನಂದ , ಶ್ರೀಮತಿ ದಿನಮಣಿ ಹಾಗೂ ಸಂಸ್ಥೆಯ ಗಂಗಾಧರ್ ರಾವ್, ಗಣೇಶ್ ಕೊಟ್ಟಾರಿ, ವಿದ್ಯಾ ಕೆ.,ಹಾಗೂ ಅಶೋಕ್ ಜಾದವ್ ಉಪಸ್ಥಿತರಿದ್ದರು.

ಟೀಚರ್ ಉಷಾ  ಸ್ವಾಗತಿಸಿ, ಶೋಭಾ ಹರೀಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂತೊಇಷ್ ಪಡೀಲ್ ಅ‌ಭಿನಂದನಾ ಭಾಷಣ ಮಾಡಿದರು. ಪ್ರತೀ ತರಗತಿ ನಾಯಕರುಗಳಿಗೆ ಸಸಿ ವಿತರಿಸಲಾಯಿತು. ಮಕ್ಜಳಿಂದ ಪರಿಸರ ನೃತ್ಯ, ಪರಿಸರ ಗೀತೆ ಹಾಗೂ ಪರಿಸರ ಭಾಷಣ ವ್ಯಯಏರ್ಪಡಿಸಲಾಗಿತ್ತು. ಆನಂದ ರಾವ್ ಕಾರ್ಯಕ್ರಮ ನಿರೂಪಿಸಿ ಸುಮಲತಾ ಧನ್ಯವಾದವಿತ್ತರು.

Ashitha S

Recent Posts

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

2 mins ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

16 mins ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

29 mins ago

ಜೂನಿಯರ್ ಎನ್​ಟಿಆರ್ ಜನ್ಮದಿನ : ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ.ಈ ವಿಶೇಷ ದಿನದಂದು ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್…

46 mins ago

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

1 hour ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

1 hour ago